ಸುದ್ದಿಮೂಲ ವಾರ್ತೆ ರಾಯಚೂರು , ಡಿ.11:
ಜಿಲ್ಲೆೆಯ ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಾಮದ ಹಿರಿಯರಾದ ಯಮುನಾಬಾಯಿ ರಘುನಾಥಸಿಂಗ್(80) ನಿಧನರಾಗಿದ್ದಾಾರೆ.
ಮೃತರು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬಿ.ವೆಂಕಟಸಿಂಗ್ ಸೇರಿ ಮೂವರು ಪುತ್ರರು, ನಾಲ್ವರು ಪುತ್ರಿಿಯರು ಸೇರಿ ಅಪಾರ ಬಂಧುಗಳ ಅಗಲಿದ್ದಾಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಅವರನ್ನು ಕಲಬುರ್ಗಿಯ ಜಯದೇವ ಆಸ್ಪತ್ರೆೆಯಲ್ಲಿ ಹೃದಯಸಂಬಂಧಿ ಚಿಕಿತ್ಸೆೆಗೆ ದಾಖಲಿಸಲಾಗಿತ್ತುಘಿ. ಚಿಕಿತ್ಸೆೆ ಲಕಾರಿಯಾಗದೆ ಬುಧವಾರ ಬೆಳಿಗ್ಗೆೆ ಮೃತರಾದರು. ರಾಯಚೂರಿನ ಜ್ಯೋೋತಿ ಕಾಲೋನಿಯ ಬಿ.ವೆಂಕಟಸಿಂಗ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆೆ ಇರಿಸಲಾಗಿತ್ತುಘಿ.
ಮೃತರ ಅಂತ್ಯಕ್ರಿಿಯೆ ರಾಯಚೂರು ನಗರದ ಬಿಆರ್ಬಿ ವೃತ್ತದ ಬಳಿಯ ಮುಕ್ತಿಿಧಾಮದಲ್ಲಿ ಸಂಜೆ ನೆರವೇರಿಸಲಾಯಿತು.
ಸಂತಾಪ :
ಮೃತರ ಆತ್ಮಕ್ಕೆೆ ಶಾಂತಿ ಸಿಗಲಿ ಎಂದು ಸಚಿವರಾದ ಎನ್.ಎಸ್.ಬೋಸರಾಜ್, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ಎ.ವಸಂತಕುಮಾರ್, ಮುಖಂಡರಾದ ಕೆ.ಶಾಂತಪ್ಪಘಿ, ಜಿ.ಶಿವಮೂರ್ತಿ, ಜಯವಂತರಾವ್ ಪತಂಗೆ, ಅಮರೇಗೌಡ ಹಂಚಿನಾಳ, ಶ್ರೀದೇವಿ ಆರ್ ನಾಯಕ, ಅಬ್ದುಲ್ ಕರೀಂ, ಡಾ.ರಝಾಕ್ ಉಸ್ತಾಾದ್ ಮತ್ತಿಿತರರು ಸಂತಾಪ ಕೋರಿದ್ದಾಾರೆ.
ಬಿ.ವೆಂಕಟಸಿಂಗ್ಗೆ ಮಾತೃ ವಿಯೋಗ

