ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.26:
ಪ್ರತಿಯೊಬ್ಬರು ಯೇಸುಕ್ರಿಿಸ್ತನ ಜೀವನ ಸಂದೇಶಗಳೊಂದಿಗೆ ಕರುಣೆ, ಶಾಂತಿ ಮತ್ತು ಸಹನೆ ಅಳವಡಿಸಿಕೊಳ್ಳಬೇಕು. ಜೊತೆಗೆ ಆತನ ವಾಕ್ಯಗಳನ್ನು ಸಂದೇಶಗ ಪಾಲಿಸಬೇಕೆಂದು ಮೆಥೋಡಿಸ್ಟ್ ಚರ್ಚ್ನ ಾದರ್ ಮಾರ್ಕೇಶ್ ತಿಳಿಸಿದರು.
ತಾಲೂಕಿನ ಹೊನ್ನಟಗಿ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಗುರುವಾರ ಕ್ರಿಿಸ್ತ ಜಯಂತಿಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂದೇಶ ಸಾರಿದರು.
ಯೇಸುಕ್ರಿಿಸ್ತನು ಈ ಲೋಕದ ಒಳಿತಿಗಾಗಿ ಶಿಲುಬೆಯ ಮೇಲೆ ಪ್ರಾಾಣ ಅರ್ಪಿಸಿದನು. ಮತ್ತೆೆ ಮೂರು ದಿನದಲ್ಲಿ ಪುನರ್ಜನ್ಮ ತಾಳಿದನು. ಮಿಥ್ಯ ಮಾರ್ಗ ಬಿಟ್ಟು ಸತ್ಯ ಮಾರ್ಗಗದಲ್ಲಿ ನಡೆಯಬೇಕೆಂದರು. ಯುವಕರು ದುಶ್ಚಟದಿಂದ ದೂರ ಇರಬೇಕು. ಮದ್ಯ ವ್ಯಸನಿಯಾಗಬಾರದು. ಸನ್ಮಾಾರ್ಗದಲ್ಲಿ ನಡೆದು ಒಳ್ಳೆೆಯ ಜೀವನ ನಡೆಂಬೇಕೆಂದು ಾದರ್ ಮಾರ್ಕೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ, ವಿಶ್ವಾಾಸಿಗಳಾದ ಯಲ್ಲಪ್ಪ, ಹನುಮಂತರಾಯ, ದೊಡ್ಡ ಅಬ್ರಾಾಹಮಪ್ಪ, ಅಬ್ರಾಾಹಮಪ್ಪ, ಬೂದೆಪ್ಪ, ಬಾಬು, ಭೀಮಣ್ಣ ಹದ್ದಿನಾಳ, ಪ್ರಜ್ವಲ್, ಮಹೇಶ್, ಅನಿಲ ಕುಮಾರ್, ವೀರೇಶ್, ಬಾಬು ಕರಡಿ, ಗಂಗಪ್ಪ, ಹನುಮಂತ ಕರಡಿ, ಖಾನ್ ಸಾಬ್, ಮರಿಯಾಳಮ್ಮ, ಗುರುದೇವಮ್ಮ, ಅನುರಾಧಮ್ಮ, ಲಲಿತಮ್ಮ, ಲಕ್ಷ್ಮೀ, ಬೂದೆಮ್ಮ ಗೀತಮ್ಮ, ಗಂಗಮ್ಮ, ನರಸಮ್ಮ ಯಲ್ಲಮ್ಮ, ಬಾಬಮ್ಮ ಮತ್ತು ಸಭೆಯ ಉಗ್ರಾಾಣಿಕರು ಸೇರಿದಂತೆ ಸಭೆಯ ವಿಶ್ವಾಾಸಿಗರು ಪಾಲ್ಗೊೊಂಡಿದ್ದರು.

