ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ವ್ಯಕ್ತಿಿ, ಸಮಾಜ ಹಾಗೂ ರಾಷ್ಟ್ರದ ಹಿತದ ಬಗ್ಗೆೆ ಜಾಗೃತಿ ಪ್ರಜ್ಞೆ ಮೂಡಿಸುವುದೇ ಸಾಹಿತ್ಯ ಎಂದು ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತೆ ಹಾಗೂ ಲೇಖಕಿ ಡಾ.ಜಯಲಕ್ಷ್ಮಿಿ ಮಂಗಳಮೂರ್ತಿ ಪ್ರತಿಪಾದಿಸಿದರು.
ನಗರದ ಕನ್ನಡ ಭವನದಲ್ಲಿ ಸಿದ್ದೇಶ್ವರ ಸಾಹಿತ್ಯ ವೇದಿಕೆಯಿಂದ ಹಮ್ಮಿಿಕೊಂಡಿದ್ದ ಗಿರಿಜಾ ಮಾಲಿಪಾಟೀಲ್ ಅವರ ಮತಿ ದರ್ಪಣ ವಿಮರ್ಶಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಗ್ರಂಥಗಳು ಶಾಶ್ವತ ಸನಾತನವಾಗಿ ಪ್ರಕಾಶನಮಾನವಾಗಿ ಬೆಳಗುತ್ತಿಿರುವ ದಿವ್ಯ ಜ್ಯೋೋತಿಯಾಗಿವೆ ಎಂದರು.
ಕನ್ನಡ ಸಾಹಿತ್ಯ ಮನುಷ್ಯನ ಭಾವಗಳನ್ನು ಪಕ್ವಗೊಳಿಸುವ ಔಷಧ ಇದ್ದಂತೆ ಅಷ್ಟೆೆ ಅಲ್ಲ ಎಲ್ಲ ವಿಷಯ, ವಿಚಾರಗಳನ್ನು ತೆಕ್ಕೆೆಯಲ್ಲಿರಿಸಿಕೊಂಡು ಹೊಸ ತಲೆಮಾರಿನ ಸಾಹಿತಿಗಳಿಗೆ ಮಾರ್ಗದರ್ಶಕವಾಗಿ ಕೆಲಸ ಮಾಡಲಿವೆ. ಈ ಸಾಹಿತ್ಯಿಿಕ ಪರಿಭಾಷೆ ವಿಸ್ತಾಾರವಾದದ್ದು ಅದನ್ನು ಸೀಮಿತಗೊಳಿಸುವುದು ಸಲ್ಲದು ಯಾರಿಗೆ ಸಾಹಿತ್ಯ ಹೃದಯದ ಬಡಿತವಾಗುತ್ತದೆ ಅಂತವರು ಸಮಾಜದ ಆಸ್ತಿಿಯಾಗಲಿದ್ದಾಾರೆ ಎಂದು ಹೇಳಿದರು.
ಪುಸ್ತಕ ಲೋಕಾರ್ಪಣೆ ಮಾಡಿದ ನಿವೃತ್ತ ಉಪನ್ಯಾಾಸಕ ಬಿ.ಜಿ.ಹುಲಿ ಮಾತನಾಡಿ, ಪುಸ್ತಕ ಲೋಕಾರ್ಪಣೆ ಸಾಮಾನ್ಯ ಆದರೆ, ನಮ್ಮ ಸೇವೆಯ, ಅರಿವಿನ ಸಮರ್ಪಣೆ ನಮ್ಮ ಪ್ರೀತಿಯ ಸಮರ್ಪಣೆಯಾಗಬೇಕು, ಲೋಕಕ್ಕೆೆ ನಮ್ಮ ಸಂತೃಪ್ತಿಿಯ ಸಮರ್ಪಣೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಸ್ಕಿಿ ಕನ್ನಡ ಪಬ್ಲಿಿಕ್ ಶಾಲೆಯ ಶಿಕ್ಷಕ ಮಲ್ಲಯ್ಯ ಸ್ವಾಾಮಿ, ನಿವೃತ್ತ ಉಪನ್ಯಾಾಸಕ ನಾಗೇಂದ್ರನಾಥ, ಕಸಾಪ ಸಹಕಾರ್ಯದರ್ಶಿ ದಂಡಪ್ಪ ಬಿರಾದಾರ, ಆನಂದ ಕುಲಕರ್ಣಿ, ಲೇಖಕಿ ಗಿರಿಜಾ ಮಾಲೀಪಾಟೀಲ್ ಸೇರಿದಂತೆ ಇತರರಿದ್ದರು.
ಮತಿ ದರ್ಪಣ ವಿಮರ್ಶಾ ಸಂಕಲನ ಲೋಕಾರ್ಪಣೆ ಜಾಗೃತಿ ಪ್ರಜ್ಞೆ ಮೂಡಿಸುವುದೆ ಸಾಹಿತ್ಯ- ಡಾ.ಜಯಲಕ್ಷಿ ್ಮ

