ಸುದ್ದಿಮೂಲವಾರ್ತೆ
ಕೊಪ್ಪಳ ಜು 22:ಮಣಿಪುರದಲ್ಲಿ ಹಿಂಸಾಚಾರ ತಡೆಯಲು ವಿಫಲ. ದೇಶವೇ ತಲೆ ತೆಗ್ಗಿಸುವಂತೆ ಮಹಿಳೆಯರ ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಿರುವ ಪ್ರಕರಣ ಹಿನ್ಜೆಲೆಯಲ್ಲಿ ಮಣಿಪುರ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಇಂದು ಕೊಪ್ಪಳದಲ್ಲಿ ವೆಲ್ಫೇರ ಪಾರ್ಟಿ ಆಪ್ ಇಂಡಿಯಾದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕ ವೃತ್ತದಲ್ಲಿ ಮಹಿಳೆಯರು ಸೇರಿ ಹಲವರು ಮಣಿಪುರ ಸರಕಾರದ ವಿರುದ್ದ ಘೋಷಣೆ ಹಾಕಿದರು. ಬೆತ್ತಲೆ ಮೆರವಣಿಗೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮಾಧ್ಯಮಗಳ ವರದಿ ಪ್ರಕಾರ 6000 ಜನರ ಸಾವಾಗಿದೆ. ಮಣಿಪುರ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಸರಕಾರವನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆದಿಲ್ ಪಟೇಲ. ಸಬಿಯಾ ಪಟೇಲ. ನಾಸೀರ, ಅಹ್ಮದ, ಉಮೇರಾ ಪಾರೂಕ, ರಿಜ್ವಾನ, ಸಲೀಮಾ ಜಾ ಸೇರಿ ಹಲವರು ಇದ್ದರು.