ಸುದ್ದಿಮೂಲವಾರ್ತೆ
ಸಿರವಾರ: ಏ.೧ ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜೆಡಿಎಸ್ ಗೆ ಮತನೀಡಿ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ವಾರ್ಡ್ ನಂ.೧೪ರ ಬಿಜೆಪಿ ಕಾಂಗ್ರೆಸ್, ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿಕೊಂಡು ಮಾತನಾಡಿ ಕಾಂಗ್ರೆಸ್ ಪಕ್ಷ ಅನೇಕ ವರ್ಷ ಆಡಳಿತ ಮಾಡಿದರು. ಸಿರವಾರ ಪಟ್ಟಣಕ್ಕೆ ಅಭಿವೃದ್ಧಿ ಕೊಡುಗೆ ಏನು, ಪಟ್ಟಣ ಪಂಚಾಯತ ಕಟ್ಟಡ, ರಸ್ತೆ ವಿಭಜಕ, ಬೀದಿ ದೀಪಾ, ಬಸ್ ನಿಲ್ದಾಣ, ಶಾಲಾ ಕಾಲೇಜುಗಳು, ಸಿಸಿರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಪಟ್ಟಣದ ಜನತೆ ವಿಚಾರಮಾಡಿ, ಮತನೀಡಿ, ಪುನಃ ಶಾಸಕರಾದರೆ ಮಿನಿ ವಿಧಾನ ಸೌಧ, ಶಾಶ್ವತ ಕುಡಿಯುವ ನೀರು, ಕ್ರೀಡಾಂಗಣ ನನ್ನ ಗುರಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್,ಜಿ.ಲೋಕರಡ್ಡಿ, ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ್, ರಾಜಾ ಆದರ್ಶ ನಾಯಕ, ಅಮರೇಶ ಸಾಹುಕಾರ್ ಚಾಗಭಾವಿ, ವಲಿಸಾಬ್, ಸತ್ತರ್ ಸಾಬ್ ದಾನಪ್ಪ, ಗ್ಯಾನಪ್ಪ, ನಾಗರಾಜ, ಚಂದ್ರಶೇಖರಗೌಡ, ಯಲ್ಲಪ್ಪ ಸೇರಿದಂತೆ ಅನೇಕರು ಇದ್ದರು.