ಸುದ್ದಿಮೂಲ ವಾರ್ತೆ ಹೊಸಪೇಟೆ , ಜ.06:
ವಿಜಯನಗರ ಸಾಮ್ರಾಾಜ್ಯವಾಗಿದ್ದ ವಿಶ್ವ ಪರಂಪರೆ ಪಟ್ಟಿಿಯಲ್ಲಿ ರುವ ಹಂಪಿಗೆ ಬೇಕಾಗುವಂತಹ ಎಲ್ಲಾ ಯೋಜನೆಗಳನ್ನು ಅನುಷ್ಠಾಾನಗೊಳಿ ಸಲು ಕೇಂದ್ರ ಸರ್ಕಾರ ಸಿದ್ಧವಿದೆ ಆದರ ಜೊತೆಗೆ ರಾಜ್ಯ ಸರ್ಕಾರದ ಸಹಭಾಗಿ ತ್ವದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಗಜೇಂದ್ರ ಸಿಂಗ್ ಶಿಖಾವತ್ ತಿಳಿಸಿದರು
ಅವರು ಹಂಪಿ ಹೆರಿಟೇಜ್ ಹೋಟೆಲ್ನಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾದ ಗವಿಯಪ್ಪನವರು ಏರ್ಪಡಿಸಿದ್ದ ವಿಶೇಷ ಹಂಪಿ ಅಭಿವೃದ್ಧಿಿ ಕುರಿತಾದ ಪಕ್ಷಿ ನೋಟ ಉದ್ಘಾಾಟಿಸಿ ಮಾತನಾಡಿದ ಅವರು ಹಂಪಿಯು ಧಾರ್ಮಿಕ ಹಾಗೂ ಪ್ರವಾಸೋದ್ಯಮದ ಸಂಬಂಧದಲ್ಲಿ ಮೂಲ ಅಸ್ತಿಿತ್ವವನ್ನು ಉಳಿಸಿಕೊಂಡು ಅಭಿವೃದ್ಧಿಿ ಕೈಗೊಳ್ಳಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚುನಾಯಿತ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿದ್ದು ಆ ಸಮಿತಿಯು ಪೂರಕ ಅಂಶ ಪಟ್ಟಿಿ ಮಾಡಿ ರಾಜ್ಯಸರ್ಕಾರದ ಪ್ರಸ್ತಾಾವನೆಯೂ ಅನುಮೋದನೆಗೊಂಡಲ್ಲಿ ಹಂಪಿಯ ಅಭಿವೃದ್ಧಿಿ ಸಾಕಾರಗೊಳ್ಳುವ ಯೋಜನೆಗಳನ್ನು ಅನುಷ್ಠಾಾನಗೊಳಿಸಲು ತಾವು ಸಿದ್ಧವಿರುವುದಾಗಿ ಹೇಳಿದರು .
ಈ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರ ಹೊಸಪೇಟೆ ಹಂಪಿ ಕುರಿತಾಗಿ ಬೇಕಾಗುವಂತಹ ಮೂಲಭೂತ ಅವಶ್ಯಕತೆಗ ಳನ್ನು ಪೋರೈಸಲು ಶಾಸಕರು ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕವಿತಾ ಮನ್ನಿಿಕೇರಿ ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ನೋಂಗ್ಜೈ ಮೊಹಮ್ಮದ್ ಅಲಿ ಅಕ್ರಮ್ ಶಾ, ಸಹಾಯಕ ಆಯುಕ್ತ ವಿವೇಕಾನಂದ ಹಾಗೂ ತಹಶೀಲ್ದಾಾರ್ ಶ್ರುತಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಪ್ರವಾಸೋದ್ಯಮದ ಅಧಿಕಾರಿಗಳು ಸಂಬಂಧಪಟ್ಟಂತ ಹಿರಿಯರು ಅಧಿಕಾರಿಗಳು ಉಪಸ್ಥಿಿತರಿದ್ದರು.
ಹಂಪಿ ಅಭಿವೃದ್ಧಿಿ ಯೋಜನೆ ಅನುಷ್ಟಾಾನಕ್ಕೆೆ ರಾಜ್ಯ ಸರ್ಕಾರದ ಸಹಭಾಗಿತ್ವ ಅವಶ್ಯ : ಸಚಿವ ಗಜೇಂದ್ರ ಸಿಂಗ್ ಶಿಖಾ ವತ್

