ಸುದ್ದಿಮೂಲ ವಾರ್ತೆ ರಾಯಚೂರು, ಸೆ.27:
ಅನ್ನದಾತರಾದ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಿಸಲು ಮುದ್ದನಗುಡ್ಡಿಿ ಏತ ನೀರಾವರಿ ನಿರ್ಮಾಣ ಮೂಲಕ ಮುದ್ದನಗುಡ್ಡಿಿ, ಪೋತ್ನಾಾಳ, ಕರಾಬ್ ದಿನ್ನಿಿ ಸೇರಿದಂತೆ ಸುಮಾರು 1600 ಎಕರೆಗೆ ನೀರಾಡುವ ಮಹತ್ವದ ಯೋಜನೆ ಇದಾಗಿದೆ ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್ ಎಸ್ ಬೋಸರಾಜು ಅವರು ತಿಳಿಸಿದರು.
ಮಾನ್ವಿಿ ವಿಧಾನಸಭಾ ಕ್ಷೇತ್ರದ ಮುದ್ದನಗುಡ್ಡಿಿ ಗ್ರಾಾಮದಲ್ಲಿ ಮುದ್ದನಗುಡ್ಡಿಿ ಏತ ನೀರಾವರಿ ಯೋಜನೆಗೆ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ನೀರಾವರಿಯಿಂದ ರೈತರ ಪ್ರಗತಿಗಾಗಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಲವಾರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಿಕೊಳ್ಳಲಾಗುತ್ತಿಿದೆ. ಅಂತೆಯೆ ಇಲ್ಲಿನ ಸ್ಥಳೀಯ ರೈತರ ಬೇಡಿಕೆಯಂತೆ ತಾಂತ್ರಿಿಕ ವರದಿಯಂತೆ ವೈಜ್ಞಾನಿಕವಾಗಿ ಮುದ್ದನಗುಡ್ಡಿಿ ಏತ ನೀರಾವರಿ ಯೋಜನೆಯನ್ನು ನಿರ್ಮಿಸಲಾಗುತ್ತಿಿದೆ ಎಂದರು.
ಅಧಿಕಾರಿಗಳು ಹಾಗೂ ತಾಂತ್ರಿಿಕ ಸಿಬ್ಬಂದಿಗಳು ಗುಣಮಟ್ಟದೊಂದಿಗೆ ಕಾಮಗಾರಿಯನ್ನು ನಿರ್ವಹಿಸಬೇಕು. ಇಂತಹ ಕಾಮಗಾರಿಗಳಿಂದ ಶಾಶ್ವತವಾಗಿ ರೈತರ ಕೈ ಬಲಪಡಿಸಿದಂತಾಗುತ್ತದೆ ಹಾಗಾಗಿ ಜವಾಬ್ದಾಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಇದಕ್ಕೆೆ ರೈತರು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಗ್ರಾಾಮೀಣ ಭಾಗವನ್ನು ನೀರಾವರಿ ಮಾಡುವ ಮೂಲಕ ಜನರು ಸ್ವಾಾವಲಂಬಿಗಳಾಗಿ ಜೀವನ ನಡೆಸಲು ಅನುಕೂಲವಾಗಲಿದೆ. ಈ ಭೂ ಪ್ರದೇಶ ನೀರಾವರಿಯಾಗುವುದರಿಂದ ಉದ್ಯೋೋಗ ಅರಸಿ ಗುಳೆ ಹೋಗುವುದು ತಪ್ಪಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷರಾದ ಬಿಕೆ ಅಮರೇಶಪ್ಪ, ಕಾಂಗ್ರೆೆಸ್ ಮುಖಂಡರಾದ ಶರಣಯ್ಯ ನಾಯಕ ಗುಡದಿನ್ನಿಿ, ಬ್ಲಾಾಕ್ ಅಧ್ಯಕ್ಷರಾದ ಅಬ್ದುಲ್ ಗೂರ್ ಸಾಬ್, ಬಸನಗೌಡ ಮಾಲಿ ಪಾಟಿಲ್, ಕೆ ಶಾಂತಪ್ಪ, ಬಾಲಸ್ವಾಾಮಿ ಕೊಡ್ಲಿಿ, ರುದ್ರಪ್ಪ ಅಂಗಡಿ, ದೇವೇಂದ್ರಪ್ಪ, ಖಾಲೀದ್ ಸಾಹೆಬ್, ರೌಡೂರು ಮಹಾಂತೇಶ ಸ್ವಾಾಮಿ, ಸುಭಾಷ್ ನಾಯಕ, ಖಾಲೀದ್ ಗುರು, ದೊಡ್ಡ ಬಸ್ಸಪ್ಪ ಗೌಡ, ಚಂದ್ರಶೇಖರ್ ಸೇರಿದಂತೆ ಅನೇಕರಿದ್ದರು.
*ಮುದ್ದನಗುಡ್ಡಿಿ ಏತ ನೀರಾವರಿ ಯೋಜನೆಗೆ ಸಚಿವ ಭೂಮಿ ಪೂಜೆ ಶಾಶ್ವತ ನೀರಾವರಿ ಕಲ್ಪಿಿಸಲು ಏತ ನೀರಾವರಿ ಯೋಜನೆ- ಎನ್ಎಸ್ ಬೋಸರಾಜು
