ಸುದ್ದಿಮೂಲ ವಾರ್ತೆ
ಆನೇಕಲ್, ಸೆ. 25 :: ಸರ್ಜಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಸರ್ವ ಸದಸ್ಯರ ಸಹಕಾರದಿಂದ ಸಿಬ್ಬಂದಿ ವರ್ಗದ ಶ್ರಮದಿಂದ ಸುಮಾರು 2 ಕೋಟಿ 54 ಲಕ್ಷ ರೂಪಾಯಿ ವಾರ್ಷಿಕ ನಿವ್ವಳ ಲಾಭಾಂಶವನ್ನು ಗಳಿಸಿದ್ದು, ಸಂಘದ ಪ್ರತಿ ಶೇರುದಾರರಿಗೆ ಶೇ.18 ರಷ್ಟು ಲಾಭಂಶವನ್ನು ನೀಡಲಾಗುತ್ತಿದೆ ಎಂದು ಸರ್ಜಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಆರ್ ಗೋಪಾಲರೆಡ್ಡಿ ರವರು ತಿಳಿಸಿದರು.
ಸರ್ಜಾಪುರ ಪಟ್ಟಣದ ದಿ ಪ್ಯಾಲೇಸ್ ಗಾರ್ಡನ್ ಸಭಾಂಗಣದಲ್ಲಿ ಸಂಘದ 47ನೇ ವಾರ್ಷಿಕ ಸರ್ವ ಸದಸ್ಯರ ಮಹಾ ಸಬೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಸರ್ಜಾಪುರ, ದೊಮ್ಮಸಂದ್ರ, ಮುತ್ತನಲ್ಲೂರು, ಮುಗಳೂರು ಗ್ರಾಮಗಳಲ್ಲಿ ಸಂಘದ ಶಾಖೆಯಿದ್ದು, ನೂತನವಾಗಿ ನೆರಿಗಾ ಗ್ರಾಮದಲ್ಲಿ ಇನ್ನೊಂದು ಶಾಖೆಯನ್ನು ಆರಂಭ ಮಾಡಲು ತಯಾರಿ ನಡೆಸಲಾಗುತ್ತಿದೆ. ಮುಂದಿನ ತಿಂಗಳಿನಲ್ಲಿ ಬಡ ಜನರಿಗೆ ಅನುಕೂಲವಾಗಬೇಕು ಎಂಬ ದೃಷ್ಠಿಕೋನದಿಂದ ಜನೌಷದಿ ಕೇಂದ್ರ ಸ್ಥಾಪನೆ ಮಾಡುತ್ತೇವೆ ಎಂದರು.
ಸದಸ್ಯರ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತಸಹ ಮಾಡಬೇಕು ಎಂಬ ದೃಷ್ಟಿಕೋನದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅಬಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಜಾಪುರ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ ನಂಜಪ್ಪ, ಉಪಾಧ್ಯಕ್ಷರಾದ ವೆಂಕಟರೆಡ್ಡಿ, ನಿದೇಶಕರಾದ ಮುತ್ತಾನಲ್ಲೂರು ವಿಶ್ವನಾಥ್ ರೆಡ್ಡಿ, ಎಸ್.ವಿ.ಟಿ. ಮಂಜುನಾಥ್ ರೆಡ್ಡಿ, ನಂದಕುಮಾರ್, ರಾಮಸಾಗರ ಮಂಜುನಾಥ್, ಸಂಪಂಗಪ್ಪ, ಅಂಬರೀಶ್, ವೆಂಕಟೇಶ್, ಕಲಾ, ವಿನೋದ, ಕೆ.ವಿ.ಕೇಶವ, ಸಿಬ್ಬಂದಿ ಕೃಷ್ಣ ಮೂರ್ತಿ ಮತ್ತು ಸಂಘದ ಸದಸ್ಯರು ಹಾಗೂ ಸಿಬ್ಬದಿ ವರ್ಗದವರು ಹಾಜರಿದ್ದರು.