ಸುದ್ದಿಮೂಲ ವಾರ್ತೆ ಬೀದರ್, ನ.17:
ಜಿಲ್ಲೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡಗಳು ಆಗದ ರೀತಿಯಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ತಿಳಿಸಿದರು.
ಸೋಮವಾರ ಬೀದರ ಕಾರ್ಯ ಮತ್ತು ಪಾಲನೆ ವಿಭಾಗೀಯ ಕಛೇರಿ ಆವರಣದಲ್ಲಿ ಹಮ್ಮಿಿಕೊಂಡಿದ್ದ ಗುಲಬರ್ಗಾ ವಿದ್ಯುಚ್ಛಕ್ತಿಿ ಸರಬರಾಜು ಕಂಪನಿ ನಿಯಮಿತ ಬೀದರ ಕಾರ್ಯ ಮತ್ತು ಪಾಲನಾ ವಿಭಾಗ ಕಛೇರಿಯ ನೂತನ ಕಟ್ಟಡದ ಶಂಕುಸ್ಥಾಾಪನೆ ಹಾಗೂ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡುತ್ತಾಾ, ಬೀರ್ದ ಜಿಲ್ಲೆಯಲ್ಲಿ ಗುಲ್ಬರ್ಗಾ ವಿದ್ಯುಚ್ಛಕ್ತಿಿ ಸರಬರಾಜು ಕಂಪನಿ ನಿಯಮಿತ (ಜೇಸ್ಕಾಾಂ) ಬೀದರ ವಿಭಾಗೀಯ ಹಳೆಯ ಕಚೇರಿ ಶಿಥಿಲಾವಸ್ಥೆೆಗೆ ತಲುಪಿರುವುದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳಿಗೆ ಉಂಟಾಗುತ್ತಿಿದ್ದ ಅನಾನುಕೂಲಗಳನ್ನು ನಿವಾರಿಸಲು ಸರ್ಕಾರ 10 ಕೋಟಿ ರೂ. ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣಕ್ಕೆೆ ಕಾಮಗಾರಿಯ ಶಂಕುಸ್ಥಾಾಪನೆಯನ್ನು ಮಾಡಲಾಗಿದೆ. ಈ ಕಾಮಗಾರಿಯನ್ನು ಕಾಲಮಿತಿಯಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣವಾಗಬೇಕೆಂದರು.
ರೈತರಿಗೆ ಈಗಾಗಲೇ 7 ಗಂಟೆ ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿಿದೆ. ಜಿಲ್ಲೆಯಲ್ಲಿ ಬೆಳೆ ಬೆಳೆಯದ ಪ್ರದೇಶದಲ್ಲಿ ಸೌರವಿದ್ಯುತ್ ಸ್ಥಾಾಪಿಸಲು ಯೋಜನೆ ಹಾಕಿಕೊಂಡಿದ್ದು ಜಿಲ್ಲೆಯಲ್ಲಿ ಇನ್ನು ಹೆಚ್ಚಿಿನ ಸೌರ ವಿದ್ಯುತ್ ಉತ್ಪಾಾದಿಸಿ ಬೇರೆ ರಾಜ್ಯಗಳಿಗೆ ರ್ತು ಮಾಡುವ ಉದ್ದೇಶವಿದೆ ಎಂದರು.
ಜೇಸ್ಕಾಾಂನಲ್ಲಿ ಈಗಾಗಲೇ ಸಿಬ್ಬಂದಿಗಳ ಕೊರತೆ ಇದ್ದು, ಅವುಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಇನ್ನೂ 15 ವಿದ್ಯುತ್ ಕೇಂದ್ರಗಳನ್ನು ಸ್ಥಾಾಪಿಸಲು ಈಗಾಗಲೇ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿಿಗೆ ಕಾಮಗಾರಿಗೆ ಎಲ್ಲರೂ ಒಟ್ಟಾಾಗಿ ಕಾರ್ಯನಿರ್ವಹಿಸಬೇಕೆಂದರು.
ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಾಳೆ ಅವರು ಮಾತನಾಡಿ, ಟ್ರಾಾನ್ಸಾರಂ ಇರುವಂತೆ ಕಂಬಗಳಿಗೆ ತಂತಿ ಬೇಲಿ ಹಾಕುವ ಕಾರ್ಯ ಹೆಚ್ಚಿಿನ ರೀತಿಯಲ್ಲಿ ಆಗಬೇಕಾಗಿದೆ. ರೈತರಿಗೆ ಇನ್ನೂ ಹೆಚ್ಚಿಿನ ವಿದ್ಯುತ್ ನೀಡಿ ರೈತರಿಗೆ ಸಹಕಾರ ಸಿಗುವಂತಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಿ ಪ್ರಾಾಧಿಕಾರ, ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಭೀಮರಾಯನಗುಡಿ ಕಲಬುರಗಿ ಅಧ್ಯಕ್ಷರಾದ ಬಾಬು ಹೊನ್ನನಾಯಕ, ಗುಲಬರ್ಗಾ ವಿದ್ಯುಚ್ಚಕ್ತಿಿ ಸರಬರಾಜು ಕಂಪನಿ ನಿಯಮಿತ ಕಲಬುರಗಿ ಅಧ್ಯಕ್ಷರಾದ ಪ್ರವೀಣ ಪಾಟೀಲ ಹರವಾಳ, ಬಿದರ ಮಹಾನಗರ ಪಾಲಿಕೆ ಅಧ್ಯಕ್ಷರಾದ ಮಹಮ್ಮದ ಗೌಸ್, ಅಧೀಕ್ಷಕ ಅಭಿಯಂತರರು ವೃತ್ತ ಕಚೇರಿ ಗುವಿಸಕಂನಿ ಬೀದರನ ವೀರಭದ್ರಪ್ಪಾಾ ಸಾಲಿಮನಿ, ಗುವಿಸಕಂ ಬೀದರನ ಕಾರ್ಯಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಮೇಶ ಪಾಟೀಲ, ಜೇಸ್ಕಾಾಂ ವೃತ್ತ ಕಚೇರಿ ಸಹಾಯಕ ಕಾರ್ಯಪಾಲಕ ಅಭಿಯಂತತರಾದ ಆನಂದ ಎಮ್.ಪಾಂಚಾಳ ವಿದ್ಯುತ್ ಗುತ್ತಿಿಗೆದಾರರು ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ವಿದ್ಯುತ್ ಅವಘಡ ಆಗದ ರೀತಿಯಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಿ-ಸಚಿವ ಈಶ್ವರ ಬಿ.ಖಂಡ್ರೆೆ

