ಸುದ್ದಿಮೂಲ ವಾರ್ತೆ ಸಿಂಧನೂರು, ಸೆ.25:
ಸಿಂಧನೂರು ದಸರಾ ಉತ್ಸವದ ಅಂಗವಾಗಿ 27 ರಂದು ನಗರ ದಸರಾ ಉದ್ಘಾಾಟನೆ ಹಾಗೂ ಜಿಲ್ಲಾಾಸ್ಪತ್ರೆೆ ನಿರ್ಮಾಣಕ್ಕೆೆ ಭೂಮಿ ಪೂಜೆ ಹಾಗೂ ಈಗಾಗಲೇ ನಿರ್ಮಾಣಗೊಂಡ ತಾಯಿ ಮಕ್ಕಳ ಆಸ್ಪತ್ರೆೆ ಉದ್ಘಾಾಟನೆ ನಡೆಯಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ಪಿಡಬ್ಲ್ಯುಡಿಕ್ಯಾಾಂಪಿನ ತಾಯಿ-ಮಕ್ಕಳ ಆಸ್ಪತ್ರೆೆಯಲ್ಲಿ ಗುರುವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ಜನತೆಯ ಬಹುದಿನದ ಬೇಡಿಕೆಯಾಗಿದ್ದ ತಾಯಿ-ಮಕ್ಕಳ ಆಸ್ಪತ್ರೆೆಯು ಕೂಡ ಹೈಟೆಕ್ ಸೌಲಭ್ಯ, ವೈದ್ಯ ಸಿಬ್ಬಂದಿ ಒಳಗೊಂಡಂತೆ ಸಿದ್ಧಗೊಂಡಿದೆ. ಎಲ್ಲಾಾ ಸಿದ್ಧತೆಯೂ ಪೂರ್ಣಗೊಂಡಿದೆ. ಸೆ.27 ರಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಿಯಾಂಕ್ ಖರ್ಗೆ ಉದ್ಘಾಾಟಿಸುವರು.
ಜೊತೆಗೆ ತಾ.ಪಂ.ನ ನೂತನ ಕಟ್ಟಡ ಉದ್ಘಾಾಟನೆಗೊಳ್ಳಲಿದೆ. ಸರಕಾರಿ ಪ.ಪೂ.ಕಾಲೇಜು ಕಟ್ಟಡ, ಸರಕಾರಿ ಮಹಾವಿದ್ಯಾಾಲಯದ ಕಟ್ಟಡ, ಶಿವಶರಣೆ ಅಕ್ಕಮಹಾದೇವಿ ಮಹಿಳಾ ಸ್ನಾಾತಕೋತ್ತರ ಕೇಂದ್ರದ ವಸತಿ ನಿಲಯ, ಜಿಟಿಟಿಸಿ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣಕ್ಕೆೆ ಶಂಕುಸ್ಥಾಾಪನೆ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾಾ ಆರ್ಸಿಎಚ್ ಅಧಿಕಾರಿ ಡಾ.ನಂದಿತಾ, ಸಿಎಂಓ ಡಾ.ಸುರೇಶಗೌಡ, ತಾಯಿ-ಮಕ್ಕಳ ಆಸ್ಪತ್ರೆೆಯ ಮುಖ್ಯ ಆಡಳಿತಾಧಿಕಾರಿ ಡಾ.ನಾಗರಾಜ ಕಾಟ್ವಾಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ, ಐಎಂಎ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ರೇಣುಕಾ ಮಲ್ಟಿಿಸ್ಪೆೆಷಾಲಿಟಿ ಆಸ್ಪತ್ರೆೆಯ ಮುಖ್ಯಸ್ಥ ಡಾ.ವೀರಭದ್ರಗೌಡ, ಜಿಲ್ಲಾಾ ಕ್ಷಯರೋಗ ಅಧಿಕಾರಿ ಡಾ.ಶಾಕೀರ್, ವೈದ್ಯರಾದ ಡಾ.ಶಕುಂತಲಾ ಪಾಟೀಲ್, ಡಾ.ಕಾವೇರಿ ಶಾವಿ, ಡಾ.ಕೋನಿಕಾ ಕಾಟ್ವಾಾ, ಡಾ.ವಿದ್ಯಾಾರಾಣಿ, ಡಾ.ಪುಷ್ಪಲತಾ, ಜಿ.ಪಂ.ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಮುಖಂಡ ಆರ್.ಸಿ.ಪಾಟೀಲ್ ಉಪಸ್ಥಿಿತರಿದ್ದರು.
28 ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ:
ನಗರದ ಪಿಡಬ್ಲ್ಯುಡಿಕ್ಯಾಾಂಪಿನ ಮಸ್ಕಿಿ ರಸ್ತೆೆ ಮಾರ್ಗದಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆೆ ಆವರಣದಲ್ಲಿ ಸೆ.28 ರಂದು ರಾಯಚೂರಿನ ರಿಮ್ಸ್, ತಾಲೂಕಾಡಳಿತ, ತಾಪಂ, ನಗರಸಭೆ, ನಗರಾಭಿವೃದ್ಧಿಿ ಪ್ರಾಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಾಶ್ರಯದಲ್ಲಿ ಆರೋಗ್ಯ ದಸರಾ ಹಿನ್ನೆೆಲೆಯಲ್ಲಿ ಬೆಳಿಗ್ಗೆೆ 9.30 ಕ್ಕೆೆ ಆರೋಗ್ಯ ಇಲಾಖೆ, ರಿಮ್ಸ್, ಐಎಂಎ, ಬಾದರ್ಲಿ ಬಸನಗೌಡ ಟ್ರಸ್ಟ್ ಮತ್ತು ಅನ್ನದಾನೇಶ್ವರ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಾಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಿಕೊಳ್ಳಲಾಗಿದೆ.
ಶಿಬಿರದಲ್ಲಿ ಮುಖ್ಯವಾಗಿ ಕ್ಯಾಾನ್ಸರ್, ಹೃದಯ ತಪಾಸಣೆ, ಕರುಳು ತಪಾಸಣೆ, ಮಕ್ಕಳ ತಪಾಸಣೆ, ಚರ್ಮ ತಪಾಸಣೆ ಸೇರಿದಂತೆ ವಿವಿಧ ರೋಗಗಳ ತಪಾಸಣೆಯನ್ನು ನುರಿತ ತಜ್ಞ ವೈದ್ಯರು, ರಾಯಚೂರಿನ ಓಪೆಕ್ ಆಸ್ಪತ್ರೆೆ ವೈದ್ಯರು ಕೈಗೊಳ್ಳಲಿದ್ದಾಾರೆ. ಜತೆಗೆ ಶ್ರೀ ಅನ್ನದಾನೇಶ್ವರ ರಕ್ತ ಕೇಂದ್ರದಿಂದ ರಕ್ತದಾನ ಶಿಬಿರವು ಆಯೋಜಿಸಲಾಗಿದೆ. ಇದರ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಶಾಸಕ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಮನವಿ ಮಾಡಿದರು.
ಕಾಲ್ನಡಿಗೆ ಜಾಥಾ:
ಸೆ-28 ರಂದು ಬೆಳಿಗ್ಗೆೆ 6.30 ಗಂಟೆಗೆ ನಮ್ಮ ನಡೆ-ಆರೋಗ್ಯದ ಕಡೆ ಕಾಲ್ನಡಿಗೆ ಜಾಗೃತಿ ಜಾಥಾ ಮಿನಿವಿಧಾನಸೌಧದಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಹಳೆಬಜಾರ್ ರಸ್ತೆೆ, ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತದ ಮೂಲಕ ಆರ್ಜಿಎಂ ಶಾಲಾ ಮೈದಾನಕ್ಕೆೆ ಬಂದು ಮುಕ್ತಾಾಯವಾಗಲಿದೆ. ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಚಿವರಾದ ದಿನೇಶ ಗುಂಡೂರಾವ, ಪ್ರಿಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್ ಭಾಗಿ 27 ರಂದು ತಾಯಿ – ಮಕ್ಕಳ ಆಸ್ಪತ್ರೆೆ ಉದ್ಘಾಾಟನೆ, ಜಿಲ್ಲಾಾಸ್ಪತ್ರೆೆ ನಿರ್ಮಾಣಕ್ಕೆೆ ಭೂಮಿ ಪೂಜೆ – ಬಾದರ್ಲಿ
