ಸುದ್ದಿಮೂಲ ವಾರ್ತೆ
ತುಮಕೂರು ಸೆ.21 : ಹೆಚ್.ಐ.ವಿ ಸೋಂಕಿಗೆ ಯುವ ಜನರು ಹೆಚ್ಚಾಗಿ ಬಲಿಯಾಗುತ್ತಿದ್ದು, ಯುವಕರಲ್ಲಿ ಹೆಚ್ಚು ಅರಿವು ಮೂಡಿಸಲು ಹಾಗೂ ಅವರ ಆರೋಗ್ಯ ಕಾಪಾಡಿಕೊಳ್ಳಲು ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಬಿ.ಎನ್. ಅವರು ತಿಳಿಸಿದರು.
ಯುವಜನೋತ್ಸವದ ಅಂಗವಾಗಿ ಸಿದ್ದಗಂಗಾ ಕ್ರಾಸ್ನಿಂದ ಎಮ್.ಜಿ. ಸ್ಟೇಡಿಯಂವರೆಗೆ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, ಸ್ಪರ್ಧೆಗೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಜೇತರಿಗೆ ಪ್ರಥಮ ಬಹುಮಾನ ರೂ. 5000, ದ್ವಿತೀಯ ಬಹುಮಾನ ರೂ. 3500, ತೃತೀಯ ರೂ. 2500 ಹಾಗೂ 7 ಸಮಾಧಾನಕರ ಬಹುಮಾನ ನೀಡಲಾಗುವುದು ಹಾಗೂ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಸನತ್ ಕುಮಾರ್ ಜಿ.ಕೆ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಡಾ. ರಾಮೇಗೌಡ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿಗಳು, ಡಾ. ಚಂದ್ರಶೇಖರ್, ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಶ್ರೀ, ಶಿವಪ್ರಸಾದ್, ಅಥ್ಲೆಟಿಕ್ ಕೋಚ್, ಕ್ರೀಡಾ ಇಲಾಖೆ, ಡ್ಯಾಪ್ಕೋ ಕಛೇರಿ ಸಿಬ್ಬಂದಿ, ಎನ್.ಟಿ.ಇ.ಪಿ ಸಿಬ್ಬಂದಿ ಹಾಜರಿದ್ದರು.
ವಿಜೇತರು : ಅವಿದೀಶ್ ನಿಷಾದ್, ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಮತ್ತು ಕುಮಾರಿ ನಿಷಿತಾ ಕೇಶವ್, ಜೆ.ಎಸ್. ಪದವಿ ಪೂರ್ವ ಕಾಲೇಜು ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.