ಸುದ್ದಿಮೂಲ ವಾರ್ತೆ ಸಿಂಧನೂರು, ಜ.14:
ತುಂಗಭದ್ರಾಾ ಜಲಾಶಯಕ್ಕೆೆ ಹೊಸ ಗೇಟ್ಗಳ ಅವಳವಡಿಕೆ ಹಾಗೂ ಕಾಲುವೆ ಆಧುನೀಕರಣ ಕಾಮಗಾರಿ ನಡೆದಿದೆ. ಜುಲೈ-15 ರ ನಂತರ ಎಡದಂಡೆ ನಾಲೆಗೆ ನೀರು ಹರಿಸುವ ಸಾಧ್ಯತೆಗಳಿದ್ದು, 7 ತಿಂಗಳ ಕಾಲ ಕುಡಿಯುವ ನೀರಿನ ಸಮಸ್ಯೆೆಯಾಗದಂತೆ ನಿರ್ವಹಣೆ ಮಾಡುವಂತೆ ತಹಶೀಲ್ದಾಾರ ಅರುಣ ಹೆಚ್.ದೇಸಾಯಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ತಾ.ಪಂ.ನ ಸಭಾಂಗಣದಲ್ಲಿ ಕುಡಿಯುವ ನೀರು ನಿರ್ವಹಣೆ ಸಂಬಂಧಿಸಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸಭೆ ನಡೆಸಿದರು. ಎಡದಂಡೆ ನಾಲೆಗೆ ಈಗಾಗಲೇ ನೀರು ನಿಲ್ಲಿಸಲಾಗಿದೆ. ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ ಎಲ್ಲಾಾ ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಗ್ರಾಾಮೀಣ ಭಾಗದಲ್ಲಿ ಇಲ್ಲಿಯವರೆಗೆ ನಿತ್ಯವೂ ಹಾಗೂ ಒಂದು ದಿನ ಬಿಟ್ಟು ಒಂದು ನೀರು ಬಿಡಲಾಗುತ್ತಿಿತ್ತು. 7 ತಿಂಗಳು ನೀರು ನಿರ್ವಹಣೆ ಮಾಡಬೇಕಿರುವುದರಿಂದ ನೀರಿನ ಲಭ್ಯತೆ ಆಧರಿಸಿ ಕನಿಷ್ಟ 5 ರಿಂದ 8 ದಿನಕ್ಕೊೊಮ್ಮೆೆ ನೀರು ಕೊಡಿ. ನಿಮ್ಮ ವ್ಯಾಾಪ್ತಿಿಯಲ್ಲಿ ಖಾಸಗಿ ಕೆರೆಗಳಿದ್ದರೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಿಿ. ಮೊದಲು ಖಾಸಗಿ ಕೆರೆಗಳ ನೀರನ್ನು ಬಳಸಿಕೊಳ್ಳಿಿ. ನಂತರ ಸರಕಾರದ ಕೆರೆಗಳ ನೀರು ಉಪಯೋಗಿಸಿ ಎಂದು ಸಲಹೆ ನೀಡಿದರು.
ಬೇಸಿಗೆಯಲ್ಲಿ ನೀರಿನ ಕೊರತೆಯಾದರೆ ಟ್ಯಾಾಂಕರ್ ಮೂಲಕ ಸರಬರಾಜು ಮಾಡಲು ಅನುದಾನ ಇರುವುದಿಲ್ಲ. ಬರಗಾಲ ಎಂದು ಘೋಷಣೆಯಾದರೆ ಮಾತ್ರ ಹಣ ಬರುತ್ತದೆ. ಈ ವರ್ಷ ಅತ್ಯುತ್ತಮ ಮಳೆಯಾದ ಹಿನ್ನೆೆಲೆಯಲ್ಲಿ ಘೋಷಣೆಯಾಗುವುದಿಲ್ಲ. ಹಣನೂ ಬರುವದಿಲ್ಲ. ಈ ಬಗ್ಗೆೆ ಪಿಡಿಓಗಳು ನಿಮ್ಮ ಪಂಚಾಯತ್ ಮಟ್ಟದಲ್ಲಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ನೋಡಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ನಿರ್ವಹಣೆ ಮಾಡಿ. ಒಂದು ವೇಳೆ ನೀರಿನ ಹಾಹಾಕಾರ ಉಂಟಾದರೆ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತರಾಟೆ:
ಗ್ರಾಾಮೀಣ ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಇಲಾಖೆಯ ಮುಖ್ಯಗುರಿಯೇ ಕುಡಿಯುವ ನೀರಿನ ನಿರ್ವಹಣೆ ಮಾಡುವುದು. ಸಿವಿಲ್ ಕೆಲಸ ಮಾಡುವುದಕ್ಕೆೆ ಸಿಮೀತವಾಗಿದೆ. ಆದರೆ ಗ್ರಾಾಮೀಣ ಭಾಗದಲ್ಲಿ ಕುಡಿಯುವ ನೀರು ಎಂದರೆ ಪಿಡಿಓಗಳ ಮೇಲೆ ಜವಾಬ್ದಾಾರಿ ಆರ್ಡಬ್ಲ್ಯೂಎಸ್ ಬಿಟ್ಟಿಿದೆ. ನಿಮ್ಮ ಜವಾಬ್ದಾಾರಿ ತೋರಿಸುತ್ತಿಿಲ್ಲ. ಎಲ್ಲಾಾ ಕೆರೆಗಳದ್ದು ನಿಮ್ಮದೇ ಜವಾಬ್ದಾಾರಿ. ಗುಂಪು ಕುಡಿಯುವ ನೀರಿನ ಕೆರೆಗಳ ನಿರ್ವಹಣೆ ಮಾಡಿ. ರಿಪೇರಿ ಕೆಲಸ ಇದ್ದರೆ ಮಾಡಿ, ಪಿಡಿಓಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೀರಿನ ಸಮಸ್ಯೆೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ಸಿಂಧನೂರು ನಗರದ ಎಲ್ಲಾಾ ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಪ್ರಸ್ತುತ ನಗರದಲ್ಲಿ 5 ದಿನಕ್ಕೊೊಮ್ಮೆೆ ನೀರು ಬಿಡಲಾಗುತ್ತಿಿದೆ. 7 ತಿಂಗಳು ನೀರು ನಿರ್ವಹಣೆ ಮಾಡಬೇಕಿರುವುದರಿಂದ ಮುಂದಿನ ದಿನಗಳಲ್ಲಿ 8-9 ದಿನಕ್ಕೊೊಮ್ಮೆೆ ನೀರು ಬಿಡಲು ಕ್ರಮ ವಹಿಸಲಾಗುವುದು. ನಗರದ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೊರತೆ:
ರಾಯಚೂರು ಜಿಲ್ಲಾಾ ಉತ್ಸವ ಇದು ಇಡೀ ಜಿಲ್ಲೆೆಗೆ ಸಂಬಂಧಿಸಿದೆ. ರಾಯಚೂರಿಗೆ ಸಿಮೀತ ಎನ್ನುವ ಮನೋಭಾವ ಬೇಡ. ಗ್ರಾಾಮ ಮಟ್ಟದಲ್ಲಿ ಪ್ರಚಾರ ಮಾಡಬೇಕಿದೆ ಎಂದು ಜಿಲ್ಲಾಾಧಿಕಾರಿಗಳು ಕಟ್ಟುನಿಟ್ಟಿಿನ ಸೂಚನೆ ನೀಡಿದ್ದಾಾರೆ. ಗ್ರಾಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಪಿಡಿಓಗಳು ಸಭೆಗಳನ್ನು ಮಾಡಿ ಅಧ್ಯಕ್ಷರು, ಆಡಳಿತ ಮಂಡಳಿಯ ಗಮನಕ್ಕೆೆ ತರಬೇಕು. ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಾಪಕ ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು.
ತಾ.ಪಂ.ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿರ್ವಹಿಸಿ

