ಸುದ್ದಿಮೂಲವಾರ್ತೆ
ಕೊಪ್ಪಳ,ನ.5:ಸಾಮೂಹಿಕ ವಿವಾಹ ಎಂದರೆ ಭಾಗ್ಯವಂತರ ಮದುವೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ಚರ ಸ್ವಾಮಿಗಳು ಹೇಳಿದರು.
ಅವರು ಸರದಾರಗಲ್ಲಿ ಪಂಚಕಮಿಟಿಯಿಂದ 19 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಉಚಿತ ಸಾಮೂಹಿಕ ಮಹಿಬೂಬ ಸುಭಾನಿ ಗ್ಯಾರವಿಯ ನಿಮಿತ್ಯ ಆಯೋಜಿಸಿಕೊಂಡು ಬಂದಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.
ಧರ್ಮವನ್ನು ಸರಿಯಾಗಿ ತಿಳಿಯದವ ಧರ್ಮದ ಹೆಸರಿನಲ್ಲಿ ಬಡಿದಾಡುತ್ತಾನೆ ಧರ್ಮಕ್ಕಾಗಿ ರಕ್ತ ಚೆಲ್ಲುವುದು ಧರ್ಮವಲ್ಲ. ರಕ್ತ ಬೇಕಾದವರಿಗೆ ಆಸ್ಪತ್ರೆ ಸೇರಿಸುವುದು ಧರ್ಮ ಎಂದರು.
ನಿಜವಾಗಿ ಭೂಮಿಯಲ್ಲಿ ಇನ್ನೊಬ್ಬರ ಮುಖದಲ್ಲಿ ನಗು ತರಿಸುವ. ಎಲ್ಲರ ಮುಖದಲ್ಲಿ ನಗು ತರಿಸೋದು ನಿಜವಾದ ಧರ್ಮ ಎಂದರು.
ಧರ್ಮದ ಅರ್ಥ ಪ್ರೀತಿ. ನನ್ನೊಳಗಿನ ಪ್ರೀತಿಯನ್ನು ಹಂಚಬೇಕು. ಯಾರು ಪ್ರೀತಿಸೋದಿಲ್ಲ ಅವರು ಧರ್ಮವಂತರು ಎಂದು ಹೇಳಿದರು.ಪ್ರಸ್ತಾವಿಕ ಖಾಸಿಂ ಸರದಾರ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪಂಚಕಮಿಟಿ ಖಾದರಸಾಬ, ಕೆ ಬಸವರಾಜ ಹಿಟ್ನಾಳ ಮುಕ್ತಿ ನಜೀರಸಾಬ. ಕೆ ಎಂ ಸಯ್ಯದ. ಶಾಮೀದಸಾಬ. ಝುಲ್ಲು ಖಾದ್ರಿ ಸೇರಿ ಹಲವರು ಇದ್ದರು.