ಸುದ್ದಿಮೂಲ ವಾರ್ತೆ ಕೊಪ್ಪಳ, ಜ.17:
ಕೊಪ್ಪಳದ ಬಂಡಿಹರ್ಲಾಪುರ ಭಾಗದ ಡೀಮ್ಡ್ ಾರೆಸ್ಟ್ ಸರ್ವೆ ನಂಬರ್ 132,134,133, ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಿದೆ ಎಂದರು ರೈತರು ಹಾಗೂ ಸ್ಥಳೀಯರು ಜಿಲ್ಲಾಾಧಿಕಾರಿ ಸುರೇಶ್ ಇಟ್ನಾಾಳ್ ಅವರ ಗಮನಕ್ಕೆೆ ತಂದಿದ್ದು, ಜಿಲ್ಲಾಾಧಿಕಾರಿಗಳ ಖಡಕ್ ಆದೇಶ ಹಿನ್ನೆೆಲೆ ಮುನಿರಾಬಾದ್ ಪೊಲೀಸರು ಹಾಗೂ ವಲಯ ಅರಣ್ಯಾಾಧಿಕಾರಿಗಳು ಜಂಟಿಯಾಗಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಬುಧವಾರ ತಡರಾತ್ರಿಿ ದಾಳಿ ನಡೆಸಿ 10 ಲಾರಿಗಳಲ್ಲಿ 4 ಲಾರಿಗಳನ್ನು ಸದ್ಯ ವಶಪಡಿಸಿಕೊಂಡಿದ್ದಾಾರೆ ಎನ್ನಲಾಗುತ್ತಿಿದೆ. ಇನ್ನು ಜಿಲ್ಲಾಾಧಿಕಾರಿಗಳ ಖಡಕ್ ಆದೇಶವಿದ್ದರೂ, ಗಣಿ ಮತ್ತು ಭೂವಿಜ್ಞಾಾನಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆೆ ಬರಲು ಹಿಂದೇಟು ಹಾಕಿದ್ದಾಾರೆ ಎನ್ನಲಾಗುತ್ತಿಿದೆ.
ಬುಧವಾರ ತಡರಾತ್ರಿಿ 10 ಲಾರಿಗಳಲ್ಲಿ ಅಕ್ರಮ ಗ್ರಾಾನೈಟ್ ಕಲ್ಲು ಸಾಗಾಟ ಕಂಡು ಬಂದಿದ್ದು ಸದ್ಯ ಒಂದು ಲಾರಿ ಮಾತ್ರ ವಶಕ್ಕೆೆ ಪಡೆದುಕೊಂಡಿದ್ದಾಾರೆ. ಆದರೆ ಇನ್ನುಳಿದ ಲಾರಿಗಳನ್ನು ಗಣಿಗಾರಿಕೆ ಸ್ಥಳದಲ್ಲಿ ನಿಲ್ಲಿಸಲಾಗಿದ್ದು ಪ್ರಭಾವಿಗಳಿಂದ ಒತ್ತಡ ಹಾಕಲಾಗುತ್ತಿಿದೆ ಎನ್ನಲಾಗುತ್ತಿಿದೆ.
ಈಗಾಗಲೇ ಅಕ್ರಮ ಗಣಿಗಾರಿಯಿಂದ ಸಂಕಷ್ಟ ಎದುರಿಸುತ್ತಿಿರುವ ರೈತ ಯಲ್ಲಪ್ಪ ಸಿದ್ದರ್ 12 ಜನರ ವಿರುದ್ಧ ದೂರು ದಾಖಲಿಸಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಅಲ್ಲದೆ ರೈತ ಸೋಮೇಶ್ವರ ರಾವ್ ಎನ್ನುವವರು ಹುಸೇನಪುರ ತಮ್ಮ ಸೀಮಾ ಹೊಲದಲ್ಲಿ ಅಕ್ರಮ ಗ್ರ್ಯಾಾನೈಟ್ ಲಾರಿಗಳು ಓಡಾಡದಂತೆ ಗುಂಡಿಗಳನ್ನು ತೋಡಿಸಿದ್ದರು, ಆದರೂ ರಾತ್ರೋೋರಾತ್ರಿಿ ಅಕ್ರಮ ಗ್ರ್ಯಾಾನೈಟ್ ಸಾಗಾಟ ಮಾಡುತ್ತಿಿರುವ ಹಿನ್ನೆೆಲೆ ಸ್ಥಳೀಯರು ಜಿಲ್ಲಾಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆೆಲೆ, ಅರಣ್ಯ ಅಧಿಕಾರಿಗಳು ಹಾಗೂ ಪೋಲಿಸ್ ಜಂಟಿಯಾಗಿ ಧಾವಿಸಿ ದಾಳಿ ಮಾಡಿದ್ದಾಾರೆ. ಆದರೆ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಮಾತ್ರ ಪ್ರಭಾವಿಗಳ ಒತ್ತಡದಿಂದ ಸ್ಥಳಕ್ಕೆೆ ಬಂದಿಲ್ಲ ಎನ್ನುವ ಆರೋಪ ಸ್ಥಳೀಯ ಯುವಕ ಸಿದ್ದಿಪಾಷಾ ಗೋರೆಬಾಳ್ ಮಾಡಿದ್ದಾಾರೆ.
ಅಕ್ರಮ ಗ್ರಾನೈಟ್ ಗಣಿಗಾರಿಕೆ ; ಪ್ರಕರಣ ದಾಖಲಿಸಲು ಮೀನಾಮೇಷ

