ಸುದ್ದಿಮೂಲ ವಾರ್ತೆ
ಮೈಸೂರು, ಮೇ 11: ನಾನು ವಿರೋಧಿ ಜೆಡಿಎಸ್ನೊಂದಿಗೆ ಹೊಂದಾಣೆಕೆ ಮಾಡಿಕೊಂಡಿಲ್ಲ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡಿದ್ದಾರೆ.
ತಮ್ಮ ವಿರುದ್ದದ ಆರೋಪಕ್ಕೆ ಪ್ರಮಾಣ ಮಾಡಿ ಸ್ಪಷ್ಟನೆ ನೀಡಿರುವ ಅವರು, ಸಿದ್ದರಾಮಯ್ಯರಿಗೆ ಮೋಸ ಮಾಡಿಲ್ಲ. ಚಾಮುಂಡಿ ತಾಯಿ ಆಣೆಗೂ ನಾನು ತಪ್ಪು ಮಾಡಿಲ್ಲ. ನಾನು ಫೋನ್ ಸ್ವಿಚ್ ಆಫ್ ಮಾಡಿಲ್ಲ. ಇದು ಮೂಲ ಕಾಂಗ್ರೆಸಿಗರ ಚಿತಾವಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐನೂರು ಜನರ ಗುಂಪು ಕಟ್ಟಿಕೊಂಡು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನ ನಂಬಿ ಮೋಸ ಹೋದೆ. ಸಿದ್ದರಾಮಯ್ಯಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಖುದ್ದು ಸಿದ್ದರಾಮಯ್ಯರನ್ನ ನಾನೇ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಸಿದ್ಧೇಗೌಡ ತಿಳಿಸಿದರು.