ಸುದ್ದಿಮೂಲ ವಾರ್ತೆ ಮಾನ್ವಿ, ೆ.23:
ದೇವಸೂಗೂ ರಿನ ಸೂಗೂರೇಶ್ವರ ಕರಾಟೆ ಸಂಸ್ಥೆೆ ವತಿಯಿಂದ ಮಾನ್ವಿಿಯ ಕರಾಟೆ ಶಿಕ್ಷಕ ದೇವರಾಜ ಹೆಚ್.ನಕ್ಕುಂದಿ ಇವರಿಗೆ ಸ್ವರಕ್ಷಣಾ ಸಾರಥಿ ಪ್ರಶಸ್ತಿಿ ನೀಡಲಾಗಿದೆ.
ಕರಾಟೆ ಕಲೆಯ ಮೇಲೆ ಅಪಾರ ನಿಷ್ಠೆೆ ಮತ್ತು ಕಠಿಣ ಪರಿಶ್ರಮ ಹೊಂದಿರುವ ದೇವರಾಜ ನಕ್ಕುಂದಿ ಅವರ ಸುದೀರ್ಘ ಸೇವೆ ಗುರುತಿಸಿ ಪ್ರಶಸ್ತಿಿ ಪ್ರದಾನ ಮಾಡಲಾಗಿದೆ.
ಕರಾಟೆ ಕ್ಷೇತ್ರದಲ್ಲಿ ದೇವರಾಜ ಅವರು ಪಟ್ಟಿಿರುವ ಶ್ರಮ ಶ್ಲಾಾಘನೀಯವಾದದು. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ನೂರಾರು ಬಡ ವಿದ್ಯಾಾರ್ಥಿಗಳಿಗೆ ವಿಶೇಷವಾಗಿ ಬಾಲಕಿಯರಿಗೆ ಆತ್ಮರಕ್ಷಣೆಯ ಕಲೆ ಉಚಿತವಾಗಿ ಮತ್ತು ನಿರಂತರವಾಗಿ ಕಲಿಸುತ್ತಾಾ ಬಂದಿರುವುದು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ. ಗ್ರಾಾಮೀಣ ಮತ್ತು ಬಡ ಪ್ರತಿಭೆ ಗುರುತಿಸಿ, ಅವರಿಗೆ ಧೈರ್ಯ ಮತ್ತು ಶಿಸ್ತನ್ನು ಕಲಿಸುವ ಮೂಲಕ ಸಮಾಜದ ಸದೃಢತೆಗೆ ಮಹತ್ವದ ಕೊಡುಗೆ ನೀಡುತ್ತಿಿದ್ದಾರೆ.
ದೇವರಾಜ ಅವರ ಈ ನಿಸ್ವಾಾರ್ಥ ಸೇವೆ ಹೀಗೆಯೇ ಮುಂದುವರಿಯಲಿ. ಇವರ ಮಾರ್ಗದರ್ಶನದಲ್ಲಿ ಇನ್ನೂ ಅನೇಕ ಕ್ರೀೆಡಾಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆೆ ಬೆಳೆಯಲಿ ಎಂದು ಸೂಗೂರೇಶ್ವರ ಕರಾಟೆ ಸಂಸ್ಥೆೆಯ ಅಧ್ಯಕ್ಷ ಪಿ.ಎಸ್.ಶಿವಕುಮಾರ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ ಅವರು ಆಶಿಸಿ ದೇವರಾಜ ಅವರನ್ನು ಅಭಿನಂದಿಸಿದ್ದಾರೆ.
ಮಾನ್ವಿ : ಕರಾಟೆ ಶಿಕ್ಷಕ ದೇವರಾಜ ನಕ್ಕುಂದಿ ಇವರಿಗೆ ಸ್ವರಕ್ಷಣಾ ಸಾರಥಿ ಪ್ರಶಸ್ತಿ

