ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.08:
ಕಳೆದ ವರ್ಷ ಸರಣಿ ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆೆ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಿ ಚೌದರಿ ಅವರಿಗೆ ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಾಯಿಸಿದ್ದಾಾರೆ.
ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆೆಗೆ ಹೆರಿಗೆಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಾಂಪ್-3ರ ಮಹಿಳೆ ಮೌಸಂಬಿ ಮಂಡಲ್ ಮಹೇಶ್ವರ ಮಂಡಲ್, ರಾಗಲಪರ್ವಿ ಗ್ರಾಾಮದ ಚನ್ನಮ್ಮ ಬಸವರಾಜ ನಾಯಕ, ಉದ್ಬಾಾಳ.ಜೆ ಗ್ರಾಾಮದ ಗರ್ಭಿಣಿ ಮಹಿಳೆ ಚಂದ್ರಕಲಾ, ಅಂಕುಶದೊಡ್ಡಿಿ ಗ್ರಾಾಮದ ರೇಣುಕಮ್ಮ ಗಂಡ ಬಸವರಾಜ ಹೆರಿಗೆ ನಂತರ ರಾಯಚೂರಿನ ಜಿಲ್ಲಾಾಸ್ಪತ್ರೆೆಯಲ್ಲಿ ಮೃತಪಟ್ಟಿಿರುತ್ತಾಾರೆ.
ಈ ನಾಲ್ಕು ಪ್ರಕರಣಗಳು ಸರಣಿಯಾಗಿ ಘಟಿಸಿವೆ. ನಾಲ್ವರು ಬಾಣಂತಿ ಯರು ಮೃತಪಟ್ಟು, ನವಜಾತ ಶಿಶುಗಳು ತಾಯಿಯನ್ನು ಕಳೆದು ಕೊಂಡ ಅನಾಥವಾಗಿವೆ. ಇದರಿಂದ ಈ ಮಹಿಳೆಯರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿಿವೆ.
ಸಿಎಂ, ಆರೋಗ್ಯ ಇಲಾಖೆ ಸಚಿವರು, ಜಿಲ್ಲಾಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂಧಿಸಿದ ಇಲಾಖೆಯ ಪ್ರಮುಖ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವರ್ಷ ಗತಿಸಿದರೂ ಇಲ್ಲಿಯವರೆಗೂ ಈ ಕುಟುಂಬಗಳಿಗೆ ಪರಿಹಾರ ನೀಡಿರುವುದಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಾಪಿಸಿ ಗಮನ ಸೆಳೆದಿದ್ದಾಾರೆ.
ಈ ನಾಲ್ವರು ಮೃತ ಬಾಣಂತಿಯರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಒದಗಿಸಬೇಕು. ಮಹಿಳೆಯರು ಮೃತರಾಗಿದ್ದರಿಂದ ಅನಾಥವಾಗಿರುವ ನಾಲ್ಕು ಮಕ್ಕಳ ಪೋಷಣೆಯ ಜವಾಬ್ದಾಾರಿ ಸರ್ಕಾರವೇ ಹೊತ್ತುಕೊಳ್ಳಬೇಕು. ಹೆರಿಗೆಯಾದ ನಂತರ ಬಾಣಂತಿಯರ ಸಾವಿನ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು, ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಾಂಪಿನಲ್ಲಿ ಇತ್ತೀಚೆಗೆ ಆರಂಭವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ಕೊರತೆ ಇದ್ದು, ಕೂಡಲೇ ನೇಮಕ ಮಾಡಬೇಕು, ಕೆಲಸದ ಅವಧಿಯಲ್ಲಿ ಬೇರೆ ಕಡೆ ಖಾಸಗಿ ಕ್ಲಿಿನಿಕ್ ನಡೆಸುವ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳುಳ್ಳ ಮನವಿಪತ್ರ ಅಧ್ಯಕ್ಷರಿಗೆ ಸಲ್ಲಿಸಿದ್ದಾಾರೆ.
ಬಾಣಂತಿಯರ ಸರಣಿ ಸಾವು ಪ್ರಕರಣ : ಮಹಿಳಾ ಆಯೋಗದ ಅಧ್ಯಕ್ಷರಿಗೆ ಮಂಜುನಾಥ ಗಾಣಿಗೇರ್ ಒತ್ತಾಯ 25 ಲಕ್ಷ ರೂ. ಪರಿಹಾರಕ್ಕೆ ಮಹಿಳಾ ಆಯೋಗಕ್ಕೆ ಮನವಿ

