ಸುದ್ದಿಮೂಲವಾರ್ತೆ ಸಿರವಾರ: ಏ.೯ ಮಾನ್ವಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟದಿಂದ ಕಂಗಲಾಗಿದ್ದು, ಮತ್ತೊಂದು ಬಿಗ್ ಶಾಕ್ ಮೂಡಿದೆ ಮಾಜಿ ಶಾಸಕ ಎನ್.ಎಸ್.ಭೋಸರಾಜ ಆಪ್ತರು, ೨೦೦೬ರಲ್ಲಿ ಮಾನ್ವಿ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಚಂದ್ರು ಕಳಸ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಾಗುವದು ಎಂದು ಸುದ್ದಿಗಾರರಿಗೆ ಮಾಹಿತಿನೀಡಿ ಪಕ್ಷದಲ್ಲಿ ಕಚ್ಚಾಟ, ಮುಖಂಡರಿಗೆ ಸರಿಯಾದ ಪ್ರಾತ್ಯನಿಧ್ಯವಿಲ್ಲ, ಮಾನ್ವಿ ತಾಲೂಕಿನ ರಾಜಕೀಯ ಕಲುಷಿತವಾಗಿದೆ.
ಪಕ್ಷಕ್ಕೆ ದುಡಿದವರನ್ನು ಗುರುತಿಸುವುದು ಯಾವಾಗ, ರಾಜಕೀಯ ಬೇಸತ್ತು ರಾಜಕೀಯದಿಂದ ನಿವೃತ್ತಿಯ ಪಡೆಯಲು ಮುಂದಾಗಿದ್ದೇನೆ ಎಂದು ಚಂದ್ರು ಕಳಸ ಸುದ್ದಿಮೂಲಕ್ಕೆ ತಮ್ಮ ನೋವು ವಿವರಿಸಿದರು.