ಸುದ್ದಿಮೂಲ ವಾರ್ತೆ ಸಿಂಧನೂರು, ಜ.12:
ಯುಪಿಎ ಸರಕಾರ ಜಾರಿಗೆ ತಂದ ಮನರೇಗಾ ಯೋಜನೆ ರದ್ದು ಮಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಡಜನರ ಉದ್ಯೋೋಗದ ಹಕ್ಕು ಕಸಿದು ಕೊಳ್ಳಲು ಹುನ್ನಾಾರ ನಡೆಸಿದ್ದು, ಇದನ್ನು ವಿರೋಧಿಸಿದ ಕಾಂಗ್ರೆೆಸ್ ಪಕ್ಷದಿಂದ ’ಮನರೇಗಾ ಬಚಾವ್ ಜನಾಂದೋಲನ ರೂಪಿಸಲಾಗುತ್ತಿಿದೆ ಎಂದು ವಿಧಾನಪರಿಷತ್ ಶಾಸಕ ಬಸನಗೌಡ ಬಾದರ್ಲಿ ಹೇಳಿದರು.
ಸೋಮವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಅವರು ಮಾತನಾಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತರಿ ಯೋಜನೆ ಮತ್ತೆೆ ಜಾರಿಗೆ ತರುವಂತೆ ಒತ್ತಾಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿಿಗಳು, ಉಪಮುಖ್ಯಮಂತ್ರಿಿ ತೀರ್ಮಾನಿಸಿದ್ದಾಾರೆ.
ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತರಿ ಯೋಜನೆ ಜಾರಿಗೆ ತಂದು, ಕೋಟ್ಯಾಾಂತರ ಕುಟುಂಬಗಳಿಗೆ ಆರ್ಥಿಕ ಬಲ ನೀಡಿದರು. ಮನರೇಗಾ ಗ್ರಾಾಮೀಣ ಪ್ರದೇಶದಲ್ಲಿ ಉದ್ಯೋೋಗ ಸೃಷ್ಟಿಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋೋಗ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಇದರಿಂದ ವರ್ಷದಲ್ಲಿ ನೂರು ದಿನ ಕಡ್ಡಾಾಯವಾಗಿ ಉದ್ಯೋೋಗ ಸಿಗುತ್ತಿಿತ್ತು. ಈಗ ಈ ಉದ್ಯೋೋಗದ ಹಕ್ಕನ್ನೇ ಕಸಿಯುವ ಕೆಲಸಕ್ಕೆೆ ಕೇಂದ್ರ ಸರ್ಕಾರ ಕೈ ಹಾಕಿದೆ ಎಂದು ಆರೋಪಿಸಿದರು.
ಎಐಸಿಸಿ, ಕೆಪಿಸಿಸಿ ಆದೇಶದ ಮೇರೆಗೆ ತಾಲ್ಲೂಕು ಕಾಂಗ್ರೆೆಸ್ ಸಮಿತಿಯಿಂದ ಉಪವಾಸ ಸತ್ಯಾಾಗ್ರಹ, ಜನಸಂಪರ್ಕ ಸಭೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುವುದು. ಜ.16 ರಂದು ಉಪವಾಸ ಸತ್ಯಾಾಗ್ರಹ, ಜ.18 ರಿಂದ 29ರವರೆಗೆ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆೆಸ್ ಮುಖಂಡರಾದ ವೆಂಕಟೇಶ ನಾಯಕ, ಶಿವಕುಮಾರ ಜವಳಿ, ಶರಣಯ್ಯಸ್ವಾಾಮಿ ಕೋಟೆ, ಹಬೀಬ್ ಖಾಜಿ, ಅಮರೇಶ ಗಿರಿಜಾಲಿ, ಶೈಬಾಜ್ ಉಸ್ತಾಾದ್, ಯುಸ್ೂ ಎತ್ಮಾಾರಿ, ಹನುಮೇಶ ಕರ್ನಿ ಸೇರಿದಂತೆ ಇತರರು ಇದ್ದರು.
ಕಾಂಗ್ರೆಸ್ ಪಕ್ಷದಿಂದ ಮನರೇಗಾ ಬಚಾವ್ ಅಭಿಯಾನ

