ಸುದ್ದಿಮೂಲ ವಾರ್ತೆ ಬೆಂಗಳೂರು, ನ.22:
ಮೆಗಾ ಸಿಟಿ ಪ್ರಾಾಜೆಕ್ಟ್ ಪ್ರಕರಣದಲ್ಲಿ ಚನ್ನಪಟ್ಟಣದ ಕಾಂಗ್ರೆೆಸ್ ಶಾಸಕ ಸಿ.ಪಿ.ಯೋಗೇಶ್ವರ್ ನಿರಾಳರಾಗಿದ್ದು, ಎರಡು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ.
ಮೆಗಾ ಸಿಟಿ ಯೋಜನೆ ಹೆಸರಲ್ಲಿ ಹಣ ಪಡೆದು ನಿವೇಶನ ಹಂಚಿಕೆ ಮಾಡಿಲ್ಲ’ ಎಂಬ ಆರೋಪ ಎದುರಿಸುತ್ತಿಿದ್ದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಖುಲಾಸೆಗೊಳಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯ ನ್ಯಾಾ. ಕೆ.ಎನ್. ಶಿವಕುಮಾರ್ ಇಂದು ಪ್ರಕರಣದ ತೀರ್ಪು ನೀಡಿದ್ದು ಶಾಸಕ ಯೋಗೇಶ್ವರ್ ಸೇರಿ 6 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಯಾಗಿದ್ದಾರೆ. ಈ ಮೂಲಕ ಯೋಗೇಶ್ವರ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿಿದ್ದಾರೆ.
ಮೆಗಾ ಸಿಟಿ ಪ್ರಾಾಜೆಕ್ಟ್ ವಂಚನೆ ಆರೋಪದಲ್ಲಿ 9 ಕೇಸ್ಗಳಿದ್ದವು. ಈ ಹಿಂದೆ ಮೂರು ಕೇಸ್ಗಳಲ್ಲಿ ಯೋಗೇಶ್ವರ್ ಖುಲಾಸೆ ಆಗಿದ್ದರು. ಇದೀಗ ಮತ್ತೆೆ ಎರಡು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಇನ್ನೂ ನಾಲ್ಕು ಪ್ರಕರಣಗಳು ಕೋರ್ಟ್ನಲ್ಲಿ ಬಾಕಿಯಿವೆ.
‘1994ರಲ್ಲಿ ಮೆಗಾಸಿಟಿ ಯೋಜನೆ ಅಡಿ ಬೆಂಗಳೂರು-ಮೈಸೂರು ರಸ್ತೆೆಯಲ್ಲಿ ನಿವೇಶನ ನೀಡುವುದಾಗಿ ಸಿ.ಪಿ. ಯೋಗೇಶ್ವರ್, ಜನರಿಂದ ಹಣ ಸಂಗ್ರಹಿಸಿದ್ದರು. ನಂತರ ಹಣ ಮತ್ತು ನಿವೇಶನ ಎರಡೂ ನೀಡಲಿಲ್ಲ’ ಎಂದು ನಿವೇಶನಕ್ಕೆೆ ಹಣ ನೀಡಿದವರು ದೂರು ದಾಖಲಿಸಿದ್ದರು.

