ಸುದ್ದಿಮೂಲ ವಾರ್ತೆ ಸಿಂಧನೂರು, ಜ.14:
ಎಐಸಿಸಿ, ಕೆಪಿಸಿಸಿ ಸೂಚನೆ ಮೇರೆಗೆ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ತಾಲ್ಲೂಕು ಬ್ಲಾಾಕ್ ಕಾಂಗ್ರೆೆಸ್ ಸಮಿತಿಯಿಂದ ಜ.19 ರಂದು ನಾಲ್ಕು ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಎಂ.ಲಿಂಗಪ್ಪ ದಢೇಸೂಗುರು ತಿಳಿಸಿದರು.
ಬುಧವಾರ ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಮಾತನಾಡಿದರು. ರಾಮತ್ನಾಾಳ, ರಾಗಲಪರ್ವಿ, ಗೋನವಾರ ಮತ್ತು ಹೆಡಗಿನಾಳ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯಲ್ಲಿ ಜನಜಾಗೃತಿ ಮೂಡಿಸಲು ಜನ ಸಂಪರ್ಕ ಆಯೋಜಿಸಲಾಗುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಶಾಸಕ ಎ.ವಸಂತಕುಮಾರ, ಜಿಲ್ಲಾಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಸೇರಿದಂತೆ ಜಿಲ್ಲೆೆಯ ಸಚಿವರು, ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಭಾಗವಹಿಸಲಿದ್ದು, ಕಾಂಗ್ರೆೆಸ್ ಪಕ್ಷದ ಮುಖಂಡರು ಭಾಗವಹಿಸಿ ಯಶಸ್ವಿಿಗೊಳಿಸಬೇಕೆಂದು ಮನವಿ ಮಾಡಿದರು.
ಬದುಕು ಕಸಿಯುವ ಯತ್ನ:
ಕೇಂದ್ರದಲ್ಲಿ ಕಾಂಗ್ರೆೆಸ್ ಅಧಿಕಾರದಲ್ಲಿದ್ದಾಾಗ 2005 ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಖಾತ್ರಿಿ ಕಾಯ್ದೆೆ ಜಾರಿಯಾಗಿತ್ತು. ನರೇಗಾ ಯೋಜನೆಯಿಂದ ಎಲ್ಲಾಾ ವರ್ಗದ ಜನತೆಗೆ ಅನುಕೂಲವಾಗಿದೆ. ಮನರೇಗಾ ಹೆಸರು ಬದಲಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಾಮೀಣ ಜನರಿಗೆ ಭರವಸೆಯ ಯೋಜನೆಯಾಗಿದ್ದ ನರೇಗಾದ ಮೂಲ ಸ್ವರೂಪ ಬದಲಾವಣೆ ಮಾಡಿ ಬದುಕು ಕಸಿಯಲು ಮುಂದಾಗಿದೆ ಎಂದು ಆರೋಪಿಸಿದರು.
ಬ್ಲಾಾಕ್ ಕಾಂಗ್ರೆೆಸ್ನಿಂದ ಆಯೋಜಿಸುವ ಜನ ಸಂಪರ್ಕ ಸಭೆಗೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರನ್ನು ಆಹ್ವಾಾನಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡರಾದ ಎನ್.ಅಮರೇಶ, ವೆಂಕೋಬ ಬಾವಿಕಟ್ಟಿಿ ಕಲ್ಲೂರು, ಅಶೋಕ ಉಮಲೂಟಿ, ಬಿ.ಹೆಚ್.ನಾಯಕ, ಹನುಮೇಶ ಮುಳ್ಳೂರು ಇತರರು ಇದ್ದರು.
ಮನರೇಗಾ ಬಚಾವ್ ಸಂಗ್ರಾಮ್ ಆಂದೋಲನ 19ರಂದು ಗ್ರಾ.ಪಂ. ಮಟ್ಟದಲ್ಲಿ ಜನಸಂಪರ್ಕ ಸಭೆ: ಎಂ.ಲಿಂಗಪ್ಪ

