
ಸುರೇಶ ಹೀರಾ ಸಿರವಾರ, ಡಿ.28:
ಈ ಭಾಗದ ಕ್ರೀೆಡಾ ಪಟುಗಳು, ಕ್ರೀೆಡಾ ಅಭಿಮಾನಿಗಳು ಕಳೆದ 30ವರ್ಷದಿಂದ ಸಿರವಾರ ಪಟ್ಟಣದಲ್ಲಿ ಕ್ರೀೆಡಾಂಗಣ ನಿರ್ಮಾಣಕ್ಕೆೆ ಮನವಿ ಪತ್ರಗಳು, ಹೋರಾಟ,ಶಾಸಕರ, ಸಚಿವರ ಭೇಟಿ ಮಾಡಿದ ಲ ಇಂದು ನೂತನ ಕ್ರೀೆಡಾಂಗಣದ ಕನಸು ನನಸಾಗುವ ಕಾಲ ಬಂದಿದೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮುಖ್ಯ ರಸ್ತೆೆಯಲ್ಲಿ ಸರ್ವೆ ನಂ.403ರಲ್ಲಿ 8ಎಕರೆಯ ಭೂಮಿಯಲ್ಲಿ ಬೃಹತ್ ಕ್ರೀೆಡಾಂಗಣ ನಿರ್ಮಾಣವಾಗಲಿದೆ.
ಕ್ರೀಡಾಂಗಣ ನಿವೇಶನಕ್ಕೆೆ ಇದ್ದ ಅಡೆ ತಡೆಗಳು ಸರಕಾರದ ಮಟ್ಟದಲ್ಲಿ ಶಾಸಕರು, ಸಚಿವರ ಶ್ರಮದಿಂದ ಪರಿಹಾರವಾಗಿವೆ, ಸರಕಾರದಿಂದ ಕ್ರೀಡಾ ಇಲಾಖೆಯ ವತಿಯಿಂದ 4ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
ಡಿಸೆಂಬರ್ 29ರಂದು ಸೋಮವಾರ ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರು, ಶಾಸಕ ಹಂಪಯ್ಯ ನಾಯಕ ಭೂಮಿ ಪೂಜೆ ಮಾಡುವ ಮೂಲಕ ನೂರಾರು ಕ್ರೀಡಾ ಪಟುಗಳಲ್ಲಿ ಚೈತನ್ಯ ತುಂಬಿದ್ದಾರೆ.
ಸಿರವಾರ ಹೋಬಳಿ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾಡಿ, 7ವರ್ಷದಲ್ಲಿ ಅಭಿವೃದ್ಧಿಿ ಪಥದತ್ತ ಸಾಗಿದ್ದು, ಪ್ರಜಾಸೌಧ ನಿರ್ಮಾಣ ಕಾರ್ಯಕ್ರಮವನ್ನು 5ಎಕರೆ ಪ್ರದೇಶದಲ್ಲಿ 8ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆೆ ಮುಂದಾಗಿದ್ದು ಕರ್ನಾಟಕ ಗೃಹ ಮಂಡಳಿಯವರಿಗೆ ಕಾಮಗಾರಿ ಜವಾಬ್ದಾಾರಿ ನೀಡಲಾಗಿದೆ, ಇನ್ನೂ ಗ್ರಂಥಾಲಯ, ವಸತಿ ನಿಲಯ, ವಾಲ್ಮೀಕಿ ಭವನ, ಅಗ್ನಿಿಶಾಮಕ ಠಾಣೆ, ರಸ್ತೆೆ ವಿಭಜಕ, ಹೈಮ್ಟ್ಾ ದೀಪಗಳು, ಬಸ್ ನಿಲ್ದಾಾಣ, ಇಂದಿರಾ ಕ್ಯಾಾಂಟಿನ್ ಜನರಿಗೆ ಅನುಕೂಲ ಸೇರಿದಂತೆ ಹಲವಾರು ಅಭಿವೃದ್ಧಿಿ ಕಾರ್ಯಗಳಿಗೆ ಸಚಿವ ಎನ.ಎಸ್.ಭೋಸರಾಜು ಮಾನ್ವಿಿ ಶಾಸಕ ಹಂಪಯ್ಯ ನಾಯಕ ಪಣ ತೊಟ್ಟು ನಿಂತಂತೆ ಕಾಣುತ್ತಿಿದೆ.
ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳು ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸಿದರು. ತಾಲ್ಲೂಕು ಕೇಂದ್ರ ಹೆಸರಿಗೆ ಮಾತ್ರ ಎಂದು ಅನೇಕರು ಶಾಪ ಹಾಕಿದ್ದೂ ಉಂಟು. ಕಳೆದ 2 ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಿಗೆ ವೇಗ ಸಿಕ್ಕಿಿದೆ. ಬೇರೆ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನ ಸೌಧ (ಪ್ರಜಾಶಕ್ತಿಿ ಸೌಧ) ನಿರ್ಮಾಣಕ್ಕೆೆ ತೊಂದರೆ ಕಾಣಬಹುದು, ಸಿರವಾರ ತಾಲೂಕು ಕೇಂದ್ರ ಅಭಿವೃದ್ಧಿಿ ವೇಗವಾಗಿ ಅಭಿವೃದ್ಧಿಿ ಕಾರ್ಯ ದತ್ತ ಸಾಗಿದ್ದು ಯುವ ಪೀಳಿಗೆಗೆ ಸಂತಸವಾಗಿದೆ. ಇನ್ನೂ ರಾಜಕೀಯವಾಗಿ ಟೀಕೆ ಟಿಪ್ಪಣಿ, ಆರೋಪ, ಮಾಡುವುದು ಸಹಜವಾದರೂ, ಸಿರವಾರ ತಾಲೂಕು ವಿಧಾನಸಭಾ ಕ್ಷೇತ್ರವಾಗಬೇಕು ಎಂಬ ಮಾತುಗಳು, ಸಹಕೇಳಿ ಬರುತ್ತಿಿವೆ. ಹಾಗಾದಲ್ಲಿ ಅಭಿವೃದ್ಧಿಿಗೆ ಪೂರಕವಾಗಿ, ಪ್ರತ್ಯೇಕ ಅನುದಾನ ಸಿಗುತ್ತದೆ, ಸ್ಥಳೀಯರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ಜನರ ನಿಲುವಾಗಿದೆ.

