ಸುದ್ದಿಮೂಲ ವಾರ್ತೆ ದೇವದುರ್ಗ, ೆ.12:
ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಿಕ ಮುಷ್ಕರ ಬೆಂಬಲಿಸಿ ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಯ ಸಾವಿರಾರು ಕಾರ್ಮಿಕರು ಎಪಿಎಂಸಿ ಆವರಣದಿಂದ ಮಿನಿವಿಧಾನಸೌಧವರೆಗೆ ಮೆರವಣಿಗೆ ನಡೆಸಿದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರಕ್ಕೆೆ ಬಂದಾಗಿನಿಂದ ಬಂಡವಾಳ ಶಾಹಿಗಳ ಪರ ಆಡಳಿತ ನಡೆಸುವ ಮೂಲಕ ಕಾರ್ಮಿಕರನ್ನು ಶೋಷಣೆ ಮಾಡುತ್ತಿಿದೆ. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ಶೋಷಣೆಗೆ ಮುಂದಾಗಿದೆ. ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದುಡಿಯುವ ವರ್ಗದ ಮೇಲೆ ಹೊರೆಹಾಕುತ್ತಿಿದೆ. ಇದರಿಂದ ಸ್ಥಳೀಯ ಕೈಗಾರಿಕೆ ಕುಂಠಿತವಾಗಿ, ಆರ್ಥಿಕ ಬೆಳವಣಿಗೆಗೆ ಹೊಡೆತಬಿದ್ದಿದೆ. ನಿರುದ್ಯೋೋಗ ಸಮಸ್ಯೆೆ ಹೆಚ್ಚಾಾಗಿದೆ ಎಂದು ಆರೋಪಿಸಿದರು.
ಕೂಡಲೇ 4ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ವಿಬಿ ಜಿ.ರಾಮ್.ಜಿ ಕಾಯ್ದೆೆ, ಶಾಂತಿಕಾಯ್ದೆೆ ವಾಪಸ್ ಪಡೆಯಬೇಕು. ಆಶಾ, ಬಿಸಿಯೂಟ, ಅಂಗನವಾಡಿ ಸೇರಿ ವಿವಿಧ ನೌಕರರಿಗೆ ಕನಿಷ್ಠ 36ಸಾವಿರ ರೂ. ವೇತನ ನೀಡಬೇಕು. ರೈತರ ಬೆಳೆಗಳಿಗೆ ಬೆಂಬಲಬೆಲೆ ನೀಡಬೇಕು. ಹಮಾಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಿಸಬೇಕು. ಕಟ್ಟಡ ಕಾರ್ಮಿಕರಿಗೆ ಎಲ್ಲ ಸೌಲಭ್ಯ ಕಲ್ಪಿಿಸಬೇಕು ಎಂದು ಒತ್ತಾಾಯಿಸಿದರು.
ಮುಖಂಡರಾದ ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬಿಿರ್, ರಂಗಮ್ಮ ಅನ್ವರ್, ರಮಾದೇವಿ, ಶ್ರೀಲೇಖಾ, ರೇಣುಕಾ, ಪಾಂಡುರಂಗ ನಾಯಕ, ಮರಿಯಮ್ಮ, ಹೊನ್ನಪ್ಪ ನಾಯಕ, ಪಂಚಯ್ಯ, ಅಣ್ಣಪ್ಪ, ರೇಣುಕಮ್ಮ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ದೇವದುರ್ಗದಲ್ಲಿ ಸಾರ್ವತ್ರಿಕ ಬೆಂಬಲಿಸಿ ಬೃಹತ್ ಪ್ರತಿಭಟನೆ

