ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 21 : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 500 ಜನ ಭಕ್ತಾದಿಗಳು ಪೂಜೆಗೆ ಆಗಮಿಸಿದ್ದರು.
ಪೂಜೆಯ ನಂತರ ಸಭಾ ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ತಳಗವಾರ ಆನಂದ್ ಮಾತನಾಡಿ, ಭಕ್ತಿ ಹಾಗೂ ಶ್ರದ್ಧೆ ಮುಖ್ಯ. ಮನುಷ್ಯನಿಗೆ ದೇವರ ಮೇಲೆ ಭಕ್ತಿ ಎಂಬುದು ಬಹಳ ಮುಖ್ಯ ಪೂಜೆ ಮಾಡುವಲ್ಲಿ ಮನಸ್ಸು ಎಂಬ ಭಾವನೆಯನ್ನು ದೇವರಲ್ಲಿ ಅರ್ಪಿಸಿ ಭಕ್ತಿಯಿಂದ ದೇವರ ನಾಮದೊಂದಿಗೆ ಪೂಜೆ ಮಾಡಿದರೆ ಮಾತ್ರ ದೈವಾನುಗ್ರಹ ಪಡೆಯಲು ಸಾಧ್ಯ ಎಂದು ನೋಡಿದರು .
ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ರವರು ಮಾತನಾಡಿ, ವರಮಹಾಲಕ್ಷ್ಮಿ ಆಚರಣೆಯ ವಿಶೇಷ ಸಾಮೂಹಿಕವಾಗಿ ವರಮಹಾಲಕ್ಷ್ಮಿಯ ಮಹತ್ವ ಒಂಬತ್ತು ದಿನಗಳ ಕಾಲ ಸುಧೀರ್ಘವಾಗಿ ಆಚರಿಸಲಾಗುವ ಮಂಗಳಕರ ಹಬ್ಬವಾಗಿದೆ. ಈ ದಿನಗಳಲ್ಲಿ ವರಮಹಾಲಕ್ಷ್ಮಿಪೂಜಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಶುಭ ತರುವಂತಹ ದಿನಗಳಾಗಿದೆ ಮತ್ತು ಧರ್ಮಸ್ಥಳ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.
ಸ್ಥಳದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ರಮೇಶ್, ಅಮೃತ ರಾಮೇಗೌಡ, ಸಿಎಂ ನಾರಾಯಣಸ್ವಾಮಿ, ಭ್ರಮರಾಂಬ, ಶ್ರೀನಿವಾಸ್,ರಮೇಶ್ ವೆಂಕಟ ರಾಮು, ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕರಾದ ಇಲಿಯಾಸ್ ಬೇಗ್ ಮತ್ತು ವಲಯದ ಸೇವಾ ಪ್ರತಿನಿಧಿಗಳು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಚಿಮಂಗಲ ವಲಯಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.