ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.1: ದೇಶದ ಸ್ವಾತಂತ್ರ್ಯಹೋರಾಟದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅವರು ಪಾಲ್ಗೊಂಡಿಲ್ಲ. ಇಂದು ಅವರು ಬಂದು ನಮಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪಾಠ ಮಾಡುತ್ತ ಇದ್ದಾರೆ. ದೇಶದಲ್ಲಿ ನೂರಾರು ಆಣೆಕಟ್ಟುಗಳಾಗಿದ್ದು, ಐಐಟಿ, ಮತ್ತು ಐಐಎಂ ಸೇರಿದಂತೆ ದೇಶದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಸಿರು ಕ್ರಾಂತ್ರಿ, ಶ್ವೇತ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಪ್ರತಿ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್ ಅವರ ಇಂದು ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿ, ಪ್ರಣಾಳಿಕೆ ಎಂಬುದು ಭಗವದ್ಗೀತೆ ಎಂದು ಪ್ರಧಾನಿ ಮೋದಿ ಹೇಳ್ತಾರೆ, ಆದರೆ ಎಲ್ಲಿ ಹೋಯಿತು ಮೋದಿಯ ಕಪ್ಪುಹಣದ ಭರವಸೆ ಮತ್ತು ವರ್ಷಕ್ಕೆ 2 ಕೋಟಿಯ ಉದ್ಯೋಗದ ಭರವಸೆ. ನೋಟು ಅಮಾನ್ಯಕೀರಣ ಮಾಡಿ ಆರ್ಥಿಕತೆ ವ್ಯವಸ್ಥೆ ಬುಡಬೇಲು ಮಾಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದ ಬೆಜೆಪಿ ಅವರು ರೈತರ ಖರ್ಚು ಹೆಚ್ಚಳವಾಗಿಲ್ಲ. ಬೆಲೆಯೇರಿಕೆ ಗಗನಕ್ಕೇರಿದೆ. ಇಂದು ಅಗತ್ಯ ವಸ್ತುಗಳ ಬೆಲೆಯ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳವಾಗಿದೆ, ಇದು ಪ್ರಧಾನಿ ನರೇಂದ್ರ ಮೋದಿಯ ಅಚ್ಚೇದಿನದ ಕೊಡುಗೆ.
ಇಂದು ಕೇಂದ್ರ ಬಿಜೆಪಿ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಬಿಜೆಪಿ 2018 ರಲ್ಲಿ 600 ಭರವಸೆಗಳ ಪೈಕಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದು. 40% ಕಮಿಷನ್ ಮೂಲಕ ಭ್ರಷ್ಠಾಚರದ ಮಾಡಿದ್ದೇ ಈ ಬಿಜೆಪಿ ಸರ್ಕಾರದ ಕೊಡುಗೆ. ಡಂಬಲ್ ಇಂಜಿನ್ ಸರ್ಕಾರ ಎಂದು ಹೇಳೆಕೊಳ್ತಾರೆ. ಇಂದು ಎರಡು ಎಂಜಿನ್ ಕೆಟ್ಟು ನಿಂತಿವೆ. ಹಣ, ಆಮಿಷದ ಮೂಲಕ ನಮ್ಮ 17 ಮಂದಿ ಶಾಸಕರನ್ನು ಖರೀದಿಸಿ ವಾಮಮಾರ್ಗದ ಮೂಲಕ, ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿ ಅನೈತಿಕ ಮಾರ್ಗದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಯಡಿಯೂರಪ್ಪ ಮತ್ತೇ ತೆಗೆದ್ರು. ವೀರೇಂದ್ರ ಪಾಟೀಲರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನು ಬದಲಿಸಿ ಬಂಗಾರಪ್ಪಗೆ ಅವಕಾಶ ಕೊಡಲಾಯಿತು. ಈ ಅಪಪ್ರಚಾರಕ್ಕೆ ನಮ್ಮ ಪಕ್ಷ ಬಲಿಯಾಯಿತು. ಯಡಿಯೂರಪ್ಪನವರನ್ನು ತೆಗೆಯುವಾಗ ಅನಾರೋಗ್ಯ ಇತ್ತಾ? ಇರಲಿಲ್ಲವಲ್ಲ. ಇವತ್ತೂ ದಷ್ಟಪುಷ್ಟವಾಗಿದ್ದಾರೆ.
ಬೊಮ್ಮಾಯಿ ಅವರು ಅಕ್ಸಿಡೆಂಟಲ್ ಮುಖ್ಯಮಂತ್ರಿ. ಯಡಿಯೂರಪ್ಪ ಆದ ಬಳಿಕ, ಲಕ್ಷ್ಮಣ್ ಸವದಿಯನ್ನು ಉಪಮುಖ್ಯಮಂತ್ರಿಯಾಗಿ ಇಳಿಸಿದರು. ಜಗದೀಶ್ ಶೆಟ್ಟರ್ ಅವರಿಗೆ 67 ವರ್ಷ, ಅವರ ಮೇಲೆ ಯಾವುದೇ ಆರೋಪವಿಲ್ಲ. ಲಿಂಗಾಯುತ ಸಮುದಾಯವನ್ನು ಬಿಜೆಪಿ ಅವರ ಹಿಡೆನ್ ಅಂಜೆಡಾ ಏನಿದೆ ನಮ್ಮನ್ನು ಉಪಯೋಗಿಸಿ ನಮ್ಮನ್ನು ಒಂದು ಹಂತಕ್ಕೆ ತಂದು ನಮ್ಮನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಲಿಂಗಾಯತರು ಮತ್ತೆ ಮರಳಿ ಮನೆಗೆ ಬರುತ್ತಿದ್ದಾರೆ. ಇದೀಗ ಬಿಜೆಪಿ ಗಾಬಾರಿಯಾಗಿದ್ದಾರೆ ಈ ಬಾರಿ ಲಿಂಗಾಯುತ ಸಮುದಾಯ ಖಂಡಿತವಾಗಿಯೂ ಶೇ.50 ರಷ್ಟು ಕಾಂಗ್ರೆಸ್ ಪರ ನಿಲ್ಲುತ್ತಾರೆ. ಕಾಂಗ್ರೆಸ್ 130-140 ಸ್ಥಾನ ಬರುವುದು ಖಚಿತ.
ಲಿಂಗಾಯತರ ವಿಷಯದಲ್ಲಿ ಬಿಜೆಪಿ ಅವರು ಗಾಬಾರಿಗೊಂಡಿದ್ದಾರೆ. ರಾಜ್ಯದ ಬಿಜೆಪಿಯ ಯಾವುದೇ ನಾಯಕನ ಮುಖವನ್ನು ಇಟ್ಟು ಜನರ ಬಳಿಗೆ ಹೋಗಲಿಕ್ಕೆ ಆಗುತ್ತಿಲ್ಲ ಇವರಿಗೆ, ಮೋದಿ ಶಾ ಅವರನ್ನು ಕರ್ನಾಟಕದ ಶಾಶ್ವಾತ ನಿವಾಸಿಗಳಾಗಿ ಬಿಟ್ಟಿದ್ದಾರೆ. ಮೋದಿ ಮತ್ತು ಶಾ ಕೂಡ ತಮ್ಮ ಅನೇಕ ಭಾಷಣಗಳಲ್ಲಿ ಸುಳ್ಳು ಹೇಳ್ತಾರೆ. ಶೆಟ್ಟರ್, ಸವದಿ ಸೋಲಿಸಲು ಯಡಿಯೂರಪ್ಪರನ್ನು ಬಿಟ್ಟಿದ್ದಾರೆ. ಸವದಿ, ಶೆಟ್ಟರ್ ಮುಗಿಸಲು ಸಂತೋಷ್, ಜೋಶಿ ಮುಗಿಸಲಿ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬಳಸಲಾಗುತ್ತಿದೆ. ಯಡಿಯೂರಪ್ಪರನ್ನು ಹೆದರಿಸಿದ್ದಾರೆ. ಯಡಿಯೂರಪ್ಪನವರು ಇಂದು ಸವದಿ, ಶೆಟ್ಟರ್ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಹೇಳ್ತಾ ಇದ್ದಾರೆ. ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿದಾಗ ಅವರು ನೇರ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಯಡಿಯೂರಪ್ಪನವರಿಂದ ಕೆಟ್ಟ ಕೆಲಸ ಮಾಡಿಸಿದರು. ಕಣ್ಣೀರು ಹಾಕಿಸಿದರು. ಬಳಿಕ ಕಸದ ಬುಟ್ಟಿಗೆ ಎಸೆದಂತೆ ಎಸೆದರು.
ಇವತ್ತಿನ ಸುದ್ದಿಗೋಷ್ಠಿಯ ಪ್ರಮುಖ ವಿಚಾರವೇ ಇದು 2013 ರಲ್ಲಿ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಮಾಡಿದ್ದು ಯಾರನ್ನು? ಮೂರ್ನಾಲ್ಕು ದಿನಗಳಲ್ಲಿ ಇದನ್ನು ನಾನು ಬಹಿರಂಗಪಡಿಸಲಿದ್ದೇನೆ. ಎರಡು ಬಾರಿ ಯಾರನ್ನು ಭೇಟಿ ಆಗಿದ್ರಿ? ಏನು ಮಾತುಕತೆ ನಡೆದಿತ್ತು, ಮಾತುಕತೆ ಏನು, ಯಾಕೆ ವಿಫಲವಾಯಿತು? ಎಂಬುದನ್ನು ಮೂರ್ನಾಲ್ಕು ದಿನಬಿಟ್ಟು ಬಹಿರಂಗ ಮಾಡುತ್ತೇವೆ. ನಾವು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ, ನಮ್ಮದು ನಿಜ ಗುಂಡು. ಯಡಿಯೂರಪ್ಪ, ಶೋಭಾ ಅವರೇ ಎಲ್ಲ ಬಿಟ್ಟುಬಿಡಿ. ಬಿಜೆಪಿಯವರ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ. ನೀವು ಬಿಜೆಪಿ ಅವರ ಉಪಯೋಗಕ್ಕೆ ಒಳಗಗಾಬೇಡಿ. ಈ ಬಾರಿ ಬಹಳ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಬೆಂಬಲಿಸಿದೆ. ಡಬಲ್ ಎಂಜಿನ್ ಸರ್ಕಾರವನ್ನು ರಾಜ್ಯದ ಜನತೆ ಈ ಸರ್ಕಾರವನ್ನು ಕಿತ್ತೆಸೆಯಲ್ಲಿದ್ದಾರೆ.
ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಸಂಬಂಧಪಟ್ಟ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸಿದಾಗ, ‘ನಾನು ಇದನ್ನು ವಿಸ್ತಾರವಾಗಿ ಬಹಿರಂಗಪಡಿಸುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಾನು ಮಾಡಲ್ಲ. ಕೂತುಹಲಕ್ಕಾಗಿ ನೀವು ಕಾಯಿರಿ. ಇನ್ನು ಮೇ7 ರೊಳಗಡೆ ನಾನು ಇದನ್ನು ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.