ಸುದ್ದಿಮೂಲ ವಾರ್ತೆ ರಾಯಚೂರು, ಅ.02:
ದಸರಾ ಹಬ್ಬದ ಅಂಗವಾಗಿ ರಾಯಚೂರಿನ ಮಹಾನಗರ ಪಾಲಿಕೆಯಿಂದ ಹಮ್ಮಿಿಕೊಂಡಿದ್ದ ನಾಡದೇವಿಯ ಸ್ತಬ್ದ ಚಿತ್ರದ ಮೆರವಣಿಗೆಗೆ ಶಾಸಕ ಡಾ.ಶಿವರಾಜ ಪಾಟೀಲ, ಮೇಯರ್ ನರಸಮ್ಮ ಮಾಡಗಿರಿ ಜಂಟಿಯಾಗಿ ಚಾಲನೆ ನೀಡಿದರು.
ಗುರುವಾರ ಮಧ್ಯಾಾಹ್ನ ದಸರಾ ಹಬ್ಬದ ಪ್ರಯುಕ್ತ ಹಮ್ಮಿಿಕೊಂಡಿದ್ದ ನಾಡದೇವಿಯ ಮೆರವಣಿಗೆಗೆ ನಗರದ ಕಿಲ್ಲೆೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಗೆ ಚಾಲನೆಗೂ ಮುನ್ನ ಪರಸ್ಪರರು ಬನ್ನಿಿ ಪಡೆದು ಬಂಗಾರದಂತೆ ಇರೋಣ ಎನ್ನುವ ಸಂದೇಶದೊಂದಿಗೆ ಬನ್ನಿಿ ಮುಡಿದರು.
ಅನಂತರ ಪಾಲಿಕೆಯಿಂದ ಮಹಿಳಾ ಸಮಾಜ, ತೀನ್ಕಂದಿಲ್, ನೇತಾಜಿ ವೃತ್ತಘಿ, ವಾಸವಿ ವೃತ್ತದ ಮೂಲಕ ವಾಸವಿ ನಗರ ಬಡಾವಣೆಯ ಶ್ರೀ ಕಾಳಿಕಾಂಬ ಬನ್ನಿಿ ಮಂಟಪದವರೆಗೆ ಅದ್ಧೂರಿಯಾಗಿ ಮೆರವಣಿಗೆ ಸಾಗಿತು.
ಮೆರವಣಿಗೆಯುದ್ದಕ್ಕೂ ಪಾಲಿಕೆಯ ಮಹಿಳಾ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆೆಯ ಮಹಿಳೆಯರು, ಪೌರಕಾರ್ಮಿಕರು ಕುಂಬ ಹೊತ್ತು ಸಾಗಿದರೆ, ಡೊಳ್ಳು ಕುಣಿತ, ವೇಷಧಾರಿ ಕಲಾ ಪ್ರದರ್ಶನ, ಕಂಸಾಳೆ, ಬೊಂಬೆಯಾಟ, ಮಹಿಳೆಯರಿಂದ ಕೋಲಾಟ, ಜನಪದ ನೃತ್ಯ , ಕೋಲುಕುಣಿತ, ಲಂಬಾಣಿ ಸಂಸ್ಕೃತಿ ಬಿಂಬಿಸುವ ಜನಪದ ನೃತ್ಯ, ಕುದುರೆ ಸವಾರಿ ಮಾಡುತ್ತಲೆ ಸಾಗಿದ್ದು ರಸ್ತೆೆಯುದ್ದಕ್ಕೂ ಜನ ನಿಂತು ನೋಡಿದರು.
ಸಂಜೆ ವಾಸವಿ ಬಡಾವಣೆಯಲ್ಲಿರುವ ಬನ್ನಿಿ ಕಾಳಿಕಾ ದೇವಸ್ಥಾಾನ ತಲುಪಿದ ಮೆರವಣಿಗೆ ಅಲ್ಲಿ ಪಾಲಿಕೆಯ ಮೆಯರ್, ಉಪಮೇಯರ್, ಆಯುಕ್ತರು, ಸದಸ್ಯರು ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ದಸರಾ ಬನ್ನಿಿ ಮುಡಿಯುವ ಮೂಲಕ ದಸರಾ ಹಬ್ಬ ಆಚರಿಸಿ ಶುಭ ಹಾರೈಸಲಾಯಿತು.
ಬನ್ನಿಿ ಮುಡಿದ ಶಾಸಕ, ರವಿ :
ರಾಯಚೂರು ಮಹಾನಗರ ಪಾಲಿಕೆಯ ಆವರಣದಲ್ಲಿ ದಸರಾ ಹಬ್ಬದ ನಾಡದೇವಿ ಸ್ಥಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ನಂತರ ಕಿಲ್ಲೆೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರ ಸಮ್ಮುಖದಲ್ಲಿ ರಾಜಕಾರಣ ಮರೆತು ಶಾಸಕ ಡಾ.ಶಿವರಾಜ ಪಾಟೀಲ, ಕಾಂಗ್ರೆೆಸ್ ಮುಖಂಡ ರವಿಬೋಸರಾಜ್ ಪರಸ್ಪರ ಬನ್ನಿಿಪತ್ರಿಿ ವಿನಿಮಯ ಮಾಡಿಕೊಂಡು ಶುಭ ಕೋರಿದರು. ಪರಾಜಿತ ಅಭ್ಯರ್ಥಿ ಸೈಯದ್ ಶಾಲಂ ಅವರನ್ನು ಶಾಸಕರು ಗಟ್ಟಿಿಯಾಗಿ ಅಪ್ಪಿಿಕೊಂಡು ಸಂಭ್ರಮಿಸಿದ್ದು ನೆರೆದ ಸದಸ್ಯರ ಮೊಗದಲ್ಲಿಯೂ ನಗು ಮೂಡಿಸಿತು.
ನೃತ್ಯ :
ನಗರದ ಪ್ರಮುಖ ರಸ್ತೆೆಯಲ್ಲಿ ಸಾಗಿದ ಮೆರವಣಿಗೆಯ ವೇಳೆ ಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ ಅವರ ಪತಿ ನರಸಿಂಹಲು ಮಾಡಗಿರಿ ಹಾಗೂ ಉಪಮೇಯರ್ ಸಾಜಿದ್ ಸಮೀರ್ ಅವರು ಲೇಜಿಂ ತಾಳಕ್ಕೆೆ ನೃತ್ಯ ಮಾಡಿ ಮೆರವಣಿಗೆಯ ಕಳೆ ಹೆಚ್ಚಿಿಸಿದರು.ಅಲ್ಲದೆ, ಅವರೊಂದಿಗೆ ಕೆಲ ಸಿಬ್ಬಂದಿಯೂ ಹೆಜ್ಜೆೆ ಹಾಕಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಉಪಮೇಯರ್ ಸಾಜೀದ್ ಸಮೀರ್, ಆಯುಕ್ತ ಜುಬೀನ ಮೊಹಪಾತ್ರಘಿ, ತಹಶೀಲ್ದಾಾರ್ ಸುರೇಶ ವರ್ಮಾ, ಸದಸ್ಯರಾದ ಜಯಣ್ಣಘಿ, ಜಿಂದಪ್ಪಘಿ, ಬಸವರಾಜ ಪಾಟೀಲ ದರೂರು, ನಾಗರಾಜ್, ಶಶಿರಾಜ, ಎನ್.ಕೆ.ನಾಗರಾಜ, ಸಣ್ಣ ನರಸರೆಡ್ಡಿಿಘಿ, ತಿಮ್ಮಪ್ಪಘಿ, ಶ್ರೀನಿವಾಸರೆಡ್ಡಿಿಘಿ, ರಮೇಶ, ಫಿರೋಜ್ ಹಮ್ರಾಜ್, ಮಣಿಕಂಠ, ವೆಂಕಟೇಶ, ಮುನಿಸ್ವಾಾಮಿ, ಅಮಿತಕುಮಾರ ಲೋಧ, ಮುಖಂಡರಾದ ನರಸಿಂಹಲು ಮಾಡಗಿರಿ, ಕೆ,ಶಾಂತಪ್ಪ ಜಯವಂತರಾವ್, ಜಿ.ಶಿವುಮೂರ್ತಿ,ಯುಸ್ು ಖಾನ್, ರವೀಂದ್ರ ಜಲ್ದಾಾರ್, ಕಡಗೋಲು ಆಂಜನೇಯ್ಯಘಿ, ಶ್ರೀನಿವಾಸರೆಡ್ಡಿಿಘಿ, ಮಹೇಂದ್ರರೆಡ್ಡಿಿಘಿ, ಜಿ.ಕೇಶವ ಸೇರಿ ನೌಕರರು, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊೊಂಡಿದ್ದರು.
ಮಹಾನಗರ ಪಾಲಿಕೆಯಿಂದ ದಸರಾ ಸಂಭ್ರಮ, ಬನ್ನಿಿ ಮುಡಿದ ಶಾಸಕ, ಸದಸ್ಯರು ನಾಡದೇವಿ ಮೂರ್ತಿ ಭವ್ಯ ಮೆರವಣಿಗೆ ಗಮನ ಸೆಳೆದ ಕಲಾ ತಂಡಗಳು
