ಸುದ್ದಿಮೂಲವಾರ್ತೆ
ಕೊಪ್ಪಳ ಮೇ 20:ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗೂ 8 ಜನ ಹಿರಿಯ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಯುಕ್ತವಾಗಿ ಕೊಪ್ಪಳದ ಅಶೋಕ ವೃತ್ತದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಹಚ್ಚಿ ಸಿಹಿ ತಿನ್ನಿಸುವುದರ ಮೂಲಕ ಸಂಬ್ರಮ ಆಚರಣೆ ಮಾಡಿದರು.
ಇದೇ ವೇಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಹಾಗು ರಾಘವೇಂದ್ರ ಹಿಟ್ನಾಳ ಪರ ಘೋಷಣೆ ಹಾಕಿದರು. ಅವರ ಭಾವಚಿತ್ರವಿರುವ ಬ್ಯಾನರಿಗೆ ಹಾಲಿನ ಅಭಿಷೇಕ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲು ಪೂಜಾರ,ಮಹೇಶ ಹಳ್ಳಿಗುಡಿ,ಪದ್ಮಾವತಿ ಕಂಬಳಿ,ಮಲ್ಲು ಗೋಬೀ,ಬಸವರಾಜ,ವಿಜಯ,ಪ್ರದೀಪ್,ಪಂಪಾಪತಿ,ಮಂಜುನಾಥ,ಮಹಾಂತೇಶ,ದುರ್ಗೇಶ,ರಮೇಶ,ಮುನೀರ್ ,ಮುದುಕಪ್ಪ,ಗವಿ,ಸಂತೋಷ,ಪ್ರಕಾಶ,ಪರಶುರಾಮ ಹಾಗೂ ಇನ್ನು ಹಲವಾರು ಕಾಂಗ್ರೇಸ್ ಕಾರ್ಯಕರ್ತರು,ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.