ಸುದ್ದಿಮೂಲ ವಾರ್ತೆ ರಾಯಚೂರು, ಅ.05:
ಅಂತರಜಲ ವೃದ್ದಿಗಾಗಿ ಕೆರೆಗಳ ಸರ್ವೋತಮುಖ ಅಭಿವೃದ್ದಿ ಕಾಮಗಾರಿಗಳು ಕೈಗೆತ್ತಿಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ರಾಯಚೂರಿನ ಹೊರವಲಯ ಗದ್ವಾಾಲ್ ರಸ್ತೆೆಯಲ್ಲಿರುವ ತಾಯಮ್ಮ ಕೆರೆಯನ್ನು 1 ಕೋ 50 ಲಕ್ಷ ವೆಚ್ಚದಲ್ಲಿ ಅಭಿವೃದ್ದಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆೆಯಲ್ಲಿ ತಮ್ಮ ಹಾಗೂ ಜಿಲ್ಲಾಾ ಪಂಚಾಯಿತಿ ವ್ಯಾಾಪ್ತಿಿಗೆ ಬರುವ ಕೆರೆಗಳ ಅಭಿವೃದ್ದಿ ಪಡಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿಿದೆ ಈ ವಿಷಯದಲ್ಲಿ ಇಂದು ಕಾಮಗಾರಿಗೆ ಚಾಲೆ ನೀಡಲಾಗಿದೆ ಎಂದರು.
ಕೆರೆ ಪಕ್ಕದಲ್ಲಿರುವ ದೇವಸ್ಥಾಾನಕ್ಕೆೆ ಪ್ರತಿ ತಿಂಗಳು ಹುಣ್ಣಿಿಮೆ, ಅಮಾವಾಸ್ಯೆೆಗೆ ಜನರು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸುತ್ತಿಿದ್ದು ಸಂಪರ್ಕ ರಸ್ತೆೆ ಕಲ್ಪಿಿಸಲು ಹೆಚ್ಚುವರಿಯಾಗಿ 50 ಲಕ್ಷ ಅನುದಾನ ನೀಡಲಾಗುವುದು ಎಂದ ಅವರು ಈ ಕೆರೆ ಕಾಮಗಾರಿಯನ್ನು ಗುಣಮಟ್ಟ ಮತ್ತು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಸದರಿ ಕೆರೆಗೆ ಕೃಷ್ಣಾಾ ನದಿಯಿಂದ ನೀರು ತುಂಬಿಸುವ ಯೋಜನೆ ಇದ್ದು ಬರುವ ದಿನಗಳಲ್ಲೂ ಸಹ ಇದಕ್ಕೂ ಚಾಲನೆ ನೀಡಲಾಗುವುದು ಎಂದರು.
ಚಂದ್ರವೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ ಚತುಷ್ಪಥ ರಸ್ತೆೆಗೆ 25 ಕೋಟಿ ಮಂಜೂರು ಮಾಡಿದ್ದು ಶೀಗ್ರವೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಅದೇ ರೀತಿ ಗಂಜ್ ವೃತ್ತದಿಂದ ಶಕ್ತಿಿನಗರದವರೆಗೆ ಚತುಷ್ಪಥ ರಸ್ತೆೆಗಾಗಿ 43 ಕೋಟಿ ರೂ ಕ್ರಿಿಯಾ ಯೋಜನೆ ಸಿದ್ದಪಡಿಸಿದ್ದು ಆ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದರು.
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಾಣ ಕಾಮಗಾರಿಗೆ ತೀವ್ರಗತಿಯಲ್ಲಿ ಚಾಲನೆ ದೊರೆತಿದ್ದು ಬರುವ ಒಂದು ವರ್ಷದಲ್ಲಿ ಪೂರ್ಣಗೊಳಿಸಿ ವಿಮಾನ ಹಾರಾಟಕ್ಕೆೆ ಅಗತ್ಯ ಕ್ರಮ ವಹಿಸುವ ಪ್ರಯತ್ನ ನಡೆದಿದೆ ಎಂದರು.
ಒಪೆಕ್ ಆಸ್ಪತ್ರೆೆಯಲ್ಲಿ ನೂರು ಹಾಸಿಗೆಯ ಟ್ರಾಾಮಾ ಸೆಂಟರ್ ಮಂಜೂರಾತಿ ನೀಡಿದ್ದು ಅದಕ್ಕೆೆ ಬೇಕಾಗುವ ಕಟ್ಟಡ ಮತ್ತು ಸಾಮಾಗ್ರಿಿಗಳು ವ್ಯವಸ್ಥೆೆ ಮಾಡಲಾಗುವುದು ಎಂದು ಹೇಳಿದ ಅವರು ಈ ಎಲ್ಲ ಅಭಿವೃದ್ದಿ ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಮಹಾನಗರ ಪಾಲಿಕೆ ವ್ಯಾಾಪ್ತಿಿಯಲ್ಲಿ ಮಾವಿನ ಕೆರೆ ಅಭಿವೃದ್ದಿಗೆ ತಮ್ಮ ಇಲಾಖೆಯಿಂದ 50 ಕೋಟಿ ರೂ. ನೀಡಿದ್ದುಘಿ, ಕಾಮಗಾರಿ ತ್ವರಿತಗತಿಯಲ್ಲಿ ಇನ್ನಷ್ಟು ಅಗತ್ಯ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಪ್ತ ಮಿತ್ರನ ಹೊಗಳಿದ ಪಾಪಾರೆಡ್ಡಿಿ :
ಕೆರೆ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎ.ಪಾಪಾರೆಡ್ಡಿಿ ತಮ್ಮ ಆಪ್ತ ಮಿತ್ರನಾದ ಸಚಿವ ಎನ್ಎಸ್ ಬೋಸರಾಜ್ ಅವರನ್ನು ಮುಕ್ತಕಂಠದಿಂದ ಶ್ಲಾಾಘಿಸಿದರು.
ರಾಯಚೂರಿನ ಅಭಿವೃದ್ದಿಗಾಗಿ ಹಗಲಿರಳು ಶ್ರಮಿಸುತ್ತಿಿರುವ ಬೋಸರಾಜ್ ಮತ್ತು ತಾವು ಕಳೆದ 50 ವರ್ಷದಿಂದಲೂ ಆಪ್ತ ಮಿತ್ರರಾಗಿದ್ದುಘಿ. ಪಕ್ಷ ಬೇರೆಯಾಗಿದ್ದರೂ ಅವರ ಅಭಿವೃದ್ದಿ ಕಾರ್ಯಗಳನ್ನು ನಾವು ಮೆಚ್ಚಲೇಬೇಕಾಗುತ್ತದೆ ಎಂದು ವರ್ಣಿಸಿದರು.
ಸದರಿ ಕಾಮಗಾರಿ ಗುತ್ತಿಿಗೆ ಪಡೆದವರು ಗುಣಮಟ್ಟದಿಂದ ನಿರ್ವಹಿಸಬೇಕು ಬಹಳ ವರ್ಷಗಳಿಂದಲೂ ಕೆರೆ ಪಕ್ಕದಲ್ಲಿರುವ ದೇವಸ್ಥಾಾನಕ್ಕೆೆ ರಾಯಚೂರು ನಗರದ ಪರಿಶಿಷ್ಟರು, ಹಿಂದುಳಿದವರು ಆಗಮಿಸಿ ಪೂಜೆ ನೆರವೇರಿಸುತ್ತಾಾರೆ. ಅದರ ಪಕ್ಕದಲ್ಲೆೆ ಇರುವ ಈ ಕೆರೆ ಅಭಿವೃದ್ದಿ ಪಡಿಸುವುದರಿಂದ ಅನುಕೂಲವಾಗುತ್ತದೆ ಎಂದರು.
ಈ ಹಿಂದೆ ಬಿಜೆಪಿ ಅಧಕಾರದಲ್ಲಿದ್ದಾಾಗ ಶಾಸಕ ಡಾ.ಶಿವರಾಜ ಪಾಟೀಲ ಸದರಿ ಕೆರೆ ಅಭಿವೃದ್ದಿಗೆ 2 ಕೋಟಿ ನೀಡಲಾಗಿದೆ ಎಂದು ಹೇಳಿದ್ದರು. ಆದರೆ, ಆ ಕಾಮಗಾರಿ ಆರಂಭವೇ ಆಗಲಿಲ್ಲಘಿ. ಅದೇ ರೀತಿ ನಗರಾಭಿವೃದ್ದಿ ಪ್ರಾಾಧಿಕಾರದಿಂದಲೂ ಕಾಮಗಾರಿ ಕೈಗೆತ್ತಿಿಕೊಳ್ಳುವ ಭರವಸೆಯೂ ಸಹ ಈಡೇರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಆದರೆ, ಸಣ್ಣ ನೀರಾವರಿ ಖಾತೆ ಹೊಂದಿದ ಬೊಸರಾಜ್ ಒಂದುವರೇ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸುವ ಜೊತೆಗೆ ರಸ್ತೆೆಗೆ 50 ಲಕ್ಷ ನೀಡುವ ಭರವಸೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆರ್ಡಿಎ ಸದಸ್ಯ ನರಸಿಂಹಲು ಮಾಡಗಿರಿ ಮಾತನಾಡಿದರು. ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ, ಮುಖಂಡರಾದ ಮೊಹ್ಮದ್ ಶಾಲಂ, ಜಯವಂತರಾವ್ ಪತಂಗೆ, ಜಯಣ್ಣಘಿ, ಲಕ್ಷ್ಮೀರೆಡ್ಡಿಿಘಿ, ಅಮರೇಗೌಡ ಹಂಚಿನಾಳ,ವಿ ಕೃಷ್ಣಮೂರ್ತಿ, ಎನ್.ಶ್ರೀನಿವಾಸರೆಡ್ಡಿಿ, ಯೂಸ್ೂಖಾನ್, ಗೋವಿಂದರೆಡ್ಡಿಿಘಿ, ಬಿ.ತಿಮ್ಮಾಾರೆಡ್ಡಿಿಘಿ,ಅತ್ತನೂರು ಬಸವರಾಜ ಪಾಟೀಲ, ನರಸರೆಡ್ಡಿಿಘಿ, ವೆಂಕಟೇಶ, ನಾಗಿರೆಡ್ಡಿಿ, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಲೋಕೇಶ ಮತ್ತಿಿತರರಿದ್ದರು.
150 ಲಕ್ಷ ವೆಚ್ಚದಲ್ಲಿ ಯಲ್ಲಮ್ಮ ಕೆರೆ ಅಭಿವೃದ್ಧಿಿಗೆ ಸಚಿವ ಬೋಸರಾಜು ಚಾಲನೆ ಅಂತರಜಲ ಅಭಿವೃದ್ದಿಗೆ ಕೆರೆ ದುರಸ್ಥಿಿ
