ಸುದ್ದಿಮೂಲ ವಾರ್ತೆ ಅರಕೇರಾ, ಡಿ.24:
ತಾಲೂಕಿನ ಬಿ.ಗಣೇಕಲ್ ಗ್ರಾಾಮದ ಆರಾಧ್ಯ ದೈವ ಶ್ರೀ ಮಾರುತೇಶ್ವರ ದೇವಸ್ಥಾಾನದ ಜಾತ್ರೆೆ ಅದ್ದೂರಿಯಾಗಿ ಜರುಗಿತು.
ಎಳ್ಳು ಅಮಾವಾಸ್ಯೆೆಯ ಐದನೇ ದಿನ ಶ್ರೀ ಮಾರುತೇಶ್ವರ ದೇವರಿಗೆ ಬೆಳಗಿನಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಮಧ್ಯಾಾಹ್ನ ಸರ್ವಜನಾಂಗದ ವತಿಯಿಂದ ದೈವಪೂಜೆ, ದೀರ್ಘದಂಡ ನಮಸ್ಕಾಾರ ಭಕ್ತಿಿಯಿಂದ ನೆರವೇರಿತು. ರಾತ್ರಿಿ 7.30 ಕ್ಕೆೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ಹೂವಿನ ಹಾರ, ರುದ್ರಾಾಕ್ಷಿ ಹಾರ, ವಿದ್ಯುತ್ ದೀಪದ ಮಾಲೆ, ಮತ್ತು ಬಣ್ಣದ ಚಿತ್ರಗಳಿಂದ ರಥ ಅಲಂಕರಿಸಿ ಕಳಸ ಪ್ರತಿಷ್ಠಾಾಪನೆ ಮಾಡಿದ್ದರು. ರಥ ಸಾಗುವ ಮಾರ್ಗದಲ್ಲಿ ಡೊಳ್ಳು, ವಿವಿಧ ವಾದ್ಯಗಳೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಂತಿಮವಾಗಿ ರಾತ್ರಿಿ 9 ಗಂಟೆಗೆ ರಥದಿಂದ ದೇವರ ಉತ್ಸವ ಮೂರ್ತಿ ಇಳಿಸಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗುಡಿದುಂಬಿಸಲಾಯಿತು.
ಬುಧವಾರ ಸಹಸ್ರಾಾರು ಭಕ್ತರ ನಡುವೆ ಹಾಲುಗಂಬ ಉತ್ಸವ ಜರುಗಿತು. ಹಾಲುಗಂಬಕ್ಕೆೆ ಲೋಳೆ ರಸ, ಜಾಜು ಲೇಪನ ಮಾಡಲಾಗಿತ್ತು. ಕಂಬದ ಮೇಲೆ ಕುಳಿತ ಪೂಜಾರಿ ಮೇಲಿಂದ ಹಾಲು, ಮಜ್ಜಿಿಗೆ, ನೀರು ಬಿಟ್ಟರು. ಸ್ಪರ್ಧಾಳುಗಳು ನಾ ಮುಂದು, ತಾ ಮುಂದು ಎಂದು ಪೈಪೋಟಿ ತೋರಿದರು. ಸಿಳ್ಳೆೆ, ಕೇಕೆ, ಚಪ್ಪಾಾಳೆ ಮೊಳಗಿದವು. ಸ್ಪರ್ಧಾಳುಗಳು ಕಂಬ ಹತ್ತುವಾಗ ಜಾರಿ ಬೀಳುವ ದೃಶ್ಯ ಸಾಮಾನ್ಯವಾಗಿತ್ತು. ಕೊನೆವರೆಗೂ ಬಸವರಾಜ ಪಿಲಿಗುಂಡ ಎನ್ನವವರು ಪೈಪೋಟಿ ಪ್ರದರ್ಶನ ಮಾಡಿದರು. ಸಂಜೆ 6.35 ಗಂಟೆಯಾದರೂ ಯಾವ ಸ್ಪರ್ಧಾಳುಗಳೂ ಹಾಲುಗಂಬದ ತುದಿ ತಲುಪಿ ಪ್ರಥಮ ರಾಗದಹಿನ್ನಲೆ ಕಂಬದ ಮೇಲೆ ಕುಳಿತ ಪೂಜಾರಿ ಯೇ ಕಂಬವನ್ನು ಹರಿದು ಸ್ಪರ್ಧೆಗೆ ಅಂತ್ಯ ಹಾಡಿದರು.
ಅದ್ಧೂರಿಯಾಗಿ ಜರುಗಿದ ಮಾರುತೇಶ್ವರ ಜಾತ್ರೆ ಹಾಲುಗಂಬ ಸ್ಪರ್ಧೆ ಕಣ್ತುಂಬಿಕೊಂಡ ಜನಸ್ತೋಮ

