ಸುದ್ದಿಮೂಲ ವಾರ್ತೆ ಬೆಂಗಳೂರು, ನ.16:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಸಚಿವ ಪದವಿಗಾಗಿ ಕಾಂಗ್ರೆೆಸ್ ಪಕ್ಷದಲ್ಲಿ ಲಾಬಿ ತೀವ್ರಗೊಂಡಿದೆ.
ಈ ಮಧ್ಯೆೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಕಬ್ಬುಬೆಳೆಗಾರರ ಸಮಸ್ಯೆೆ, ನೀರಾವರಿ ಸೇರಿ ರಾಜ್ಯದ ಇತರೆ ವಿಚಾರಗಳ ಬಗ್ಗೆೆ ಚರ್ಚೆ ನಡೆಸಲಿದ್ದಾರೆ. ಅದಾದ ಬಳಿಕ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆಗೆ ಅಧಿಕೃತ ಮುದ್ರೆೆ ಪಡೆಯಲು ಮುಂದಾಗಿದ್ದಾರೆ.
ಇದರ ನಡುವೆಯೇ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರು ಎರಡು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟು ಹೈಕಮಾಂಡ್ ನಾಯಕರ ಭೇಟಿಯಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಿಯಾಗಿ ಎರಡೂವರೆ ವರ್ಷ ಕಳೆಯುತ್ತಿಿದ್ದು, ತಮಗೆ ಅಧಿಕಾರ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೊೊಂದೆಡೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಬದಲಾವಣೆ ಮಾಡುವುದೂ ಖಚಿತ ಆಗುತ್ತಿಿದ್ದು, ಪ್ರದೇಶ ಕಾಂಗ್ರೆೆಸ್ ಅಧ್ಯಕ್ಷ ಸ್ಥಾಾನ ಬಿಟ್ಟುಕೊಟ್ಟಲ್ಲಿ ಮುಂದೆ ತಮಗೆ ಯಾವಾಗ ಸಿಎಂ ಪಟ್ಟ ಸಿಗಬಹುದು ಎಂಬುದರ ಖಾತ್ರಿಿಗಾಗಿಯೂ ಹೈಕಮಾಂಡ್ ನಾಯಕರ ಮುಂದೆ ಪಟ್ಟು ಹಿಡಿದು ಕೇಳುತ್ತಿಿದ್ದಾರೆ ಎನ್ನಲಾಗಿದೆ.
ಈ ಮಧ್ಯೆೆ ಡಿಸಿಎಂ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಭಾನುವಾರ ಸಂಜೆ ದೆಹಲಿಗೆ ತೆರಳಿ ಡಿಕೆಶಿ ಬೆನ್ನಿಿಗೆ ನಿಂತಿದ್ದಾರೆ.
ನಾಳೆ ಸಿಎಂ ಜೊತೆ ಶಾಸಕರಾದ ಪಿ.ಎಂ ಅಶೋಕ್, ಎ.ಎಸ್.ಪೊನ್ನಣ್ಣ, ಬಸವರಾಜ ರಾಯರೆಡ್ಡಿಿ, ಅಪ್ಪಾಾಜಿ ನಾಡಗೌಡ ಮತ್ತಿಿತರರು ಮುಖ್ಯಮಂತ್ರಿಿ ಅವರ ಜೊತೆ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಸರ್ಕಾರ ಎರಡೂವರೆ ವರ್ಷ ಪೂರೈಸಿರುವ ಹಿನ್ನೆೆಲೆಯಲ್ಲಿ ಸಂಪುಟ ಪುನಾರಚನೆ ಕೈಗೊಳ್ಳಬಹುದು ಎಂದು ರಾಹುಲ್ಗಾಂಧಿ ಹೇಳಿದ್ದು, ಯಾರನ್ನು ಕೈಬಿಡಬೇಕು ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆ ಬಿರುಸುಗೊಂಡಿದೆ. ಸಚಿವ ಪದವಿ ಕನಸು ಕಾಣುತ್ತಿಿರುವ ಶಾಸಕರ ದಂಡು ದೆಹಲಿಯಾತ್ರೆೆ ಆರಂಭಿಸಲು ಸಿದ್ಧತೆ ನಡೆಸಿದ್ದರೆ ಕೆಲವು ಸಚಿವರಿಗೆ ಇರುವ ಪದವಿ ಹೋಗುವ ಚಿಂತೆ ಶುರುವಾಗಿದೆ.
ಹೈಕಮಾಂಡ್ ಭೇಟಿ ಮಾಡಿ ಅವರನ್ನು ಒಪ್ಪಿಿಸಲು ಶಾಸಕರ ದಂಡು ದೆಹಲಿ ಯಾತ್ರೆೆಗೆ ಸಜ್ಜಾಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೇವರ್ಗಿ ಶಾಸಕ ಅಜಯ್ಸಿಂಗ್, ದಿಢೀರ್ ದೆಹಲಿಗೆ ತೆರಳಿದ್ದು ವರಿಷ್ಠ ಮನವೊಲಿಸಿ ಅವಕಾಶ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಿಿದ್ದಾರೆ.
ಯಾವ ಸಚಿವರನ್ನು ಕೈಬಿಡಬಹುದು:
ಸಚಿವ ಸಂಪುಟ ಪುನರ್ ರಚನೆಯಲ್ಲಿ ಬಹಳಷ್ಟು ಮಂದಿ ಸಚಿವರನ್ನು ಕೈ ಬಿಡುವ ಸಾಧ್ಯತೆ ತಳ್ಳಿಿ ಹಾಕುವಂತಿಲ್ಲ. ಮೂಲಗಳ ಪ್ರಕಾರ ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶರಣ ಬಸಪ್ಪ ದರ್ಶನಪೂರ, ಶಿವಾನಂದ ಪಾಟೀಲ್, ಆರ್.ಬಿ. ತಿಮಾಪುರ್, ಡಾ. ಶರಣ ಪ್ರಕಾಶ್ ಪಾಟೀಲ್, ಲಕ್ಷ್ಮೀ ಹೆಬ್ಬಾಾಳ್ಕರ್, ರಹೀಂಖಾನ್, ಡಿ. ಸುಧಾಕರ್ ಅವರು ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.
ಈ ಹಿನ್ನೆೆಲೆಯಲ್ಲಿ ಕೆಲವು ಸಚಿವರು ದೆಹಲಿಗೆ ಭೇಟಿ ನೀಡಿ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹಾಕುವುದು ಹಾಗೂ ಮನವೊಲಿಸುವ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಯಾರು ಸೇರ್ಪಡೆ
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಜಯ ನಗರ ಶಾಸಕ ಎಂ.ಕೃಷ್ಣಪ್ಪ, ನರಸಿಂಹರಾಜ ಶಾಸಕ ತನ್ವೀರ್ಸೇಠ್, ಪರಿಷತ್ ಸದಸ್ಯ ಸಲೀಂ ಅಹಮದ್, ಶಿವಾಜಿನಗರ ಶಾಸಕ ರಿಜ್ವಾಾನ್ ಅರ್ಷದ್, ಮಾಗಡಿ ಶಾಸಕಬಾಲಕೃಷ್ಣ, ಶಾಂತಿನಗರ ಶಾಸಕ ಎನ್.ಎ.ಹ್ಯಾಾರಿಸ್, ಶಾಸಕಿ ರೂಪಕಲಾ ಶಶಿಧರ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಳವಳ್ಳಿಿ ಶಾಸಕ ನರೇಂದ್ರಸ್ವಾಾಮಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಹುಬ್ಬಳ್ಳಿಿ ಧಾರವಾಡ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಯಲಬುರ್ಗ ಶಾಸಕ ಬಸವರಾಜ ರಾಯರೆಡ್ಡಿಿ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿವೆ.
ಸಂಪುಟ ಪುನಾರಚನೆ ಜೇನುಗೂಡಿಗೆ ಕೈ ಹಾಕಿದಂತೆ
ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ರಾಹುಲ್ ಗಾಂಧಿ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಿಗೆ ನೀಡಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ ವೇಣುಗೋಪಾಲ ಅವರ ಅಭಿಪ್ರಾಾಯ ಇನ್ನೂ ವ್ಯಕ್ತವಾಗಿಲ್ಲ. ಅವರು ರಾಹುಲ್ ಹೇಳಿದಂತೆ ಒಪ್ಪಿಿಗೆ ಸೂಚಿಸಬಹುದು. ಅಥವಾ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಎದುರಾಗುವ ಸಮಸ್ಯೆೆಗಳ ಬಗ್ಗೆೆ ಸಿಎಂಗೆ ಮನವರಿಕೆ ಮಾಡಿಕೊಡಬಹುದು.
ಸಚಿವ ಸಂಪುಟ ಪುನಾರಚನೆ ಮಾಡಲು ಸ್ಥಳೀಯವಾಗಿ ಕಾಲ ಪಕ್ವವಾಗಿಲ್ಲ ಎನ್ನವ ಮಾಹಿತಿಯೂ ಇದೆ. ರಾಜ್ಯದ ಕಾಂಗ್ರೆೆಸ್ನಲ್ಲಿ ಮೂರದಿಂದ ನಾಲ್ಕು ಶಕ್ತಿಿ ಕೇಂದ್ರಗಳು ರಚನೆಯಾಗಿರುವುದರಿಂದ ಸದ್ಯದ ಸ್ಥಿಿತಿಯಲ್ಲಿ ಸಂಪುಟ ವಿಸ್ತರಣೆ ಸದ್ಯ ಬೇಡ ಎನ್ನುವ ಸ್ಥಿಿತಿ ಕೆಲವರಿಗೆ ಇದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಸಂಪುಟ ಪುನಾರಚನೆಯ ಪರಮಾಧಿಕಾರ ಇದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರ ಸಲಹೆ ಹಾಗೂ ಸೂಚನೆಯನ್ನು ಪಡೆಯಬೇಕಿದೆ. ಕಳೆದ ಎರಡೂವರೆ ವರ್ಷಗಳಿಂದ ನಿಗಮ ಮಂಡಳಿಗಳಿಗೆ ಸದಸ್ಯರು ಹಾಗೂ ನಿರ್ದೇಶಕರನ್ನು ನೇಮಿಸಲು ಸಾಧ್ಯವಾಗಿಲ್ಲ. ಮಲ್ಲಿಕಾರ್ಜು ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಪ್ರತ್ಯೇಕ ಪಟ್ಟಿಿಗಳು ಇದ್ದು ಅದನ್ನು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ಸಿಂಗ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ ಅವರು ತಮ್ಮ ಬಳಿಯೇ ಇಟ್ಟುಕೊಂಡಿರುವುದರಿಂದ ಅವುಗಳು ಇನ್ನು ಇತ್ಯರ್ಥವಾಗಿಲ್ಲ ಇದರಿಂದ ನಿಗಮ ಹಾಗೂ ಮಂಡಳಿಗಳ ನೇಮಕಾತಿಯೂ ಪೂರ್ಣಗೊಂಡಿಲ್ಲ. ಹೀಗಾಗಿ ಸಚಿವ ಸಂಪುಟ ಪುನಾರಚನೆ ಕೂಡ ಇದೇ ರೀತಿಯಲ್ಲಿ ತೊಡಕಾಗಬಹುದು ಎಂಬ ಮಾಹಿತಿ ಇದೆ.
ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಒಪ್ಪಿಿದರೆ ಯಾವುದೇ ಗೊಂದಲ ಇಲ್ಲದೆ ಸಂಪುಟ ಪುನರಚನೆಯಾಗುತ್ತದೆ.
ಡಿಕೆಶಿ ಸಂಪುಟ ವಿಸ್ತರಣೆಗೆ ಒಪ್ಪುುವುದು ಕಷ್ಟ
ಸಿಎಂ ಹುದ್ದೆ ಪಡೆಯಲು ನಿಂತಿರುವ ಉಪ ಮುಖ್ಯಮಂತ್ರಿಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ವಿಸ್ತರಣೆಗೆ ಒಪ್ಪುುವುದು ಸುಲಭವಲ್ಲ. ಅವರು ಶತಾಯಗತಾಯ ಸಿಎಂ ಆಗಬೇಕು ಎಂಬ ಕನಸು ಹೊಂದಿರುವುದರಿಂದ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ಸಿಎಂ ಗಾದಿಯಿಂದ ತೆರವು ಮಾಡಿ ತಮ್ಮನ್ನು ಸಿಎಂ ಮಾಡಬೇಕು ಎಂದು ಹೈಕಮಾಂಡ್ಗೆ ಮನವಿ ಮಾಡಬಹುದು. ಇದಕ್ಕಾಾಗಿಯೇ ಅವರು ದೆಹಲಿಯಲ್ಲಿ ಬೀಡು ಬಿಟ್ಟಿಿದ್ದಾರೆ ಎಂಬ ಮಾಹಿತಿ ಇದೆ.

