ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ಮಾತೆಯರ ಸಂಸ್ಕೃತಿ, ಸಂಸ್ಕಾಾರಗಳು ನಮ್ಮ ಸಮಾಜದ ಪ್ರಗತಿಗೆ ಬುನಾದಿಗಳಾಗಿವೆ ಎಂದು ಭಾರತ ವಿಕಾಸ ಪರಿಷತ್ತಿಿನ ಪ್ರಾಾಂತ ಅಧ್ಯಕ್ಷ ಎಸ್.ಎಸ್.ಹಿರೇಮಠ ಹೇಳಿದರು.
ನಗರದ ಗೋಸ್ವಾಾಮಿ ಕಲ್ಯಾಾಣ ಮಂಟಪದಲ್ಲಿ ನಡೆದ ಕರ್ನಾಟಕ ಉತ್ತರ ಪ್ರಾಾಂತ ಮಟ್ಟದ ಒಂದು ದಿನದ ಮಾತೃ ಶಕ್ತಿಿ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಪಂಚದಲ್ಲಿಯೇ ಭಾರತ ಭವ್ಯ ಸಂಸ್ಕೃತಿ ಹೊಂದಿದೆ. ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಗೆ ಮಾತೆಯರೆ ವಾರಸುದಾರರು. ಮಹಿಳೆಯರಿಗೆ ಹೆಚ್ಚಿಿನ ಗೌರವ ನೀಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಕೆಲಸವಾಗಬೇಕಿದೆ ಎಂದರು.
ವಿಜಯಪುರ ಮತ್ತು ಗದಗ ರಾಮಕೃಷ್ಣ ಆಶ್ರಮ ಅಧ್ಯಕ್ಷ ಪೂಜ್ಯ ನಿರ್ಭಯಾನಂದ ಸರಸ್ವತಿ
ಶ್ರೀಗಳು ಉದ್ಘಾಾಟಿಸಿ ಮಾತೃಶಕ್ತಿಿಯ ಜಾಗೃತಿಗೆ ಕರೆ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಾತೆಯರ ಹೊಣೆಗಾರಿಕೆಗಳ ಕುರಿತು ವಿಶೇಷ ಉಪನ್ಯಾಾಸ ನೀಡಿದರು. ಭಾರತ ವಿಕಾಸ ಪರಿಷತ್ತಿಿನ ರಾಷ್ಟ್ರೀಯ ಸಂಚಾಲಕ ಸ್ವಾಾತಿ ಘೊಡೆಕರ್, ಬೆಳಗಾವಿ ಮತ್ತು ವಲಯ ಸಂಚಾಲಕ ಜಾನಕಿ ಪುರೋಹಿತ ರಾಯಚೂರು ಅವರು ಮಾತನಾಡಿ, ಪರಿಷತ್ತಿಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಸಿಂಧನೂರು ಶಾಖೆಯ ಅಧ್ಯಕ್ಷ, ನೇತ್ರ ತಜ್ಞರ ಡಾ.ಚನ್ನನಗೌಡ ಉಪಸ್ಥಿಿತರಿದ್ದರು.
ಸಮಾರಂಭದಲ್ಲಿ ಸೀಪರ ಕಾಳಜಿಗಳಿಗೆ ಪ್ರೇೇರಕರಾದ, ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರಾದ ಶಕುಂತಲಾ ನಾಗರೆಡ್ಡಪ್ಪ, ಅನ್ನಪೂರ್ಣಮ್ಮ ಮುಳ್ಳೂರು, ಸ್ವಾಾತಿ ಗೋಡೆಕರ್, ಜಾನಕಿ ಪುರೋಹಿತ ಅವರನ್ನು ಸನ್ಮಾಾನಿಸಲಾಯಿತು. ಪ್ರಾಾಂತ ಮಹಿಳಾ ಸಂಚಾಲಕಿ ಸಹನಾ ಹಿರೇಮಠ ವಕೀಲರು ಸಾಧಕೀಯರ ಸಾಧನೆಗಳನ್ನು ಪರಿಚಯಿಸಿದರು. ಶಾಖೆಯ ಮಹಿಳಾ ಪ್ರಮುಖರಾದ ಮಂಜುಳಾ ಪಾಟೀಲ್, ಶೋಭಾ ವಸದ, ಹೇಮಲತಾ ಜೋಳದರಾಶಿ ಉಪಸ್ಥಿಿತರಿದ್ದರು. ಪ್ರಾಾಂತ ಪ್ರಧಾನ ಕಾರ್ಯದರ್ಶಿ ತಿರುಪತಿ ಜೋಷಿ ಸ್ವಾಾಗತಿಸಿದರು. ಡಾ॥ ಮಧುಮತಿ ದೇಶಪಾಂಡೆ ಕಾರ್ಯಕ್ರಮದ ನಿರೂಪಿಸಿದರು.
ಮಧ್ಯಾಾಹ್ನ ನಡೆದ ಅಧಿವೇಶನದಲ್ಲಿ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆೆಯ ವೈದ್ಯಾಾಧಿಕಾರಿ ಡಾ॥ ಶಕುಂತಲಾ ಪಾಟೀಲ್, ಮಹಿಳೆರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಮತ್ತು ವಾಣಿ ಪಾಟೀಲ ರಾಯಚೂರು ಮಹಿಳೆ ಮತ್ತು ಸಮಾಜ ವಿಷಯದ ಕುರಿತು ವಿಶೇಷ ಉಪನ್ಯಾಾಸ ನೀಡಿದರು. ಸಮಾರೋಪ ಸಮಾರಂಭದಲ್ಲಿ ಶಾಖಾ ಉಪಾಧ್ಯಕ್ಷೆ ಮಂಜುಳಾ ಪಾಟೀಲ್, ಮಹಿಳಾಪರ ಚಿಂತನೆಗಳನ್ನು ಹಂಚಿಕೊಂಡರು. ಪ್ರಾಾಂತದ ಬೆಳಗಾವಿ, ಗಂಗಾವತಿ, ರಾಯಚೂರು, ಹೊಸಪೇಟೆ, ಮಾನ್ವಿಿ ಮತ್ತು ಮಸ್ಕಿಿ ಶಾಖೆಯ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಾತೃ ಶಕ್ತಿ ಸಂಗಮ ಕಾರ್ಯಕ್ರಮ ಸಮಾಜದ ಪ್ರಗತಿಗೆ ಮಹಿಳಾ ಸಂಸ್ಕೃತಿ, ಸಂಸ್ಕಾರ ಬುನಾದಿ – ಹಿರೇಮಠ

