ಸುದ್ದಿಮೂಲ ವಾರ್ತೆ ಮಾನ್ವಿ, ಜ.21:
ಪಟ್ಟಣದ ತಹಶೀಲ್ದಾಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ತಹಶೀರ್ಲ್ದಾಾ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ 12 ನೇ ಶತಮಾನದಲ್ಲಿ ಶರಣರು ಪ್ರಾಾಪಂಚಿಕ ಜೀವನದ ಪರಿಕಲ್ಪನೆಯನ್ನು ಅನುಭವ ಮಂಟಪದ ಮೂಲಕ ನಮಗೆ ಮೂಡಿಸಿದ್ದಾರೆ ಎಂದು ಹೇಳಿದರು.
ಬಸವರಾಜ ಚೌಡ್ಲಿಿ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಮತ್ತು ತತ್ವ ಅದರ್ಶಗಳ ಕುರಿತು ವಿಶೇಷ ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ಗಂಗಾಮತಸ್ಥರ ಸಮಾಜದ ಅಧ್ಯಕ್ಷ ವೆಂಕಟೇಶ ಸುಂಕೇಶ್ವರ, ಗೌರವ ಅಧ್ಯಕ್ಷ ನಾಗೇಶ್ ಕಬ್ಬೇರ್, ಭೀಮರಾಯ ಸೀತಮನಿ, ನಿವೃತ್ತ ಎ.ಎಸ್.ಐ. ಈರಪ್ಪ, ಕಾರ್ಯದರ್ಶಿ ಮಂಜುನಾಥ ಮಾಡಗಿರಿ ಬಸಪ್ಪ, ಮಹಾದೇವಪ್ಪ, ಕಾಶೀನಾಥ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಮಾನ್ವಿ : ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

