ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.25:
ಬಸ್ ಚಾಲಕರ ಸೇವೆಯು ವಿಮಾನ ಪೈಲೆಟ್ಗಳಿಗಿಂತ ಮಿಗಿಲಾದ ಸೇವೆಯಾಗಿದೆ ಸ್ಥಳಿಯ ಘಟಕದ ಚಾಲಕರ ಎಲ್ಲಾಾ ಕಾರ್ಮಿಕರ ಸಮಸ್ಯೆೆಗಳಿಗೆ ಸ್ಪಂದಿಸಲು ಸದಾ ಸಿದ್ದವೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ಎರ್ಪಡಿಸಿದ ಚಾಲಕರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಚಾಲಕರು ಮಳೆ, ಚಳಿ, ಬಿಸಿಲು ಹಾಗೂ ಹಗಲು ರಾತ್ರಿಿ ತಮ್ಮ ಆರೋಗ್ಯವನ್ನು ಗಮನಿಸದೆ ನಿರಂತರ ಪೈಲೆಟ್ಗಿಂತಲೂ ಮಿಗಿಲಾಗಿ ಚಾಲಕರ ನಿರ್ವಾಹಕರು ಘಟಕದ ಕಾರ್ಮಿಕರು ನಿರಂತರ ಸೇವೆ ಪ್ರಶಂಸನಿಯ ಕಾರ್ಯವಾಗಿದೆ. ಸಾರಿಗೆಘಟಕ ಹಾಗೂ ಬಸ್ನಿಲ್ದಾಾಣದಲ್ಲಿ ಶುದ್ದ ಕುಡಿವನೀರಿನ ಘಟಕ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಕ್ಷೇತ್ರದ ಗ್ರಾಾಮೀಣ ಭಾಗದಲ್ಲಿ ಸಾರಿಗೆ ಸಮಸ್ಯೆೆಯಾಗದಂತೆ ನಿಗಾವಹಿಸಬೇಕು ಶಾಲಾ ಕಾಲೇಜುಗಳಿಗೆ ಸಮಯಕ್ಕೆೆ ವಿದ್ಯಾಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ಗಳನ್ನು ಓಡಿಸಬೇಕು, ಅವಧಿ ಮೀರಿದ ಬಸ್ ವಾಪಸ್ ಪಡೆದು ನೂತನ ಬಸ್ಗಳನ್ನು ತರಿಸುವ ವ್ಯವಸ್ಥೆೆ ಮಾಡಲಾಗುವುದು. ತಿರುಪತಿ, ಮಂಗಳೂರು, ಮೈಸೂರು ಸೇರಿ ದೂರದ ಊರುಗಳಿಗೂ ಸ್ಲೀಪರ್ ಬಸ್ ವ್ಯವಸ್ಥೆೆ ಕಲ್ಪಿಿಸಲು ಚಿಂತನೆ ನಡೆಸಲಾಗುತ್ತಿಿದೆ ಎಂದರು.
ಪತ್ರಕರ್ತರ ಪ್ರಶ್ನೆೆಗೆ ಉತ್ತರಿಸಿದ ಅವರು ಹಟ್ಟಿಿ ಪಟ್ಟಣದಲ್ಲಿ ನಾನು ಕಾಣೆಯಾಗಿದ್ದೆೆನೆಂದು ಪೋಸ್ಟರ್ ಬಿಡುಗಡೆ ಮಾಡಿ ನನ್ನ ವಿರುದ್ಧ ಅಪಪ್ರಚಾರ ನಡೆದಿದೆ ಸಮಸ್ಯೆೆಗಳಿದ್ದರೆ ನಮ್ಮನ್ನು ಭೇಟಿಯಾಗಿ ಬಗಿಹರಿಸಿ ಕೊಳ್ಳಬಹುದು ಹಟ್ಟಿಿ ಅಭಿವೃದ್ಧಿಿಗಾಗಿ ಹಣ ಕೋಟ್ಟಿಿಗಟ್ಟಲೇ ಹಣ ಖರ್ಚು ಮಾಡಿ ರಸ್ತೆೆ, ನೀರಿನಯೋಜನೆ, ಹೈಮಾಸ್ ಬೀದಿ ದೀಪಗಳು, ಜನರಿಗೆ ಮೂಲಸೌಲಭ್ಯವನ್ನು ಒದಗಿಸಿದ್ದೇನೆ. ಜನರ ಮೆಚ್ಚುಗೆ ಪಡೆದು ಕ್ಷೇತ್ರದಲ್ಲಿ ಮೂರು ಭಾರಿ ಶಾಸಕನಾಗಿ ನಿರಂತರವಾಗಿ ಕ್ಷೇತ್ರದ ಅಭಿವೃದ್ದಿಯಲ್ಲಿ ನಿರತನಾಗಿರುವೆ ಸಮಸ್ಯೆೆಗಳಿದ್ದರೆ ನೇರವಾಗಿ ಭೇಟಿಯಾಗಿ ಚರ್ಚಿಸಬಹುದು ಎಂದು ಶಾಸಕ ಮಾನಪ ವಜ್ಜಲ್ ತಿಳಿಸಿದರು. ಪಕ್ಷದ ಗಿರಿಮಲ್ಲನಗೌಡ ಪಾಟೀಲ್, ಜಿಲ್ಲಾಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಿಹಾಳ, ಮಂಡಲ ಬಿಜೆಪಿ ಅಧ್ಯಕ್ಷ ಕೆ.ನಾಗಭೂಷಣ್ ವೆಂಕನಗೌಡ ಐದನಾಳ, ಕೀರಪ್ಪ ಕುರಿ ಇತರರಿದ್ದರು.
ನಾನು ಕಾಣೆಯಾಗಿಲ್ಲ ಕ್ಷೇತ್ರದ ಅಭಿವೃದ್ದಿಯಲ್ಲಿ ಭಾಗಿ ಘಟಕದ-ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವೆ – ಮಾನಪ್ಪ ವಜ್ಜಲ್

