ಸುದ್ದಿಮೂಲ ವಾರ್ತೆ ರಾಯಚೂರು , ಡಿ.22:
ರಾಜ್ಯ ಸರ್ಕಾರದ ಪಂಚಗ್ಯಾಾರಂಟಿ ಯೋಜನೆಗಳು ಸಮಾಜದಲ್ಲಿರುವ ಎಲ್ಲಾಾ ವರ್ಗದ ಜನರ ಆರ್ಥಿಕ ಸಬಲೀಕರಣಕ್ಕೆೆ ಕಾರಣವಾಗಿದೆ ಎಂದು ರಾಜ್ಯ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ನಗರದ ಕೃಷಿ ವಿವಿ ಆಡಳಿತ ಭವನದಲ್ಲಿ ಕೌಶಲ್ಯಾಾಭಿವೃದ್ಧಿಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋೋಗ ಇಲಾಖೆ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ, ಕಲಬುರಗಿ ವಿಭಾಗ, ಜಿಲ್ಲಾಾ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರ ಸಂಯುಕ್ತಾಾಶ್ರಯದಲ್ಲಿ ಯುವ ನಿಧಿ ಯೋಜನೆ ಸಮಾಜದಲ್ಲಿ ಉಂಟು ಮಾಡಿರುವ ಧನಾತ್ಮಕ ಪರಿಣಾಮಗಳ ಕುರಿತು ನಡೆದ ವಿದ್ಯಾಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಬಡ ವರ್ಗದ ಕಲ್ಯಾಾಣಕ್ಕಾಾಗಿ ಜಾರಿಗೆ ತಂದಿರುವ ಪಂಚ ಗ್ಯಾಾರಂಟಿ ಯೋಜನೆ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಿಯಾಗಿದೆ. ಸಮಾಜದಲ್ಲಿನ ಯುವ ಸಮೂಹ ಸೇರಿದಂತೆ ಎಲ್ಲರಿಗೂ ಗ್ಯಾಾರಂಟಿ ಯೋಜನೆಗಳು ಬಹಳ ಅನುಕೂಲವಾಗಿವೆ. ಈ ಯೋಜನೆಗಳಿಂದ ರಾಜ್ಯದ ಜನರ ಜೀವನಮಟ್ಟ ಸುಧಾರಣೆಯಾಗಿದೆ. ಮುಖ್ಯವಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು.
ವಿದ್ಯಾಾರ್ಥಿಗಳೊಂದಿಗೆ ಸಂವಾದ :
ಇದೆ ವೇಳೆ ವಿದ್ಯಾಾರ್ಥಿಗಳೊಂದಿಗೆ ಸಂವಾದ ನಡೆಸಿ ಯುವನಿಧಿ ಯೋಜನೆಯ ಸಹಾಯಧನದಿಂದ ಕಾನೂನು ಪದವಿ ಓದುತ್ತಿಿದ್ದು, ಇದೆ ರೀತಿ ಮುಂದಿನ ದಿನಗಳಲ್ಲಿ ವಿದ್ಯಾಾರ್ಥಿಗಳಿಗೆ ಹೆಚ್ಚಿಿನ ಮಟ್ಟದಲ್ಲಿ ಸೌಲಭ್ಯ ಒದಗಿಸಬೇಕೆಂದು ಕಾನೂನು ಪದವಿ ವಿದ್ಯಾಾರ್ಥಿ ಶಿವಪ್ಪ ಸಲಹೆ ಮಾಡಿದರು. ಗೃಹಲಕ್ಷ್ಮಿಿ ಯೋಜನೆಯ ಸಹಾಯಧನವು ಸಕಾಲಕ್ಕೆೆ ಸಿಗುವ ಹಾಗೆ ನೋಡಿಕೊಳ್ಳಬೇಕು ಎಂದು ಕೃಷಿ ವಿವಿಯ ವಿದ್ಯಾಾರ್ಥಿನಿ ಪಾವನಿ ಜೀವಿ ತಿಳಿಸಿದರು. ಗ್ಯಾಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾಾವಲಂಬನೆ ಜೀವನ ನಡೆಸುತ್ತಿಿದ್ದಾರೆ. ಅನೇಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ರಾಯಚೂರಿನ ವಡ್ಲೂರಿನ ಮಹೇಶ್ವರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ, ತಾಲೂಕು ಸಮಿತಿ ಅಧ್ಯಕ್ಷ ಪವನ್ ಕಿಶೋರ ಪಾಟೀಲ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ರಝಾಕ್ ಉಸ್ತಾಾದ್, ಸಿಇಓ ಈಶ್ವರ ಕುಮಾರ ಕಾಂದೂ, ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ, ಆಡಳಿತ ಅಧಿಕಾರಿ ಜಾಗೃತಿ ದೇಶಮಾನೆ, ಯೋಜನಾ ನಿರ್ದೇಶಕ ಡಾ.ಟಿ.ರೋಣಿ, ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಸೇರಿದಂತೆ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ವಿದ್ಯಾಾರ್ಥಿಗಳು ಸಭೆಯಲ್ಲಿದ್ದರು.
ಪಂಚ ಗ್ಯಾರಂಟಿ ಲಾನುಭವಿಗಳೊಂದಿಗೆ ಸಂವಾದ ಜನರ ಆರ್ಥಿಕ ಸದೃಢತೆಗೆ ಅನುಕೂಲ – ಮೆಹರೋಜ್ ಖಾನ್

