ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ನ. 24 : ತಾಲೂಕಿನ ಕಸಬಾ ಹೋಬಳಿಯ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೆಳ್ಳೂಟಿ ಗೇಟ್ ಬಳಿ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಳ್ಳೂಟಿ ವಲಯ ಇವರ ಆಶ್ರಯದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆ ಮಾರ್ಗದರ್ಶನದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆಂಜಿನಪ್ಪ (ಪುಟ್ಟು ) ಮಾತನಾಡಿ, ಪುರುಷರಷ್ಟೇ ಸಮಾನವಾಗಿ ಮಹಿಳೆಯರು ಕೂಡ ಜವಾಬ್ದಾರಿ ಹೊತ್ತರೆ ದೇಶದಲ್ಲಿ ಒಂದು ಕ್ರಾಂತಿಯಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶ ಆಗುವುದಕ್ಕೆ ಭಾರತ ಮೊದಲ ಸ್ಥಾನದಲ್ಲಿ ನಿಂತುಕೊಳ್ಳುವುದಕ್ಕೆ ದಾರಿಯಾಗುತ್ತದೆ. ಅದಕ್ಕೆ ಎಲ್ಲಾ ಮಹಿಳೆಯರು ಎಲ್ಲಾ ವಿಚಾರಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಅಭಿಮತ ಎಂದರು.
ಮಹಿಳಾ ಒಕ್ಕೂಟಗಳಿಗೆ ಹಣ ಸೌಲಭ್ಯವನ್ನು ಒದಗಿಸಿ ವ್ಯವಹಾರ ಮಾಡಲಿ. ಒಂದು ಸಂಘಟನೆ ಮಾಡಲಿ ಅವರ ಕುಟುಂಬ ಪೋಷಣೆಯಾಗಲಿ ಎಂಬ ಆಲೋಚನೆ ಬಂದಿದ್ದು ಡಾ. ಸನ್ಮಾನ್ಯ ವೀರೇಂದ್ರ ಹೆಗ್ಗಡೆ ರವರಿಗೆ ಮಾತ್ರ ಎಂದು ತಿಳಿಸಿದರು.
ಬೆಳ್ಳೂಟಿ ಸಂತೋಷ್ ಮಾತನಾಡಿ, ಸಾಮಾಜಿಕವಾಗಿ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಏನಾದರು ಸಹಾಯ ಮಾಡಬೇಕು. ಆ ಸಹಾಯ ನೇರವಾಗಿ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವಂತಹ ಸಂಸ್ಥೆ ಎಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. .
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ , ಪ್ರಾದೇಶಿಕ ನಿರ್ದೇಶಕ ಶೀನಪ್ಪ.ಎಂ, ಜಿಲ್ಲಾ ನಿರ್ದೇಶಕ ಪ್ರಶಾಂತ್ ಸಿ.ಎಸ್, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಬೆಳ್ಳೂಟಿ ಎಸ್ ವೆಂಕಟೇಶ್, ಹಿತ್ತಲಹಳ್ಳಿ ಸುರೇಶ್, ಚಿಕ್ಕಬಳ್ಳಾಪುರ ಬಿ.ವಿ ಕೃಷ್ಣ, ಶ್ರೀನಿವಾಸ್ ರಾಮಯ್ಯ, ಬೆಳ್ಳೂಟಿ ಡಿ.ವಿ ಚಂದ್ರಪ್ಪ, ಬೋದಗೂರು ವೆಂಕಟಸ್ವಾಮಿ ರೆಡ್ಡಿ,ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಿತ್ತಲಹಳ್ಳಿ ಎಚ್.ಆರ್ ವೆಂಕಟೇಶ್,ಮಾಜಿ ಉಪಾಧ್ಯಕ್ಷ ಆನೂರು ವಿಜಯೇಂದ್ರ,ಪಿಡಿಓ ಖ್ಯಾತ್ಯಾಯಾಣಿ ,ಬೆಳ್ಳೂಟಿ ನಾಗೇಶ್ ಗೌಡ,ಹಿತ್ತಲಹಳ್ಳಿ ಚಿಕ್ಕಮನಿಯಪ್ಪ,ಗುರುರಾಜ್, ಇನ್ನು ಮುಂತಾದವರು ಹಾಜರಿದ್ದರು.