ದೇವನಹಳ್ಳಿ, ಏ.5: ರಾಜ್ಯದಲ್ಲಿ ಮನೆ ಮನೆ ಕುಮಾರಣ್ಣ ಎಂದು ಭರವಸೆಯನ್ನು ನೀಡುವಲ್ಲಿ ಯಶಸ್ವಿ ಪ್ರಚಾರವನ್ನು ಮಾಡಿರುವ ಹಿನ್ನೆಲೆಯಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಾದ್ಯಂತ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಬೆಂಬಲಿಗರು ಮನೆ ಮನೆ ನಿಸರ್ಗ ನಾರಾಯಣಸ್ವಾಮಿ ಎಂದು ಪ್ರಚಾರದಲ್ಲಿ ಮುಂದಾಗಿದ್ದಾರೆ .
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಜೊತೆಗೂಡಿ, ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಸೇರಿ ಪ್ರತಿ ಮನೆಗೆ ಭೇಟಿ ನೀಡುತ್ತಾ ದೇವನಹಳ್ಳಿ ತಾಲ್ಲೂಕಿನ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ಜನರು ಮನಮುಟ್ಟುವಂತಹ ಕೆಲಸವನ್ನು ಪಕ್ಷದ ಮುಖಂಡರು ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕೃತವಾಗಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಚುನಾವಣೆಯ ಅಭ್ಯರ್ಥಿಯಾಗಿ ನನ್ನ ಹೆಸರನ್ನು ತಿಳಿಸಿದ್ದಾರೆ. ಆದ್ದರಿಂದ ಯಾರೊಬ್ಬರೂ ಸಹ ಬೇರೆಯವರ ಮಾತಿಗೆ ಕಿವಿಕೊಡದೆ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು,ಮತ್ತೆ ದೇವನಹಳ್ಳಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಜಯಗೊಳಿಸಬೇಕು ಎಂದು ತಿಳಿಸಿದರು.
ಇನ್ನು ಮುಂಜಾನೆಯಿಂದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ನಲ್ಲೂರು, ಸೋಮತ್ತನಹಳ್ಳಿ, ಗಂಗವಾರ, ಚೌಡಪ್ಪನಹಳ್ಳಿ,ಬೂದಿಗೆರೆ, ಹಂದರಹಳ್ಳಿ, ಹಿತ್ತರಹಳ್ಳಿ ಸೇರಿದಂತೆ ಇನ್ನು ಅನೇಕ ಗ್ರಾಮಗಳಿಗೆ ಭೇಟಿ ನೀಡುತ್ತಾ ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆಗೆ ತಿಳಿಸುತ್ತಾ ಬಂದರು.
ಜೆಡಿಎಸ್ ರಾಜ್ಯ ಕಾರ್ಯ ಕಾರಣಿ ಸದಸ್ಯ ಎಮ್, ಎಸ್ ಶ್ರೀನಾಥ್ ಗೌಡ ಮಾತನಾಡಿ, ನಿಸರ್ಗ ನಾರಾಯಣಸ್ವಾಮಿ ಅವರು ಒಬ್ಬ ಬಡ ರೈತ ಕುಟುಂಬದಲ್ಲಿ ಬೆಳೆದು ಬಂದಂತಹ ವ್ಯಕ್ತಿ ಅವರು ಚಿಕ್ಕಂದಿನಿಂದಲು ದುಡಿದು ಒಂದು ಹೆಸರು ಮಾಡಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಇವರನ್ನು 17 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗೊಳಿಸಿ ಶಾಸಕ ಸ್ಥಾನವನ್ನು ಜನತೆ ಅಲಂಕರಿಸಿಕೊಟ್ಟರು. ಅದರಂತೆಯೇ ಅವರು ಸಹ ತಾಲ್ಲೂಕಿಗೆ ಹೆಚ್ಚಿನ ಸರಕಾರದಿಂದ ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ 2023 ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಮತ್ತೆ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜಯಗೊಳಿಸುವೆವು ತಿಳಿಸಿದರು.
ಬೂದಿಗೆರೆ ಗ್ರಾಮ ಪಂಚಾಯತಿ ಸದಸ್ಯ ನಾರಾಯಣಸ್ವಾಮಿ (ಕೋಟಿ) ಅವರು ಮಾತನಾಡಿ, ಸತತ ಎರಡೂ ಬಾರಿ ದೇವನಹಳ್ಳಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಆಡಳಿತ ನಡೆಸಿ ಬಹಳಷ್ಟು ಅಭಿವೃದ್ಧಿ ಹೊಂದಿದೆ, ಮತ್ತಷ್ಟು ಅಭಿವೃದ್ಧಿ ಹೊಂದಬೇಕಾದರೆ ದೇವನಹಳ್ಳಿ ಜನತೆ ಈ ಬಾರಿಯು ಜೆಡಿಎಸ್ ಪಕ್ಷಕ್ಕೆ ಮತವನ್ನು ನೀಡಿ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜಯಗೊಳಿಸಬೆಕು ಎಂದರು.
ಇದೇ ಸಂದರ್ಭದಲ್ಲಿ ಬೂದಿಗೆರೆ ಗ್ರಾಮದ ನಂಜೆಗೌಡರ ಸೊಸೆ ಪುಷ್ಪ ಬಾಬು ಮತ್ತು ಅನೇಕ ಮಹಿಳಾ ಸಂಗಡಿಗರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಜೆಡಿಎಸ್ ಪಕ್ಷದ ಮುಖಂಡ ಪ್ರಮೀಳಾ ರಾಮಾಂಜಿನಯ್ಯ ದಾಸ್, ಎಸ್ಟಿಡಿ, ರಮೇಶ್, ವೆಂಕಟೇಶಪ್ಪ, ಜಮಕೋಟೆ ವೆಂಕಟರಮಣಪ್ಪ, ಮಹೇಂದ್ರ, ರವೀಂದ್ರ, ಮುರಳಿ, ಅಂಜೀರ್ ಪಾಷ, ಪದ್ಮ, ಆನಂದ ಕುಮಾರ್, ಎಸ್ಸಿ ಘಟಕದ ತಾಲ್ಲೂಕು ಉಪಾಧ್ಯಕ್ಷ ರಾಜಕುಮಾರ್, ನಾರಾಯಣಸ್ವಾಮಿ ಅಪ್ಪಿ, ಎಸ್ಸಿ ಘಟಕದ ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಬಾಬು, ಹನುಮಂತಪ್ಪ, ನಾರಾಯಣಸ್ವಾಮಿ ಟಿಪ್ಪು,ಲೋಕೇಶ್ ಬಂಗಾರಿ, ನವೀದ್, ಇನ್ನೂ ಅನೇಕ ಬೂದಿಗೆರೆ ಗ್ರಾಮದ ಮುಖಂಡರುಗಳು ಹಾಜರಿದ್ದರು.