ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಕರ್ನಾಟಕ ಲೋಕಾಯುಕ್ತರಾದ ಗೌರವಾನ್ವಿಿತ ನ್ಯಾಾಯಮೂರ್ತಿ ಬಿ.ಎಸ್.ಪಾಟೀಲ ಅವರು ಜನವರಿ 7ರಂದು ಬೆಳಗ್ಗೆೆ 10 ಗಂಟೆಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಅಂದು ಬೆಳಗ್ಗೆೆ 9.30ಕ್ಕೆೆ ಎಲ್ಲ ಅಧಿಕಾರಿಗಳು ಸಭಾಂಗಣದಲ್ಲಿರಲು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

