ಸುದ್ದಿಮೂಲ ವಾರ್ತೆ ರಾಯಚೂರು, .18:
ರಾಜ್ಯ ಬಜೆಟ್ನಲ್ಲಿ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಪರಿಗಣಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದನ್ನೇ ತಮ್ಮ ಶಾಸಕರ ಸಾಧನೆ ಎಂದು ಬಿಂಬಿಸಿ ವಿಜಯೋತ್ಸವ ಆಚರಿಸಿದ್ದಕ್ಕೆೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ಕಾವೇರಿದೆ.
ಮಹಾನಗರ ಪಾಲಿಕೆಯಾಗಿ ಘೋಷಿಸಿದ್ದರೆ ಅದು ಶಾಸಕರ ಸಾಧನೆ, ಬಿಜೆಪಿಯವರು ವಿಜಯೋತ್ಸವಕ್ಕೆೆ ಅಡ್ಡಿಿ ಇಲ್ಲಘಿ. ಆದರೆ, ಪರಿಶೀಲನೆ ಎಂದೇಳಿ ಸಿಎಂ ತಮ್ಮ ಬಜೆಟ್ನಲ್ಲಿ ಸ್ಪಷ್ಟವಾಗಿ ಹೇಳಿದ್ದಾಾರೆ. ಹೀಗಿದ್ದಾಾಗ ಘೋಷಣೆ ಮಾಡಿದಷ್ಟೆೆ ವಿಜಯೋತ್ಸವ ಆಚರಿಸಿದ್ದು ಕೆಲವರು ಶಾಸಕ ಡಾ.ಶಿವರಾಜ ಪರ ಘೋಷಣೆ, ಸಂದೇಶ ಹಾಕುತ್ತಿಿರುವುದು ಅಪಹಾಸ್ಯಕ್ಕೆೆ ಈಡಾಗಿದೆ.
ಪರಿಶೀಲಿಸಿ ಕ್ರಮ ಎನ್ನುವ ಪದ ಸಾಮಾನ್ಯ ಜನರು ಮನವಿ ನೀಡಿದ ಮೇಲೆಯೂ ಬರೆದು ಕೊಡುವ ಒಕ್ಕಣಿಕೆಯಷ್ಟೆೆ ಎನ್ನುವ ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ವಿಜಯೋತ್ಸವ ಮಾಡಿದ್ದು ಅದರಲ್ಲಿ ಬುದ್ದಿವಂತರೆನ್ನಿಿಸಿಕೊಂಡವರು ಭಾಗವಹಿಸಿದ್ದು ಗಮನಿಸಿದರೆ ವ್ಯಕ್ತಿಿಪೂಜೆ ವಿನಃ ಜನ ಪರ ಕಾಳಜಿ ಅಲ್ಲ ಎಂದು ಟೀಕಿಸಿದ್ದಾಾರೆ.
ಅಲ್ಲದೆ, ಒಬ್ಬ ಜವಾಬ್ದಾಾರಿಯುತ ಸ್ಥಾಾನದಲ್ಲಿರುವ ಪೌರಾಯುಕ್ತ ಶಾಸಕರಿಗೆ ಸನ್ಮಾಾನಿಸಿದ ೆಟೊ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಕ್ಕೆೆ ಟೀಕೆ ವ್ಯಕ್ತವಾಗಿದ್ದು ಗುಮಾಸ್ತಘಿ, ಜವಾನರಿಗಿಂತ ಕಡೆಯಾಗಿ ಪೌರಾಯುಕ್ತ ನಡೆದುಕೊಂಡಿದ್ದಾಾರಲ್ಲ ಎಂದು ಲೇವಡಿ ಮಾಡಿ ೇಸ್ ಬುಕ್ನಲ್ಲಿ ಟ್ರೋೋಲ್ ಮಾಡುತ್ತಿಿದ್ದಾಾರೆ.
ಇದೆಲ್ಲ ಒಂದು ಭಾಗ. ನಿಜವಾಗಿಯೂ ಮಹಾನಗರ ಪಾಲಿಕೆಯಾಗಿ ಸರ್ಕಾರ ಪರಿಗಣಿಸಿ ಬಜೆಟ್ನಲ್ಲಿ ಘೋಷಿಸಿದ್ದರೆ ಅದಕ್ಕೆೆ ಶಾಸಕರಿಗೆ, ಸರ್ಕಾರಕ್ಕೆೆಘಿ, ಸಿಎಂಗೆ, ಉಸ್ತುವಾರಿ ಸಚಿವರಿಗೆ ಶಹಬ್ಬಾಾಷಗಿರಿ ಕೊಟ್ಟರೆ ತಪ್ಪಲ್ಲಘಿ. ಏನೂ ಆಗಿಲ್ಲಘಿ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾಾರೆ. ಅಲ್ಲದೆ, ನಿಯಮಾನುಸಾರ 2 ಲಕ್ಷ ಜನಸಂಖ್ಯೆೆ ಮೀರಿದ್ದರೆ ಮಹಾನಗರ ಪಾಲಿಕೆ ಮಾಡಬಹುದು. 2011ರ ಜನಸಂಖ್ಯೆೆ ಪ್ರಕಾರ ಲೆಕ್ಕ ಹಾಕಿದರೂ ರಾಯಚೂರಿನಲ್ಲಿ ಸದ್ಯ 3 ಲಕ್ಷಕ್ಕೂ ಅಧಿಕ ಜನಸಂಖ್ಯೆೆ ಇದೆ. ಆದರೂ ಪರಿಶೀಲನೆ ಮಾಡುತ್ತೇವೆ ಎಂದು ಬಜೆಟ್ನಲ್ಲಿ ಘೋಷಿಸಿದ್ದು ಮಾತ್ರ ಶಾಸಕರ ಒತ್ತಡಕ್ಕೆೆ ಮಣಿದರೊ, ಚುನಾವಣೆ ಬರುತ್ತಿಿದೆ ಮಹಾನಗರ ಪಾಲಿಕೆ ಮಾಡದಿದ್ದರೆ ಮಾತು ತಪ್ಪಿಿದ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ನಗರ ಶಾಸಕರ ಒತ್ತಡಕ್ಕೆೆ ಮಣಿದು ಪ್ರಸ್ತಾಾಪಿಸಿದರೇ ಎನ್ನುವ ಪ್ರಶ್ನೆೆ ನಗರದ ಪ್ರಜ್ಞಾವಂತರನ್ನು ಕಾಡುತ್ತಿಿದೆ.
ಅಲ್ಲದೆ ಈ ಹಿಂದೆಯೂ ಸಲ್ಲಿಸಿದ ಪ್ರಸ್ತಾಾವನೆ ತಾಂತ್ರಿಿಕವಾಗಿ ಒಪ್ಪಿಿತವಲ್ಲದ್ದು ಹೀಗಾಗಿ ಮರು ಪರಿಶೀಲಿಸಿ ಯಾಕೆ ಮಹಾನಗರ ಪಾಲಿಕೆ ಮಾಡಬೇಕು ಎನ್ನುವ ಬಗ್ಗೆೆ ವಿಸ್ತೃತವಾದ ಮರು ಪ್ರಸ್ತಾಾವನೆ ಸಲ್ಲಿಸಲು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿಲ್ಲಾಾಧಿಕಾರಿಗೆ ಪತ್ರ ಬರೆದಿದ್ದರು. ಆ ಪತ್ರ ಪಡೆದ ಜಿಲ್ಲಾಾಧಿಕಾರಿ ಶಾಸಕರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಅಪರತಪರ ಮಾಹಿತಿಯ ಪ್ರಸ್ತಾಾವನೆ ಸಲ್ಲಿಸಿದರೊ, ಸರ್ಕಾರಕ್ಕೆ ಆ ಮರು ಪ್ರಸ್ತಾಾವನೆ ತಲುಪಿದೇಯೆ, ತಲುಪಿದ್ದರೇ ಪರಿಶೀಲಿಸಿ ಕ್ರಮ ಎನ್ನುವ ಅಡ್ಡಗೋಡೆ ಮೇಲಿನ ದೀಪದ ಭರವಸೆ ಸಿಎಂ ಬಜೆಟ್ನಲ್ಲಿ ಪ್ರಸ್ತಾಾಪಿಸಿದ್ದು ಯಾಕೆ. ಇದೆಲ್ಲ ಶಾಸಕರ ಚುನಾವಣೆ ಗಿಮಿಕ್ ಹೀಗೆ ಹತ್ತಾಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕಳೆದ ಎರಡು ದಿನಗಳಿಂದ ಸಾಗಿವೆ. ಕೆಲವರಿಗಂತೂ ವಿಜಯೋತ್ಸವ ಆಚರಿಸಿದ್ದು ಕಂಡು ಇದೆಲ್ಲ ಬೇಕಿತ್ತ. ಸಂಭ್ರಮಿಸುವ ಭರವಸೇನಾ, ಅಪಮಾನಿಸುವ ಪ್ರಸ್ತಾವನೆ ಅದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.