ಸುದ್ದಿಮೂಲವಾರ್ತೆ
ಕೊಪ್ಪಳ,ಆ.30:73 ವಯಸ್ಸಿನ ಸಂಸದ ಸಂಗಣ್ಣ ಕರಡಿ, 44 ವರ್ಷದ ಶಾಸಕ ಕೆ ರಾಘವೇಂದ್ರ ಹಿಟ್ನಾಳ. ಇಬ್ಬರು ರಾಜಕೀಯ ಅಖಾಡದಲ್ಲಿ ಜಿದ್ದಾಜಿದ್ದ ಪೈಪೋಟಿ ನಡೆಸಿದ್ದಾರೆ. ಇದೇ ಇಬ್ಬರು ಒಂದು ಆಟದ ಮೈದಾನದಲ್ಲಿಯೂ ಏದುರಾಳಿಯಾಗಿ ಪೈಪೋಟಿ ನೀಡಿದ್ದು ಕಂಡು ಬಂತು.
ಕೊಪ್ಪಳದ ರಾಜಕೀಯದಲ್ಲಿ ಹಿರಿಯ ವಯಸ್ಸಿನ ಸಂಸದರು ಸಂಗಣ್ಣ ಕರಡಿ , ಯುವ ವಯಸ್ಸಿನ ರಾಘವೇಂದ್ರ ಹಿಟ್ನಾಳ ಶಾಸಕರಾಗಿದ್ದಾರೆ.
ಕಳೆದ ಒಂದು ದಶಕದಲ್ಲಿ ಕೆ.ಎಂ.ಸೈಯ್ಯದ್ , ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ , ರಾಜಶೇಖರ ಹಿಟ್ನಾಳ ಅವರಂಥ ಯುವಕರೂ ಚುನಾವಣಾ ಕಣಕ್ಕಿಳಿದರು.
ಆದರೆ ಗೆಲುವು ದಕ್ಕುತ್ತಿರುವುದು ಮಾತ್ರ ಸಂಗಣ್ಣ ಕರಡಿ , ರಾಘವೇಂದ್ರ ಹಿಟ್ನಾಳರಿಗೆ ಮಾತ್ರ.
ಕರಡಿ ಹಿಟ್ನಾಳ ಇಬ್ಬರೂ ಚುನಾವಣಾ ಕದನದಲ್ಲಿ ಎದುರಾಳಿಗಳು ಆದವರು ಇಂದು ನಡೆದ ಖೇಲೋ ಇಂಡಿಯಾ ಯೋಜನೆ ಅಡಿ ನಿರ್ಮಾಣ ಆಗಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಲ್ಲಿ ಇಬ್ಬರೂ ಎದುರಾಳಿಗಳಾಗಿ ಬ್ಯಾಡ್ಮಿಂಟನ್ , ವಾಲಿಬಾಲ್ ಆಡಿದರು.
ಅವರೊಂದಿಗೆ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ರತ್ನಂ ಪಾಂಡೆ ಕೂಡ ಆಡಿದರು.ಉದ್ಘಾಟನೆಯಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಭೂಮಕ್ಕನವರ ಸಹ ಉಪಸ್ಥಿತರಿದ್ದರು. ಪಕ್ಷ ಯಾವುದೇ ಇರಲಿ. ರಾಜಕೀಯ ಸೌಹಾರ್ದತೆ ಇರಲಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.