ಸುಮಾರು 1000 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು
ಹಿಂದಿಗಿಂತ ಉತ್ತಮ ಸಾಧನೆ ತೋರಿದ ಪರಿಶ್ರಮ ನೀಟ್ ಅಕಾಡೆಮಿ
ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.14: ದಕ್ಷಿಣ ಭಾರತದ ಸಾವಿರಾರು ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆಯಾಗಿರುವ ನೀಟ್ ಎನ್ನುವುದು ಪರಿಶ್ರಮ ವಿದ್ಯಾರ್ಥಿಗಳಿಗೆ ಸುಲಭದ ತುತ್ತಾಗಿದೆ. ಇದಕ್ಕೆ ಕಾರಣ ಪರಿಶ್ರಮ ಅಕಾಡೆಮಿಯಲ್ಲಿನ ಮಾರ್ಗದರ್ಶನ. ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿರುವ ಪರಿಶ್ರಮ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲಿದ್ದಾರೆ ಎಂದು ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 1532 ವಿದ್ಯಾರ್ಥಿಗಳು ನಮ್ಮ ಅಕಾಡೆಮಿಯಲ್ಲಿ ಲಾಂಗ್ ಟರ್ಮ್ ಕೋರ್ಸ್ಗೆ ಸೇರ್ಪಡೆಯಾಗಿದ್ದರು. ಇವರಲ್ಲಿ 800ರಿಂದ 1000 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಸಾಧನೆ ಕೇವಲ ಪರಿಶ್ರಮ ಅಕಾಡೆಮಿಯದ್ದು ಎನ್ನುವುದಕ್ಕಿಂತ, ಕನ್ನಡಿಗರದ್ದು. ಕನ್ನಡದ ಹುಡುಗನೊಬ್ಬ ಸ್ಥಾಪಿಸಿದ ಈ ಸಂಸ್ಥೆ ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರಾಗುವುದಕ್ಕೆ ಕಾರಣ ಕರ್ನಾಟಕದ ಜನ ನೀಡಿದ ಸಹಕಾರ ಎಂದು ಹೇಳಿದರು.
ಶ್ರದ್ಧೆಯಿಂದ 10 ತಿಂಗಳ ಕಾಲ ಪರಿಶ್ರಮ ಹಾಕಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಆದರೆ ಹೋಂ ಸಿಕ್ ಆಗಿ ಮನೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಅದಾಗಲೇ ಎರಡು ವರ್ಷ ಶ್ರಮ ಪಟ್ಟು ಓದಿರುತ್ತಾರೆ. ಆದರೆ ಮೆಡಿಕಲ್ ಸೀಟು ಪಡೆಯುವುದಕ್ಕೆ ಸಾಧ್ಯವಾಗಿರುವುದಿಲ್ಲ. ಅಂತವರು ನಮ್ಮಲ್ಲಿ 10 ತಿಂಗಳ ಕಾಲ ಶ್ರದ್ಧೆಯಿಂದ ಓದುತ್ತಾರೆ. ಅವರನ್ನು ಸಂಪೂರ್ಣವಾಗಿ ಇದೇ ವಿಷಯದಲ್ಲಿ ತೊಡಗುವಂತೆ ಮಾಡುವುದರಿಂದಲೇ, ನಾವು ಉತ್ತಮ ಫಲಿತಾಂಶ ಸಿಗಲು ಸಾಧ್ಯ. ಈ ಬಾರಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗುತ್ತದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ಪರಿಶ್ರಮ ನೀಟ್ ಅಕಾಡೆಮಿ ಕೇವಲ ಕೆಂಗೇರಿಯಲ್ಲಿ ಮಾತ್ರವಿದೆ. ರಾಜ್ಯದ ಯಾವ ಭಾಗದಲ್ಲಿಯೂ ಶಾಖೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂಕಿ-ಅಂಶ
ವರ್ಷ ವಿದ್ಯಾರ್ಥಿಗಳು ತೇರ್ಗಡೆಯಾದವರು
2020 130 88
2021 240 220
2022 730 503
2023 1532 800-1000
ಈ ಬಾರಿ ವಿದ್ಯಾರ್ಥಿಗಳ ಸಾಧನೆ
ನಾರಾಯಣಸ್ವಾಮಿ ಟಿ.ಎ. 658
ಉಜ್ವಲ್ ಕೆ. 676
ಸಚಿನ್ ಕೆ.ಎಸ್. 675
ರೋಹಿತ್ ಆರ್.ಕೆ. 675
ಪ್ರಜ್ವಲ್ ಆರ್. 670
ತಯಾಬ್ 665
ಹೃಷಿಕೇಶ್ ನಾರಾಯಣ್ 655
ವಿನೋದ್ ಎಸ್. ಗಾಣಗಿ 655