ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.25:
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಅನ್ನು ವಿರೋಧಿಸಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ಬಿಜೆಪಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಕರಿಯಪ್ಪ, ರಾಜ್ಯದಲ್ಲಿ ಆಡಳಿತ ನಡೆಸುತ್ತಿಿರುವ ಕಾಂಗ್ರೆೆಸ್ ಸರಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಜಾರಿ ಮೂಲಕ ಪ್ರಜಾಪ್ರಭುತ್ವದ ಹಕ್ಕು ಕಿತ್ತಿಿಕೊಳ್ಳಲು ಮುಂದಾಗಿದೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ಮಾತನಾಡುವ ಸ್ವಾಾತಂತ್ರ ನೀಡಿದೆ. ಆದರೆ ಕಾಂಗ್ರೆೆಸ್ ಸರಕಾರ ಈ ಕಾಯ್ದೆೆ ಮೂಲಕ ಮಾತನಾಡುವ ಹಕ್ಕು ಕಿತ್ತಿಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಜಾರಿ ಮಾಡದಂತೆ ತಹಶೀಲ್ದಾಾರರ ಮೂಲಕ ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋೋಟ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಾಪುರು, ಗ್ರಾಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ್ ರಾಮತ್ನಾಾಳ್, ಮುಖಂಡರಾದ ಎಂ.ದೊಡ್ಡಬಸವರಾಜ, ಸಿದ್ದಲಿಂಗಯ್ಯ ಸ್ವಾಾಮಿ ವಕೀಲರು, ಪರಮೇಶಪ್ಪ ಆದಿಮನಿ, ರವಿ ರಾಠೋಡ, ಯಮನಗೌಡ, ಅಮರೇಶ ರೈತನಗರ ಕ್ಯಾಾಂಪ್, ರಾಮದಾಸ್, ಮಲ್ಲಿಕಾರ್ಜುನ ರೆಡ್ಡಿಿ, ಪಕೀರಪ್ಪ ಬಾಗೋಡಿ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಅಟಲ್ ಜನ್ಮದಿನ:
ಪ್ರತಿಭಟನೆಗೂ ಮುನ್ನ ನಗರದ ಬಿಜೆಪಿ ಕಾರ್ಯಾಲಯದಲ್ಲಿ ದೇಶ ಕಂಡ ಶ್ರೇಷ್ಠ ನಾಯಕ, ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇವರ 101ನೇ ಜನ್ಮದಿನ ಆಚರಿಸಲಾಯಿತು.
ಧ್ವೇಷ ಭಾಷಣ ಮಸೂದೆ ವಿರೋಧಿಸಿ ಬಿಜೆಪಿಯಿಂದ ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನೆ

