ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ವಿದ್ಯಾಾರ್ಥಿಗಳು ಎಲ್ಲಾಾ ರಂಗದಲ್ಲೂ ಸಾಧನೆ ಮಾಡಲು ಎನ್ಎಸ್ಎಸ್ ಸಹಕಾರಿಯಾಗಿದ್ದು, ಸ್ವಾಾವಲಂಬಿ ಬದುಕು ಕಟ್ಟಿಿಕೊಳ್ಳಲು ಪ್ರೇೇರೇಪಿಸುತ್ತದೆ ಎಂದು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಮಂಜುನಾಥ ಸೋಮಲಾಪುರ ಹೇಳಿದರು.
ತಾಲೂಕಿನ ಅಲಬನೂರಿನ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾಾರ್ಥಿ ಜೀವನದಲ್ಲಿ ಪರಿವರ್ತನೆ ಸಹಜ. ಅಂತಹ ಒಂದು ಪರಿವರ್ತನೆ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಧ್ಯ. ಮನುಷ್ಯನು ಪರಾವಂಲಬಿಯಾಗಿ ಬದುಕದೇ ತನ್ನ ಕಾಲ ಮೇಲೆ ತಾನು ನಿಂತು ಕೊಂಡು ತನ್ನ ಸಂಪಾದನೆಯಿಂದ ಗಳಿಸಿದ ಹಣದಿಂದ ಬದುಕಬೇಕು. ಇನ್ನೊೊಬ್ಬರಿಗೆ ಮಾದರಿಯಾಗಬೇಕು. ಇದನ್ನು ಎನ್ಎಸ್ಎಸ್ ನಿಂದ ಕಲಿಯಬಹುದಾಗಿದೆ ಎಂದರು.
ಕಾಲೇಜಿನ ಪ್ರಾಾಚಾರ್ಯ ಡಾ.ಶಿವರಾಜ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಂಧನೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಾಚಾರ್ಯ ಶೇಖರಯ್ಯ, ಉಪನ್ಯಾಾಸಕ ಬಸವರಾಜ ಯಲಬುರ್ಗಿ, ಸಿಂಧನೂರಿನ ಎಕ್ಸ್ಲೆಂಟ್ ಪದವಿ ಕಾಲೇಜಿನ ಪ್ರಾಾಚಾರ್ಯ ವೆಂಕಟರಾವ್ ಮಿರಿಯಂ, ಮಹಿಬೂಬ್ ಕೋಳಬಾಳ, ಅಲಬನೂರು ಸರ್ಕಾರಿ ಪ್ರೌೌಢಶಾಲೆಯ ಮುಖ್ಯಗುರು ಅಯ್ಯಪ್ಪ ಮೇಟಿ, ಅಲಬನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಾಸಕರಾದ ಮಹಿಬೂಬ್ ಕೆ, ಪಂಪಾಪತಿ ಕಲ್ಮಂಗಿ, ಮೌನೇಶ ಬಳಗನೂರು, ಶಂಕರಗೌಡ ಬೂತಲದಿನ್ನಿಿ, ರಾಷ್ಟ್ರೀಯ ಸೇವಾ ಯೋಜನೆಯ ಸಹಾಯಕ ಸಂಯೋಜನಾಧಿಕಾರಿ ಶಿವರಾಜ ಅಡಗಲ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಬಿ.ರವಿಕುಮಾರ ಸಾಸಲಮರಿ ಭಾಗವಹಿಸಿದ್ದರು. ಮಡಿವಾಳ ಮಾಚಿದೇವ ತಂಡ ನಾಯಕಿ ಶಿಲ್ಪಾಾ ಬೆಳಗುರ್ಕಿ ನಿರೂಪಿಸಿದರೆ, ಶ್ರೀದೇವಿ ಎಂ ಹರೇಟನೂರು ಸ್ವಾಾಗತಿಸಿದರು. ವೆಂಕಟೇಶ ಎ ಹರೇಟನೂರು ವಂದಿಸಿದರು.
ಸ್ವಾವಲಂಬಿ ಬದುಕಿಗೆ ಎನ್ಎಸ್ಎಸ್ ಸಹಕಾರಿ: ಮಂಜುನಾಥ

