ಕೆಜಿಎಫ್, ಮಾ.24: ಸಮೀಪದ ಟಿ ಗೊಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಯ್ಯಪಲ್ಲಿ ಗ್ರಾಮದಲ್ಲಿ ಮಷಮ್ಮ ದೇವಿಯ ಉತ್ಸಾವ ಯುಗಾದಿ ಮತ್ತು ದಸಾರ ಹಬ್ಬಗಳ ದಿನದಂದು ಮಾಡುವ ಸಂಪ್ರಾದಯವಿದೆ.
ಯುಗಾದಿ ಹಬ್ಬದ ಪ್ರಯುಕ್ತ ಬುದುವಾರ ಸಂಜೆ ಊರಿನ ಹೊರವಲಯದಲ್ಲಿ ಬೃಹದಕಾರದ ಆಲದಮರದ ಕೆಲಗೆ ತಾತ್ಕಲಿಕವಾಗಿ ಊರಿನವರು ದೇವಸ್ಥಾವನ್ನು ನಿರ್ಮಣ ಮಾಡಿ ಗುರುವಾರ ಬೆಳಗ್ಗಿನ ಜಾವ ಸುಮಾರು 4.೦೦ ಗಂಟೆಗೆ ತಂಬಿಟ್ಟು ದೀಪಗಳನ್ನು ಮಾಡಿ ದೇವರ ಹರಿಕೆಗಳನ್ನು ತೀರಿಸುತ್ತಾರೆ.
ದೇವರಿಗೆ ಹೂವಿನಿಂದ ಆಲಂಕಾರಮಾಡಿ, ಜನರೇ ದೇವಿಯ ಉತ್ಸವವನ್ನು ಭುಜದ ಮೇಲೆ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಪದ್ದತಿ ಈ ಊರಿನಲ್ಲಿ ಸುಮಾರು ವರ್ಷಗಳಿಂದ ಬಂದಿರುವ ಸಂಪ್ರದಾಯವಾಗಿದೆ.
ಗುರುವಾರ ಸಂಜೆ ಸುಮಾರು 6ಗಂಟೆಯ ಮೇಲೆ ದೇವರ ಉತ್ಸವವನ್ನು ಊರಿನ ಮುಖ್ಯದ್ವರದಲ್ಲಿ ತೋರಣಕಟ್ಟಿ, ಪೂಜೆಮಾಡಿ, ಟಗರು ಬಳಿಕೊಟ್ಟು, ಉತ್ಸವವನ್ನು ಊರಿನೊಳಗೆ ಬರಮಾಡಿಕೊಳ್ಳುತ್ತಾರೆ.
ಬೀದಿಗಳಲ್ಲಿ ಮೆರವಣಿಗೆ ಆದ ಮೇಲೆ ಉತ್ಸವವನ್ನು ಊರಿನ ಮಧ್ಯ ಇಟ್ಟು ಊರಿನ ಪ್ರತಿ ಮನೆಯವರು ಪೂಜೆ ಮಾಡಿ ದೇವರ
ಉತ್ಸವವನ್ನು ಸಂಜೆ ದೇವಸ್ಥಾನಕ್ಕೆ ಸೇರಿಸುತ್ತಾರೆ. ಮತ್ತೇ ದೇವರನ್ನು ದಸರಾ ಹಬ್ಬದಿನದಂದು ಹೊರಗೆ ತಗಿಯುತ್ತಾರೆ. ದೇವರ ಪೂಜೆಕಾರ್ಯಕ್ರಮಗಳನ್ನು,ಎ.ಪಿ.ಎಮ್.ಪಿ ಮಾಜಿ ಉಪಧ್ಯಾಕ್ಷ ರಾಮಕೃಷ್ಣರೆಡ್ಡಿ ಕುಟುಂಬಸ್ಥರ ನೇತೃತ್ವದಲ್ಲಿನಡೆಯುತ್ತಾದೆ. ಇದ್ದು ಈ ಊರಿನ ಹಲವಾರು ವರ್ಷಗಳ ಪದ್ದತಿ,
ಈ ಸಂದರ್ಭದಲ್ಲಿ ಊರಿನಮುಖಂಡ ಗುರುಮೂರ್ತಿರೆಡ್ಡಿ, ಅಂಗಡಿ ಶ್ರೀರಾಮಪ್ಪ, ಆಂಜಪ್ಪ, ಪೂಜಾರಿ ವೆಂಕಟೇಶಪ್ಪ, ಯುವಕರಾದ ಶಿವಕುಮಾರ್, ಮಂಜುನಾಥ, ಅಮರೇಶ್, ಹರೀಶ್, ಕುಮಾರ್, ವಿಜಯ್, ಗ್ರಾಮಸ್ಥರು, ಉಪಸ್ಥಿತರಿದರು.