ಬೆಂಗಳೂರು,ಜೂ.8; ವೇದ, ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಹಲವಾರು ವಿಷಯಗಳನ್ನೊಳಗೊಂಡ ಲೇಖನಗಳ ಸಂಗ್ರಹ ಒಳಗೊಂಡಿರುವ ಹಳದೀಪುರ ವಾಸುದೇವ ರಾವ್ ಅವರ “ಮನೋಲ್ಲಾಸ” ಕೃತಿಯನ್ನು ಶತಾವಧಾನಿ ಡಾ. ಆರ್. ಗಣೇಶ್ ಬಿಡುಗಡೆ ಮಾಡಿದರು.
ನಯನ ರಂಗ ಮಂದಿರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಬಿ.ಎಸ್. ರಾಮರಾವ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ. ಅಶ್ವತ್ಥ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಲೇಖಕ ಹಳದೀಪುರ ವಾಸುದೇವ ರಾವ್ ಮಾತನಾಡಿ, ಪ್ರತಿಬಾರಿ ವೇದ, ಉಪನಿಷತ್ತು ಓದಿದಾಗಲೂ ಅದು ಹೊಸ ಅನುಭವ ನೀಡುತ್ತದೆ. ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸಾರ ಅರಿಯಲು ಸಾಧ್ಯ. ಸರ್ವ ಜ್ಞಾನ ಇದ್ದರೂ ವೇದ ಜ್ಞಾನ ಇಲ್ಲದಿದ್ದರೆ ಅದು ಅಪೂರ್ಣವಾಗಲಿದ್ದು, ವೇದ ಭಾರತದ ಬುನಾದಿ ಎಂದರು.
ದತ್ತಾತ್ರಯ ರಾಮಚಂದ್ರ ಬೇಂದ್ರೆ, ರವೀಂದ್ರ ನಾಥ ಠ್ಯಾಗೋರ್, ಚಿನ್ಮಯಾನಂದ, ಲಿಯೋ ಟಾಲ್ ಸ್ಟಾಯ್ ಮತ್ತಿತರ ವಿಷಯಗಳನ್ನು ಒಳಗೊಂಡ 42 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಬದುಕಿನಲ್ಲಿ ತಾವು ಓದಿ, ಅರ್ಥೈಸಿಕೊಂಡು ಗ್ರಹಿಸಿದ ಸಾರ ಕೃತಿಯಲ್ಲಿದೆ ಎಂದರು.