ಸುದ್ದಿಮೂಲ ವಾರ್ತೆ ಕಲಬುರಗಿ, ಜ.19:
ಹುಬ್ಬಳ್ಳಿಿಯ ಇನಾಮ ವೀರಪೂರ ಗ್ರಾಾಮದ ಮಾದಿಗ ಸಮಾಜದ ವಿವೇಕಾನಂದರವರ ಕುಟುಂಬದ ಮಾನ್ಯಳ ಕೊಲೆ ಪ್ರಕರಣ ಖಂಡಿಸಿ, ಭಾರತೀಯ ಜನತಾ ಪಕ್ಷ ಎಸ್ಸಿಿ ಮೋರ್ಚಾದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಆಕ್ರೋೋಶ ಹೊರ ಹಾಕಲಾಯಿತು.
ನಗರದ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿ, ಮಾನ್ಯಳ ಕೊಲೆ ಮಾಡಿ, ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಬಂಧಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬಂದಾಗಿನಿಂದ ದಲಿತ ಮಹಿಳೆಯರ ಮೇಲೆ ಹಲ್ಲೆ, ಕಗ್ಗೋೋಲೆಗಳು ಹೆಚ್ಚಾಾಗಿದೆ. ಆದರೆ, ಸರ್ಕಾರ ಮಾತ್ರ ಯಾವುದೇ ರೀತಿಯಿಂದ ದಲಿತರ ರಕ್ಷಣೆಗೆ ಮುಂದಾಗುತ್ತಿಿಲ್ಲ. ದಲಿತರ ಬಗ್ಗೆೆ ಕಾಳಜಿ ಕಿಂಚಿತ್ತೂ ರಾಜ್ಯ ಸರ್ಕಾರಕ್ಕಿಿಲ್ಲ ಎಂಬುದು ಬಹಿರಂಗವಾಗಿ ಕಂಡುಬರುತ್ತಿಿದೆ.ಈಗಾಗಲೇ ಹುಬ್ಬಳ್ಳಿಿಯಲ್ಲಿ ನಡೆದ ಕೊಲೆ ಪ್ರೀತಿ ಸೋತಿತ್ತು,ಜಾತಿ ಗೆದ್ದಿತ್ತು ಎನ್ನುವ ರೀತಿಯಲ್ಲಿ ಕೊಲೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು ಜಾರಿಗೆ ತರಬೇಕೆಂದು ಬಿಜೆಪಿ ಆಗ್ರಹಿಸಿತು.
ಇದರ ಜೊತೆಗೆ ವಿವಿಧ ಬೇಡಿಕೆಗಳ ಕುರಿತು ಮಾತನಾಡಿದ ಪ್ರತಿಭಟನಾಕಾರರು,ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿಿ ನಿಗಮದಲ್ಲಿ ಬರುವ ಯೋಜನೆ ಯಥಾವತ್ತಾಾಗಿ ಜಾರಿಗೊಳಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಳಮೀಸಲಾತಿ ಪ್ರಕಾರ ವಿದ್ಯಾಾರ್ಥಿಗಳಿಗೆ ಪ್ರವೇಶ ನೀಡಬೇಕು.ಪ.ಜಾ.ಮಹಿಳೆ ರಂಜಿತಾಳ ಕೊಲೆ ಮಾಡಿದ ಆರೋಪಿಗಳಿಗೆ ಕೂಡಲೇ ಶಿಕ್ಷೆಗೆ ಒಳಪಡಿಸಬೇಕು. ಎಸ್ಸಿಿಪಿ,ಟಿಎಸ್ಪಿಿ ಯೋಜನೆಯಡಿ ಸರ್ಕಾರ ದಲಿತರ ಹಣ ದುರ್ಬಳಕೆ ಮಾಡಿ ಅನುದಾನದಲ್ಲಿ ಬೇರೆ ಯೋಜನೆಗಳಿಗೆ ಖರ್ಚು ಮಾಡಿದ್ದು ಖಂಡನೀಯವಾಗಿದ್ದು,ಮುಂದಿನ ದಿನಗಳಲ್ಲಿ ಎರಡು ನಿಗಮಗಳಿಗೆ ಹೆಚ್ಚಿಿನ ಅನುದಾನ ನೀಡಬೇಕು ಎಂದು ಎಸ್ಸಿಿ ಮೋರ್ಚಾ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಎಸ್ಸಿಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜನಕೇರಿ, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಭಂಕೂರ, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅಮರನಾಥ ಪಾಟೀಲ್ ಅಂಬಾರಾಯ ಅಷ್ಟಗಿ, ವಿಶಾಲ್ ದರ್ಗಿ, ಶಿವಯೋಗಿ ನಾಗೇನಹಳ್ಳಿಿ, ಸಂತೋಷ ಹಾದಿಮನಿ,ರಾಜು ವಾಡೇರ್ಕ, ಬಸವರಾಜ ಬೆಣ್ಣೂರ, ಪ್ರದೀಪ್ ಭಾವೆ, ಅಮೃತ ಸಾಗರ, ರಮೇಶ್ ವಾಡೇರ್ಕ, ಗೋಪಾಲ ಕಟ್ಟಿಿಮನಿ,ರಂಜಿತ ಮೂಲಿಮನಿ, ಡಾ.ಸುಧಾ ಹಾಲಕಾಯಿ ಸೇರಿದಂತೆ ಹಲವು ಮುಖಂಡರು ಉಪಸ್ಥಿಿತರಿದ್ದರು.
ಬಿಜೆಪಿ ಎಸ್ಸಿ ಮೋರ್ಚಾದಿಂದ ಬೃಹತ್ ಪ್ರತಿಭಟನೆ: ರಾಜ್ಯ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿಯಿಲ್ಲ

