ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.08:
ತಾಲೂಕಿನ ಹಟ್ಟಿಿ ಚಿನ್ನದ ಗಣಿಯ ದಲಿತ ಮಹಿಳೆ ಸ್ಟಾ್ಾ ನರ್ಸ್ ಜ್ಯೋೋತಿ ಕೊಲೆ ಹಾಗೂ ಹುಬ್ಬಳ್ಳಿಿಯ ಇನಾಂ ಮೀರಾಪುರದ ದಲಿತನನ್ನು ಮದುವೆಯಾದ ಗರ್ಭಿಣಿ ಯುವತಿ ಮಾನ್ಯ ಕೊಲೆ ವಿರೋಧಿಸಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಾ ಸಂಚಾಲಕ ಹನಮಂತಪ್ಪ ವೆಂಕಟಾಪೂರ ನೇತೃತ್ವದಲ್ಲಿ ಮಹಿಳೆಯರು ಮುಖಂಡರು (ಬಿ.ಕೃಷ್ಣಪ್ಪ ಬಣ) ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಸಮಾನತೆಯನ್ನು ಸಾರಿದ ಬಸವಣ್ಣನವರ ನಾಡಿಲ್ಲ್ಲ್ಿ ದಲಿತರ ಮೇಲೆ ದೌರ್ಜನ್ಯ ಕೊಲೆಗಳು ನಡೆಯುತ್ತಿಿದ್ದರು ಗೃಹಮಂತ್ರಿಿಗಳಿಂದ ದಲಿತರಿಗೆ ನ್ಯಾಾಯ ಸಿಗದಂತಾಗಿದ್ದು ಮಾನ್ಯಳ ಹತ್ಯೆೆ ಪ್ರಕರಣದಲ್ಲಿ ಸರಕಾರ ತ್ವರಿತ ವಿಶೇಷ ನ್ಯಾಾಯಾಲಯಕ್ಕೆೆ ಪ್ರಕರಣ ವಹಿಸಬೇಕು ಮತ್ತು ನ್ಯಾಾಯಾಂಗ ತನಿಖೆಗೆ ಆದೇಶಿಸಬೇಕು, ಸಮರ್ಯಾದೆ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಾಯಿಸಿ ಗೃಹ ಮಂತ್ರಿಿಗಳಿಗೆ ಬರೆದ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ಪಟ್ಟಣದ ಬಸವಸಾಗರ ವೃತ್ತದಿಂದ ಗಡಿಯಾರ ವೃತ್ತ, ಪೊಲೀಸಠಾಣೆ ರಸ್ತೆೆ ಹಾಗೂ ಬಸ್ ನಿಲ್ದಾಾಣದವರೆಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಶರಣಪ್ಪ ಕಟ್ಟಿಿಮನಿ, ಆಜಪ್ಪ ಕರಡಕಲ್, ಬಸವರಾಜ, ಹನಮಂತಪ್ಪ ಕುಣೆಕೆಲ್ಲೂರು, ಯಂಕಪ್ಪ ಚಿತ್ತಾಾಪೂರ, ಲಕ್ಕಪ್ಪ ನಾಗರಾಳ, ಬಸವರಾಜ ಮುದಗಲ್, ನಾಗರಾಜ ಹಾಲಭಾವಿ, ಹುಸೇನಪ್ಪ ದೊಡ್ಡಮನಿ, ದುರಗಪ್ಪ ಯರಡೋಣ, ಮುತ್ತಣ್ಣ ಗುರುಗುಂಟ, ಅಮರೇಶ ಗೌಡೂರ, ಬಾಲರಾಜ ಗೌಡೂರು, ಮಹಿಳಾ ತಾಲೂಕಾಧ್ಯಕ್ಷೆ ಮೋಕ್ಷಮ್ಮ, ಸಂತೋಷಮ್ಮ, ಚಿನ್ನಮ್ಮ, ಲಕ್ಷ್ಮಿಿ, ದುರಗಮ್ಮ, ದೇವಮ್ಮ ಇತರರು ಭಾಗವಹಿಸಿದ್ದರು.
ದಲಿತ ಯುವತಿಯ ಹತ್ಯೆ : ಆರೋಪಿಗಳ ಬಂಧನಕ್ಕೆ ಲಿಂಗಸುಗೂರಲ್ಲಿ ಬೃಹತ್ ಪ್ರತಿಭಟನೆ

