ಸುದ್ದಿಮೂಲ ವಾರ್ತೆ ಕವಿತಾಳ, ಡಿ.14
ಆರೂಢ ಅಯ್ಯಪ್ಪ ತಾತನವರ ಜಾತ್ರೆೆ ಅಂಗವಾಗಿ ಪ್ರತಿ ವರ್ಷ ಸರಳವಾಗಿ ಸಾಮೂಹಿಕ ವಿವಾಹ ಸಮಾರಂಭ ಮಠದಲ್ಲಿ ಹಮ್ಮಿಿಕೊಳ್ಳಲಾಗುತ್ತಿಿರುವುದು ನಿಜಕ್ಕೂ ಶ್ಲಾಾಘನೀಯ ಕಾರ್ಯ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಸಮೀಪದ ಮಸ್ಕಿಿ ತಾಲೂಕಿನ ಮಲ್ಲದಗುಡ್ಡ ಗ್ರಾಾಮದಲ್ಲಿ ಆರೂಢ ಅಯ್ಯಪ್ಪ ತಾತನವರ 44ನೆ ಸೇವೆ ಸಮಾರಂಭ ಮತ್ತು ಆರೂಢ ಕರಿಬಸವ ಸ್ವಾಾಮಿಗಳ 10ನೇ ಪುಣ್ಯಸ್ಮರಣೆ ಭಾನುವಾರ ಹಮ್ಮಿಿಕೊಂಡಿದ್ದ ಕಾರ್ಯಕ್ರಮ ಉದ್ಘಾಾಟಿಸಿ ಶಾಸಕರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತಿಿರುವುದರಿಂದ ಗ್ರಾಾ ಮೀಣ ಭಾಗದಲ್ಲಿ ವಿಶೇಷವಾಗಿ ಬಡವರಿಗೆ ದುಂದು ವೆಚ್ಚಕ್ಕೆೆ ಕಡಿವಾಣ ಹಾಕಿದಟತಾಗುತ್ತದೆ ನೂತನ ವಿವಾಹವಾಗಿ ದಾಂಪತ್ಯ ಜೀವನಕ್ಕೆೆ ಕಾಲಿಟ್ಟ ಜೋಡಿಗಳ ತಂದೆ ತಾಯಿಗೆ ಮರೆಯದೆ ಚೆನ್ನಾಾಗಿ ನೋಡಿಕೊಳ್ಳಿಿ ಎಂದರು.
ಸಾಮೂಹಿಕ ವಿವಾಹ ಸಮಾರಂಭದಲ್ಲಿ 10 ಜೋಡಿ ನೂತನ ದಾಂಪತ್ಯ ಜೀವನಕ್ಕೆೆ ಕಾಲಿಟ್ಟ ವಧು -ವರರಿಗೆ ಸ್ವಾಾಮೀಜಿಗಳು ಆಶೀರ್ವಾದ ಮಾಡಿ ಶುಭ ಕೋರಿದರು.
ಪುರವಂತಿಕೆ ಸೇವೆ, ನಂದಿಕೋಲು ಸೇವೆ, ಜೋಡಿ ಪಲ್ಲಕ್ಕಿಿ ಉತ್ಸವ ಅದ್ದೂರಿಯಾಗಿ ಜರುಗಿತು. ಆರೂಢ ಅಯ್ಯಪ್ಪ ತಾತನವರಿಗೆ ತುಲಾ ಭಾರ, ಸಾಧಕರಿಗೆ ಸನ್ಮಾಾನ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದಿವ್ಯ ಸಾನಿಧ್ಯ ಮಠದ ಪೀಠಾಧಿಪತಿ ಆರೂಢ ಅಯ್ಯಪ್ಪ ತಾತ, ಕೊಡೇಕಲ್ ಮಹಲಿಮಠದ ವೃಷಭೇಂದ್ರ ಸ್ವಾಾಮಿಗಳು, ಗಲಗ ಮಠದ ಗಂಗಾಧರ ಸ್ವಾಾಮೀಜಿ, ಕೊಡೇಕಲ್ ಮಠದ ಸಂಗಯ್ಯ ಸ್ವಾಾಮಿ, ಯರಮರಸ್ನ ಕಲಿಗಣನಾಥ ಸ್ವಾಾಮಿ, ಅಬ್ಬಾಾಸ್ ಅಲಿ ತಾತ ಗೋನವಾರ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿಿ, ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್, ಖಂಡೋಜಿರಾವ್ ಹರ್ವಾಪುರ, ಸಂಗಪ್ಪ ಹಡಪದ, ಮೌನೇಶ ನಾಯಕ, ಮಲ್ಲಯ್ಯ, ಸುರೇಶ ಕುಂಬಾರ ಮತ್ತು ಮಠದ ಭಕ್ತರು ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಸಾಮೂಹಿಕ ವಿವಾಹ ಆಯೋಜನೆ ಶ್ಲಾಾಘನೀಯ – ಶಾಸಕ ತುರ್ವಿಹಾಳ

