ಸುದ್ದಿಮೂಲವಾರ್ತೆ ಮಾನ್ವಿ ಏ-20
ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ, ಮತದಾರರೇ ನನಗೆ ಶಕ್ತಿ, ಜನರಿದ್ದರೇ ನಾನು, ಮತದಾರರೇ ನನಗೆ ದೇವರು ಎಂದು ಮೆಕೊ ಕಂಪನಿ ಅಧ್ಯಕ್ಷ ಎಂ.ಈರಣ್ಣ ಹೇಳಿದರು.
ಗುರುವಾರ ಅಪಾರ ಜನಸ್ತೋಮದೊಂದಿಗೆ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಸೊಸೆ ಡಾ.ತನುಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಮ್ಮ ಸೊಸೆ ಡಾ.ತನುಶ್ರೀ 37 ಸಾವಿರಕ್ಕೂ ಹೆಚ್ಚು ಮತ ಪಡೆದು ದ್ವೀತಿಯ ಸ್ಥಾನ ಪಡೆದಿದ್ದು ಮರೆಯುವಂತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕೂಡಾ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದು. ನಿಮ್ಮ ಆಶೀರ್ವಾದ ಇದ್ದರೆ ಈ ಬಾರಿ ನಮ್ಮ ಸೊಸೆ ಶಾಸಕರಾಗುವುದು ಖಚಿತ ಎಂದು ಹೇಳಿದರು.
ನಾವು ಈಗಾಗಲೇ ಕ್ಷೇತ್ರದಲ್ಲಿ ಅನೇಕ ಜನಪರ ಕೆಲಸ ಮಾಡಲಾಗಿದ್ದು. ಮುಂದೆಯೂ ಕೂಡ ಅಭಿವೃದ್ಧಿ ಕೆಲಸದ ಗುರಿಯನ್ನು ಹೊಂದಿದ್ದೇವೆ. ನಾವು ರಾಜಕೀಯ ಮಾಡಲು ಚುನಾವಣೆಗೆ ನಿಲ್ಲುತ್ತಿಲ್ಲ. ಅಭಿವೃದ್ಧಿ ಕೆಲಸ, ಸಮಾಜ ಸೇವೆ ಮಾಡುವ ಕನಸು ಕಂಡಿದ್ದೇವೆ. ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಾದರೆ ಈ ಬಾರಿ ನೀವು ನಮಗೆ ಆಶೀರ್ವಾದ ಮಾಡಬೇಕು. ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮನ್ನು ಗೆಲ್ಲಿಸಿದರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ.
ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪಟ್ಟಣದ ಪ್ರತಿ ವಾರ್ಡಿನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಸಮಗ್ರ ಕುಡಿಯವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರತಿಹಳ್ಳಿಗಳಿಗೆ ರಸ್ತೆ, ಚರಂಡಿ, ವಿದ್ಯತ್ ದ್ವೀಪ ಸಂಪರ್ಕ ಸೇತುವೆಗಳ ನಿರ್ಮಾಣ, ಹೋಬಳಿಗೆ ಒಂದು ಅಂಬುಲೆನ್ಸ್, ಪ್ರತಿ ಹಳ್ಳಿಗೆ ಆರೋಗ್ಯ ಕಟ್ಟಡ, ತುರ್ತು ಚಿಕಿತ್ಸಾ ಆರೋಗ್ಯ ಕೇಂದ್ರ, ಪ್ರತಿ ಮೂರು ತಿಂಗಳಿಗೊಮ್ಮೆ ಹಳ್ಳಿಗಳಲ್ಲಿ ನುರಿತ ವೈದ್ಯ ತಂಡದಿಂದ ಆರೋಗ್ಯ ತಪಸಾಣಾ ಕಾರ್ಯಕ್ರಮ ಮಾನ್ವಿ-ಕವಿತಾಳ- ಸಿರವಾರ ಪಟ್ಟಣಗಳಲ್ಲಿ 25 ಹಾಸಿಗೆಯುಳ್ಳ ಸುಸಜ್ಜಿತ ಹೆರಿಗೆ ಅಸ್ಪತ್ರೆಯನ್ನು ತಜ್ಞ ವೈದ್ಯರಿಂದ ಆರಂಭಿಸಲಾಗುವುದು ಎಂದು ಎಂ.ಈರಣ್ಣ ಹೇಳಿದರು.
ಕ್ಷೇತ್ರದಲ್ಲಿ ಶಿಕ್ಷಣ ,ಆರೋಗ್ಯ, ನೀರಾವರಿ, ವಸತಿ ಮುಂತಾದ ಸೌಲಭ್ಯ ಜೊತೆಗೆ ವೃತ್ತಿಪರ ಕಾಲೇಜು, ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಕ್ರೀಡಾಂಗಣ, ಸರ್ಕ್ಯೂಟ್ ಹೌಸ್, ಕೆಳ ಭಾಗದ ಕಾಲುವೆಗೆ ನೀರು, ಪ್ರತಿ ಹಳ್ಳಿಗಳಲ್ಲಿ ಎಲ್ಲಾ ಸಮಾಜದವರಿಗೆ ಉತ್ತಮವಾದ ರುದ್ರಭೂಮಿ ಹೀಗೆ ಮುಂತಾದ ಅಭಿವೃದ್ಧಿ ಕಾರ್ಯ, ಒಳ್ಳೆಯ ಕಾರ್ಯ ಕೈಗೊಳ್ಳುವ ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.
ರಾಯಚೂರು ರಸ್ತೆಯ ತಮ್ಮ ನಿವಾಸದಿಂದ ತಹಸೀಲ್ ಕಚೇರಿವರೆಗೆ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು.
ಈ ಮೆರವಣಿಗೆಯಲ್ಲಿ ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ನಿವೃತ್ತ ಡಿವೈಎಸ್ಪಿ ರವೀಂದ್ರ ಶಿರೂರು, ಜಾಕೀರ್ ಮೋಹಿಯುದ್ದೀನ್, ಮಹ್ಮದ್ ಗೌಸ್, ಪಿ.ಅನಿಲ್ ಕುಮಾರ್, ಶರಣಬಸಪ್ಪ, ಶೇಖರಪ್ಪ ಕೊಟ್ನೆಕಲ್, ಎಂ.ಪ್ರವೀಣ್ ಕುಮಾರ್, ಎಂ.ಶಿವಕುಮಾರ, ಎಂ.ವಸಂತ ಕುಮಾರ, ಡಾ.ಪೂಜಾ ಶಿವಕುಮಾರ, ಡಾ.ಮಲ್ಲಿಕಾರ್ಜುನ ಪಾಟೀಲ್ ಬೊಮ್ಮನಾಳ, ಕಮಾಟಿ ಮಲ್ಲಿಕಾರ್ಜುನ, ಆಲಮ್ ಬಾಷಾ, ಆಲ್ದಾಳ್ ಮಲ್ಲೇಶಪ್ಪಗೌಡ, ಕಾಲೇಶ್ವರಸ್ವಾಮಿ, ಶಬ್ಬೀರ್ ಜಾಗೀರದಾರ ಜಾಗೀರಪನ್ನೂರು, ಯಂಕಣ್ಣ ಮಾಸ್ಟರ್, ರಾಮಣ್ಣ ಪೂಜಾರಿ ಮಾಡಗಿರಿ, ಧನಂಜಯ ವಿಶ್ವಕರ್ಮ, ಮಂಜುನಾಥ ಈಡಿಗ,, ಅಂಬಣ್ಣ ಮಾಚನೂರು, ಯೂನೂಸ್ ಖುರೇಶಿ, ಹನುಮಂತ ಕೋಟೆ, ಶಾಬೀರ್ ಖುರೇಶಿ, ವೀರೇಶರೆಡ್ಡಿ ಸೇರಿದಂತೆ ವಿವಿಧ ಸಮಾಜದ ಗಣ್ಯರು, ಮುಖಂಡರು, ಯುವಕರು, ಮಹಿಳೆಯರು ಕಾರ್ಯಕರ್ತರು, ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿ ಡಾ.ತನುಶ್ರೀ ಸ್ಪರ್ಧೆಗೆ ಬೆಂಬಲ ಸೂಚಿಸಿದರು.