ಸುದ್ದಿಮೂಲ ವಾರ್ತೆ
ಮೈಸೂರು, ಮೇ 25: ಹಣ್ಣುಗಳ ರಾಜ ಮಾವಿನ ಹಣ್ನೂ ಮತ್ತು ಹಲಸಿನ ಹಣ್ಣುಗಳ ಜಿಲ್ಲಾಡಳಿತದ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ಮೇ 26 ರಿಂದ 28ರವರೆಗೆ ನಡೆಸುವ ಮೂಲಕ ಮಾವು ಮತ್ತು ಹಲಸು’ ಸಿಹಿ ಉಣ ಬಡಿಸಲಿದೆ.
ನಗರದ ಈ ಮೇಳ ನಡೆಯುತ್ತಿದ್ದು, ನಾನಾ ಸ್ವಾದದ ಹಣ್ಣುಗಳು ಮೈಸೂರಿಗರಿಗೆ ಲಭ್ಯವಾಗಲಿದೆ.
ಮಾವಿನ ಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲಸಿನ ಘಮಲು ಕೂಡ ಸೂಸತೊಡಗಿದೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು, ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವುದು ಹಾಗೂ ಸ್ಥಳೀಯ ಮಾವಿನ ಬಗೆಗೆ ಹೆಚ್ಚಿನ ಪ್ರಚಾರ ಮಾಡುವ ಉದ್ದೇಶದಿಂದ ಕಳೆದ 10 ವರ್ಷಳಿಂದಲೂ ತೋಟಗಾರಿಕೆ ಇಲಾಖೆ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ.
ಅದರಂತೆ ಈ ಬಾರಿಯೂ ಮೇ26 ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಕೆ.ಹರೀಶ್ ಗೌಡ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮೇಳದಲ್ಲಿ ಸಾರ್ವಜನಿಕರು ಭಾಗಿಯಾಗಬಹುದಾಗಿದೆ.
ಯಾವೆಲ್ಲಾ ಹಣ್ಣುಗಳು ಲಭ್ಯ?
ಮೇಳದಲ್ಲಿ ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ,
ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್ಪಸಂದ್ ಸೇರಿ ಹಲವು ತಳಿಯ ಹಣ್ಣುಗಳು ಮೇಳದಲ್ಲಿರಲಿವೆ.
ಒಂದೊಂದು ಜಾತಿಯ ಮಾವಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆಯೂ ಉದ್ಘಾಟನೆ ದಿನವೇ ದರ ನಿಗದಿಪಡಿಸಲಿದೆ.