ಸುದ್ದಿಮೂಲ ವಾರ್ತೆ
ಆನೇಕಲ್, ಮೇ 11: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವರ ಮಧ್ಯೆ ಆನೇಕಲ್ ತಾಲ್ಲೂಕಿನ ಮಾಯಾಸಂದ್ರದ ಸರ್ಕಾರಿ ಪ್ರೌಢ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದೆ.
ಹೌದು. ಖಾಸಗಿ ಶಾಲೆಗಳಲ್ಲಿ ದುಬಾರಿ ವೆಚ್ಚ ಬರಿಸಿ ಸಾಲಸೊಲಮಾಡಿ ಪ್ರತಿಷ್ಟೆ ಎಂಬುವ ಪೋಷಕರು ಒಮ್ಮೆ ನೋಡಿ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯ, ಕಂಪ್ಯೂಟರ್ ತರಬೇತಿ, ಸ್ಮಾರ್ಟ್ ಕ್ಲಾಸ್, ಉತ್ತಮ ಕ್ರೀಡಾ ಸಲಕರಣಗಳು ಇದರ ಜೊತೆಗೆ ಶಿಕ್ಷಕರಿಂದ ಉತ್ತಮ ಪಾಠಬೋಧನೆಯಿಂದಾಗಿ ಈ ಶಾಲೆ ಶೇ 100ರಷ್ಟು ಫಲಿತಾಂಶ ಬಂದಿದೆ.
ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೂ ಪಾಠ ಬೋಧನೆ, ಪರೀಕ್ಷಾ ತರಬೇತಿ, ಮಕ್ಕಳಲ್ಲಿ ಕಲಿಕಾ ಮಟ್ಟ ಹೆಚ್ಚಿಸುವುದು ಹೀಗೆ ವಿಶೇಷ ಕಾಳಜಿ ವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ.
ಇನ್ನು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಅವರು ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಫಲಿತಾಂಶ ಎಷ್ಟು ತರುತ್ತೀರಿ ಎಂದಾಗ ಶಾಲೆಯ ಶಿಕ್ಷಕರು ಶೇ. 95ರಷ್ಟು ತರುತ್ತೇವೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ, ನಾನು ಶೇ ನೂರರಷ್ಟು ಫಲಿತಾಂಶ ತರಲೇಬೇಕು ಎಂದು ಹೇಳಿದ್ದೆ. ಅದರಂತೆ ಶಿಕ್ಷಕರು ಅತ್ಯಂತ ಶ್ರಮ ಮತ್ತು ಕಾಳಜಿ ವಹಿಸಿ ಉತ್ತಮ ಫಲಿತಾಂಶ ಬರುವಲ್ಲಿ ನೆರವಾಗಿದ್ದಾರೆ ಎಂದು ಬಿಇಓ ಜಯಲಕ್ಷ್ಮೀ ಹರ್ಷ ವ್ಯಕ್ತಪಡಿಸಿದ್ದಾರೆ.